ಬೀದರನಲ್ಲಿ ಮತ್ತೆ 4 ಪಾಸಿಟಿವ್ ಪ್ರಕರಣ ಪತ್ತೆ.
ಬೀದರನಲ್ಲಿ ಮತ್ತೆ 4 ಪಾಸಿಟಿವ್ ಪ್ರಕರಣ ಪತ್ತೆ.
ಮುಂಬೈ ಇಂದ ರಾಜ್ಯಕ್ಕೆ ಬಂದ ಕೊರೊನಾ ಮಹಾಮಾರಿ – 60ಕ್ಕೂ ಅಧಿಕ ಜನರ ಮೇಲೆ ನಿಗಾ
ಬೀದರಃ ಜಿಲ್ಲೆಯಲ್ಲಿ ಗುರುವಾರ ಮತ್ತ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದ್ದು ಮೂರು ಪ್ರಕರಣಗಳು ಬೀದರ ನಗರದಾಗಿದ್ದು, ಇನ್ನೂಂದು ಹುಮನಾಬಾದ ತಾಲೂಕಿನ ಹುಣಸಗೇರಾ ಗ್ರಾಮದ ಮಹಿಳೆಗೆ ಪಾಸಿಟಿವ್ ಬಂದಿದೆ.
ಮಹಾರಾಷ್ಟ್ರದ ಧಾರಾವಿ ಸಮಿಪದ ಸಾತರಾಸ್ತಾ ಹತ್ತಿರ ಗುಡಿಸಲ ಮಾಡಿಕೊಂಡಿದ ದಂಪತಿ ಪೈಕಿ ಪತ್ನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮೇ.03 ರಂದು ಕಾಲ್ನಡಿಗೆಯ ಮೂಲಕ ಗಂಡ ಹೆಂಡತಿ ಮುಂಬೈನಿಂದ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹುಣಸಗೇರಾ ಗ್ರಾಮಕ್ಕೆ ಮೇ.08ಕ್ಕೆ ಬಂದಿದ್ದಾರೆ. ರಸ್ತೆ ಮಧ್ಯದಲ್ಲಿ ಇತರೆ ವಾಹನಗಳ ಮೂಲಕ ಕೂಡ ಪ್ರಯಾಣ ಮಾಡಿದ್ದಾರೆ. ಗ್ರಾಮಕ್ಕೆ ಬಂದ ನಂತರ ಒಂದು ರಾತ್ರಿ ಗ್ರಾಮದಲ್ಲಿ ಕಳೆದಿದ್ದಾರೆ. ಗ್ರಾಮಸ್ಥರು ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೆ.9 ರಂದು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದಾರೆ. ಮುಂಬೈ ನಿಂದ ಬಂದಿರುವ ಕಾರಣ ಅವರ ಮಾದರಿ ಪಡೆದು ಲ್ಯಾಬಿಗೆ ಕಳುಹಿಸಿದ್ದು, ಇದೀಗ ಮಹಿಳೆಗೆ ಸೋಂಕಿರುವುದು ಪತ್ತೆಯಾಗಿದೆ.

ಆಸ್ಪತ್ರೆಯ ವೈದ್ಯರು 14 ದಿನಗಳ ಕಾಲ ಶಾಲೆಯಲ್ಲಿ ಪ್ರತ್ಯೇಕವಾಗಿ ಇರಲು ಸಲಹೆ ನೀಡಿದ ಹಿನ್ನೆಲೆಯಲ್ಲಿ ಮೊದಲಿಗೆ ಹುಣಸಗೇರಾ ಗ್ರಾಮದ ಶಾಲೆಯಲ್ಲಿ ಉಳಿದಕೊಂಡ ದಂಪತಿಗಳನ್ನು ಸರ್ಕಾರದ ಹೊಸ ಮಾರ್ಗ ಸೂಚಿ ಪ್ರಕಾರ ವಾಸ್ತವ್ಯ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಹಳ್ಳಿಖೇಡ ಕೆ ಗ್ರಾಮದ ವಸತಿ ಶಾಲೆಗೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಟ್ಟಣದ ಖಾಸಗಿ ಶಾಲಾ ಬಸ್ ಮೂಲಕ ಒಂದೇ ಬಸ್ಸಿನಲ್ಲಿ 22 ಜನರನ್ನು ವಸತಿ ಶಾಲೆಗೆ ಕರೆದುಕೊಂಡು ಹೋಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.
ದಂಪರತಿ ಕುಟುಂಬದ 14 ಜನ ಹಾಗೂ ಮನೆಯ ಪಕ್ಕದ ಸಂಬಂಧಿಕರಾದ 22 ಜನರನ್ನು ಕರೆದುಕೊಂಡು ಹಳ್ಳಿಖೇಡ(ಕೆ) ವಸತಿ ಶಾಲೆಗೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಬಸ್ ನಲ್ಲಿ ಪ್ರಯಾಣಿಸಿದ ಕನಕಟ್ಟ ಗ್ರಾಮದ 18 ಜನ, ಹುಣಸನಾಳ ಗ್ರಾಮದ 1, ಹುಣಸಗೇರಾ ಗ್ರಾಮದ 3 ಜನರನ್ನೂ ಹಾಗೂ ಚಾಲಕನಿಗೂ ಕೂಡ ವಸತಿ ಶಾಲೆಯಲ್ಲಿ ಇರಿಸಲಾಗಿದೆ. ಸದ್ಯ ದಂಪತಿಗಳನ್ನು ಬೀದರ ಬ್ರೀಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, 8 ಜನ ಪ್ರಾಥಮಿಕ ಹಾಗೂ 54 ಜನ ಎರಡನೇ ಸಂಪರ್ಕದ ವ್ಯಕಿಗಳು ಎಂದು ಗುರುತಿಸಲಾಗಿದೆ. ಎಲ್ಲಾ ಜನರ ಗಂಟಲು ಮಾದರಿ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ.
Date: 14-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















