Home ನಿಮ್ಮ ಜಿಲ್ಲೆ ಬೀದರ ಬಸವಣ್ಣನ ಕರ್ಮಭೂಮಿಯಿಂದ ಕಾವಿಧಾರಿಗೆ ಸಿಗುತ್ತ MP ಟಿಕೆಟ್..?

ಬಸವಣ್ಣನ ಕರ್ಮಭೂಮಿಯಿಂದ ಕಾವಿಧಾರಿಗೆ ಸಿಗುತ್ತ MP ಟಿಕೆಟ್..?

ಲೋಕಸಭಾ ಅಖಾಡಾ- ರಾಜೇಶ್ವರ ಶಿವಾಚಾರ್ಯರ ಹೆಸರು ಪ್ರಸಾಸ್ತಾಪ..!

ಬಸವಣ್ಣನ ಕರ್ಮಭೂಮಿಯಿಂದ ಕಾವಿಧಾರಿಗೆ ಸಿಗುತ್ತ ಎಂಪಿ ಟಿಕೆಟ್..?
ಲೋಕಸಭಾ ಅಖಾಡಾ- ರಾಜೇಶ್ವರ ಶಿವಾಚಾರ್ಯರ ಹೆಸರು ಪ್ರಸಾಸ್ತಾಪ..!

ಬೀದರ: ಮುಂದಿನ ದಿನಗಳಲ್ಲಿ ನಡೆಯಲ್ಲಿರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಪ್ರಭಾವಿ ಮಠಾಧೀಶರೊಬ್ಬರು ಹೆಸರು ಕೇಳಿಬರುತ್ತಿದ್ದು, ವಿವಿಧ ಸರ್ವೆಗಳಲ್ಲಿ ಕೂಡ ಅವರ ಹೆಸರು ಪ್ರಾಸ್ತಾಪ ಮಾಡಲಾಗುತ್ತಿದೆ.
ತಡೋಳ ಗುರುಕುಲ ಆಶ್ರಮ, ಮಹೇಕರ, ಡೊಣಗಾಪುರ ಶ್ರೀಗಳು ಎಂದು ಗುರುತಿಸಿಕೊಂಡಿರುವ ರಾಜೇಶ್ವರ ಶಿವಚಾರ್ಯರು ಈ ಭಾರಿಯ ಲೋಕ ಸಭಾ ಚುನಾವಣಾ ಅಖಾಡಕ್ಕೆ ಇಳಿರುವ ಸಾಧ್ಯತೆಗಳು ಕಂಡು ಬರುತ್ತಿವೆ. ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ ಕರ್ಮ ಭೂಮಿಯಿಂದ ಕಾವಿಧಾರಿಗೆ ಬಿಜೆಪಿ ಪಕ್ಷದ ವರಿಷ್ಠರು ಟಿಕೆಟ್ ನೀಡಬಹುದು ಎನ್ನಲಾಗುತ್ತಿದೆ. ನೆರೆ ಮಹಾರಾಷ್ಟರದ ಸೋಲಾಪುರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಜಯಸಿದ್ದವೀರ ಸ್ವಾಮಿಗಳು ಅಖಾಡಕ್ಕೆ ಇಳಿದು ಜಯ ಸಾಧಿಸಿದರು. ಅದೇ ಮಾದರಿಯಲ್ಲಿ ಇಲ್ಲಿಯೂ ಕೂಡ ನಡೆಯಬಹುದು ಎನ್ನಲಾಗುತ್ತಿದೆ.
ರಾಜೇಶ್ವರ ಶಿವಚಾರ್ಯರು ಅನೇಕ ರೈತಪರ ಕಾರ್ಯಗಳು ಮಾಡಿದ್ದಾರೆ. ಖುದ್ದು ಕೃಷಿ ಮಾಡುವ ಮೂಲಕ ಹೊಸ ಹೊಸ ಯೋಜನೆಗಳು ರೈತರಿಗೆ ತಿಳಿಸುವ, ಜಾಗೃತಿ ಮೂಡಿಸುವ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ. ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರನ್ನು ಕರೆದು ಕೃಷಿ ಕ್ರಾಂತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಯೊಜೆನಗಳು ಜಾರಿ ಮಾಡುವಂತೆ ಬೇಡಿಕೆಗಳು, ಸಲಹೆಗಳು ಕೂಡ ನೀಡಿದರು. ಇಂದಿಗೂ ಕೂಡ ಶ್ರೀಗಳು ಕೃಷಿಯಲ್ಲಿ ಹೊಸ ಪ್ರಯೋಗಗಳು ನಡೆಸುತ್ತಲೇ ಇದ್ದಾರೆ. ಅಲ್ಲದೆ, ಶ್ರೀಗಳು ಆರ್‌ಎಸ್‌ಎಸ್ ಮೂಲದಿಂದ ಬಂದಿದ್ದು, ದೊಡ್ಡಮಟ್ಟದಲ್ಲಿ ಪ್ರಭಾವ ಹೊಂದಿದ್ದಾರೆ. ನೇರ ನುಡಿಗಳು ನುಡಿಯುವ ಕಾರಣ ಅನೇಕ ಜನರು ಇವರನ್ನು ಅಪಾರವಾಗಿ ನಂಬುತ್ತಾರೆ.
ಬೀದರ ಜಿಲ್ಲೆಯ ಬಿಜೆಪಿ ಪ್ರಮುಖರು ಕೂಡ ಶ್ರೀಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದು, ಚುನಾವಣಾ ಅಖಾಡಕ್ಕೆ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಇದೇ. ಫೆ.24ರಂದು ಶ್ರೀಗಳ ಜನ್ಮದಿನ ಕಾರ್ಯಕ್ರಮ ನಡೆಯಲ್ಲಿದ್ದು, ಶ್ರೀಗಳು ಈ ಬಗ್ಗೆ ಆಲೋಚನೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ತಿಳಿಸಿದ್ದಾರೆ.

Date: 12-02-2024 : Time: 9:50am

Main

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…