ಬೀದರನಲ್ಲಿ ಮತ್ತೆ 11 ಕೊರೊನಾ ಪಾಸಿಟಿವ್ ಪತ್ತೆ.
ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಜಾಗೃತ ನಡೆ ಹಿನ್ನೆಲೆ ಪತ್ತೆ.
ಬೀದರನಲ್ಲಿ ಮತ್ತೆ 11 ಕೊರೊನಾ ಪಾಸಿಟಿವ್ ಪತ್ತೆ.
ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಜಾಗೃತ ನಡೆ ಹಿನ್ನೆಲೆ ಪತ್ತೆ.
ಬೀದರಃ ಜಿಲ್ಲಾಡಳಿತದ ಆದೇಶದಂತೆ ಆರೋಗ್ಯ ಇಲಾಖೆ ಕಳೆದ ಮೂರು ದಿನಗಳಿಂದ ಬೀದರ ಸೀಲ್ ಡೌನ್ ಏರಿಯಾದಲ್ಲಿ ನಡೆಸಿದ ಆರೋಗ್ಯ ತಪಾಸಣೆ ಕಾರ್ಯ ಹಿನ್ನೆಲೆಯಲ್ಲಿ ಬುಧವಾರ ಮತ್ತೆ 11 ಕೊರೊನಾ ಪಾಸಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.
ಹೌದು ಒಂದೇ ಬಾರಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದ ಪ್ರದೇಶಗಳಲ್ಲಿ ಆರೋಗ್ಯ ತಪಾಸಣೆ ನಡೆಸುವುದು ಅಗತ್ಯ ಎಂಬುವುದು ತಿಳಿದ ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ, ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚೆನಡೆಸಿ ಅನುಮತಿ ಪಡೆದು ದಿನಕ್ಕೆ ಒಂದು ಸಾವಿರ ಸ್ಯಾಂಪಲ್ ಕಲೆಕ್ಷನ್ ಮಾಡಲು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ. ಅಲ್ಲದೆ ಐದು ದಿನಗಳಲ್ಲಿ ಶಂಕಿತ ಐದು ಸಾವಿರ ಜನರ ಮಾದರಿ ಪಡೆಯುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವೈದ್ಯರು ಕೂಡ ಜಿಲ್ಲಾಡಳಿತದ ಉದ್ದೇಶ ಅರಿತುಕೊಂಡು ನಿತ್ಯ ಸಾವಿರ ಸ್ಯಾಂಪಲ್ ಗಳನ್ನು ಕಲೆಕ್ಷನ್ ಮಾಡಿ ಲ್ಯಾಬಿಗೆ ಕಳುಹಿಸುತ್ತಿದ್ದಾರೆ. ಈಗಾಗಲೇ 3,500 ಜನರ ಮಾದರಿ ಪಡೆದು ಪರೀಕ್ಷೆಗೆ ಕಳಿಹಿಸಲಾಗಿದ್ದು, ಈ ಪೈಕಿ 2500 ಸ್ಯಾಂಪಲ್ ಪರೀಕ್ಷೆ ನಡೆದಿದ್ದು, ಈ ಪೈಕಿ 11 ಪ್ರಕರಣಗಳು ಖಚಿತ ಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾಢಳಿತದ ಮುಂಜಾಗೃತೆಃ ಜಿಲ್ಲೆಯಲ್ಲಿ ಒಂದೇ ಬಾರಿಗೆ ಹೆಚ್ಚಿನ ಪ್ರಕರಣಗಳು ಪತ್ತೆಯಾದ ದಿನದಿಂದ ಈ ವರೆಗೆ 6,792 ಜನರ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. 4,841 ಜನರ ವರದಿ ನೆಗೆಟಿವ್ ಬಂಧಿದೆ.ಈಗಾಗಲೇ ಆಸ್ಪತ್ರೆಯಿಂಧ 14 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಾರ್ಥಮಿಕ ಸಂಪರ್ಕ ಹೊಂದಿದ 776 ಪೈಕಿ 645 ಜನರ ವರದಿ ನೆಗೆಟಿವ್ ಬಂಧಿದೆ. ಎರಡನೇ ಹಂತದ ಸಂಪರ್ಕದಲ್ಲಿದ 2,349 ಜನರ ಪೈಕಿ 1,858 ಜನರ ವರದಿ ನೆಗೆಟಿವ್ ಬಂಧಿದೆ. ಇನ್ನೂ 1,921 ಜನರ ವರದಿ ಬರಬೇಕಿದೆ. ಭಾರಿ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೀದರ ನಗರದ ವಿವಿಧಡೆ ಆರೋಗ್ಯ ತಪಾಸಣೆ ನಡೆಸುವ ಉದ್ದೇಶ ಜಿಲ್ಲಾಡಳಿ ಹೊಂದಿದೆ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಾರ್ಯಕ್ಕೆ ಮೆಚ್ಚಿಗೆ: ಸೋಂಕಿತ್ತರು ಪತ್ತೆಯಾದ ಪ್ರದೇಶದಲ್ಲಿನ ಜನರ ಆರೋಗ್ಯ ತಪಾಸಣೆಗೆ ಮುಂದಾದ ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಅವರ ಕಾರ್ಯಕ್ಕೆ ವಿವಿಧ ಸಂಘ ಸಂಸ್ಥೆಗಳು ಮೆಚ್ಚಿಗೆ ವ್ಯಕ್ತಪಡಿಸಿವೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಪ್ರದೇಶಗಳಿಗೆ ಹರಡದಂತೆ ಎಚ್ಚರೆಕೆ ವಹಿಸಿರುವುದು ಉತ್ತಮ ನಡೆಯಾಗಿದೆ. ಅಲ್ಲದೇ ಜಿಲ್ಲಾಧಿಕಾರಿಗಳು ನಗರದ ವಿವಿಧಡೆ ಕೂಡ ಸಮರೋಪಾದಿಯಲ್ಲಿ ಶಂಕಿತರ, ಸೋಂಕಿತ್ತರ ಸಂಚಾರ ನಡೆದ ಪ್ರದೇಶಗಳಲ್ಲಿ ಕೂಡ ಆರೋಗ್ಯ ತಪಾಸಣೆಗೆ ಮುಂದಾದರೆ ಜಿಲ್ಲೆಯಲ್ಲಿ ಕೊರೊನಾಗೆ ಅಂತ್ಯ ಹಾಡಬಹುದಾಗಿದೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತಪಡಿಸುತ್ತಿದ್ದಾರೆ.
Date: 13-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…