Home ಸುದ್ದಿಗಳು ರಾಜ್ಯ ಸುದ್ದಿ ಪ್ರೊಬೆಷನರಿ ಪಿಎಸ್‌ಐ ನೇಣಿಗೆ ಶರಣು..

ಪ್ರೊಬೆಷನರಿ ಪಿಎಸ್‌ಐ ನೇಣಿಗೆ ಶರಣು..

ಬಸವಕಲ್ಯಾಣ: ಬಸವಕಲ್ಯಾಣ ತಾಲೂಕಿನ ಅಬಕಾರಿ ಇಲಾಖೆಯ ಪ್ರೊಬೆಷನರಿ ಪಿಎಸ್‌ಐ ಭಾನುವಾರ ನೇಣಿಗೆ ಶರಣಾದ ಘಟನೆ ಸಂಭವಿಸಿದ್ದು, ಅನೇಕ ಅನುಮಾನಗಳು ಹುಟ್ಟುವಂತೆ ಮಾಡಿದೆ.
ಕಲಬುರಗಿ ಜಿಲ್ಲೆಯ ಕಡಗಂಚಿ ಗ್ರಾಮದ ರೇಖಾ ಕರಣಕುಮಾರ ಕೋರಿ ನೇಣು ಬಿಗಿದುಕೊಂಡು ಮೃತಪಟ್ಟ ಮಹಿಳಾ ಅಧಿಕಾರಿ. ಕಲ್ಯಾಣ ನಗರದ ಶಿವಪೂರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡ ಇವರ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ರೇಖಾ ಅವರಿ ಈ ಹಿಂದೆ ಪೊಲೀಸ್ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಕಳೆದ ಕೆಲ ತಿಂಗಳಿAದ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ ಅವರು, ನಿನ್ನೆ ರಾತ್ರಿ ನೈಟ್ ರೌಂಟ್ ಕೆಲಸ ಮಾಡಿದ್ದಾರೆ. ಇಬ್ಬರು ಗಂಡು ಮಕ್ಕಳು ಹೊಂದಿದ ಇವರಿಗೆ ಈ ಮಧ್ಯದಲ್ಲಿ ಏನಾಯಿತ್ತು ಎಂಬುವುದು ಯಾರಿಗೂ ತಿಳಿದುಬಂದಿಲ್ಲ. ಸಧ್ಯ ಕೌಟುಂಬಿಕ ಸಮಸ್ಯೆ ಇರಬಹುದು ಎಂದು ಹೇಳಲಾಗುತ್ತಿದೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…