Home ನಿಮ್ಮ ಜಿಲ್ಲೆ ಬೀದರ ಪ್ರಾಮಾಣಿಕತೆಯ ಸೇವೆ ಸದಾ ಜನಮಾನಸದಲ್ಲಿ ಉಳಿಯುತ್ತದೆ : ಶಾಸಕ ರಾಜಶೇಖರ ಪಾಟೀಲ

ಪ್ರಾಮಾಣಿಕತೆಯ ಸೇವೆ ಸದಾ ಜನಮಾನಸದಲ್ಲಿ ಉಳಿಯುತ್ತದೆ : ಶಾಸಕ ರಾಜಶೇಖರ ಪಾಟೀಲ

ಪ್ರಾಮಾಣಿಕತೆಯ ಸೇವೆ ಸದಾ ಜನಮಾನಸದಲ್ಲಿ ಉಳಿಯುತ್ತದೆ : ಶಾಸಕ ರಾಜಶೇಖರ ಪಾಟೀಲ

ಹುಮನಾಬಾದ: ಅರ್ಪಣಾ ಮನೋಭಾವ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಅಧಿಕಾರಿಗಳ ಸೇವೆ ಸದಾ ಜನಮಾನಸದಲ್ಲಿ ಉಳಿಯುತ್ತದೆ ಎಂದು ಶಾಸಕ ರಾಜಶೇಖರ ಪಾಟೀಲ

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಆಯೋಜಿಸಿದ ನೂತನ ಸಿಪಿಐ ಮಲ್ಲಿಕಾರ್ಜುನ ಯಾತನೂರ ಅವರ ಸ್ವಾಗತ ಹಾಗೂ ಬಸವಕಲ್ಯಾಣಕ್ಕೆ ವರ್ಗಾವಣೆಗೊಂಡಿರುವ ಸಿಪಿಐ ಜೆ.ಎಸ್ ನ್ಯಾಮೆಗೌಡರ್ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿ ಕೆಲಸ ನಿರ್ವಹಿಸು ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಿದ್ದೇನೆ. ಅಧಿಕಾರ ಯಾರಿಗೂ ಶಾಸ್ವತ ಅಲ್ಲ ಎಂಬುವುದು ತಿಳಿದು ಕೆಲಸ ಮಾಡುವಂತೆ ಸಲಹೆ ನೀಡಿದ್ದೇನೆ. ಅಧಿಕಾರ ಅವಧಿಯಲ್ಲಿ ಉತ್ತಮ ಕಾರ್ಯಮಾಡಿದರೆ ಜನರು ನೆನಪಿಸುತ್ತಾರೆ. ಸಾರ್ವಜನಿಕರ ಮಧ್ಯೆ ಉಳಿದು ಕೆಲಸ ಮಾಡಿ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಆಗಬೇಕು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಪಿಐ ಜೆ.ಎಸ್ ನ್ಯಾಮಗೌಡರ್, ಮೂರು ವರ್ಷಗಳ ಕಾಲ ಹುಮನಾಬಾದ ಉತ್ತಮ ಸೇವೆ ಸಲ್ಲಿಸಲು ಶಾಸಕ ರಾಜಶೇಖರ ಪಾಟೀಲ ಸೇರಿದಂತೆ ವೃತ್ತದ ಸಾರ್ವಜನಿಕರು ಉತ್ತಮ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ। ಚಂದ್ರಶೇಖರ ಪಾಟೀಲ, ತಹಶೀಲ್ದಾರ ನಾಗಯ್ಯಾ ಹಿರೇಮಠ, ಡಿವೈಎಸ್ಪಿ ಬಸವೇಶ್ವರ ಹಿರಾ, ಸಿಪಿಐ ಶರಣಬಸವೇಶ್ವರ ಭಜಂತ್ರಿ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್ಐ ರವಿಕುಮಾರ, ಮಹಾಂತೇಶ ಲುಂಬಿ, ಸಿಪಿಐ ಮಹೇಶ ಪಾಟೀಲ, ಪಿಎಸ್ಐ ಕಿರಣಕುಮಾರ, ಕೆ.ವೀರಾರೆಡ್ಡಿ, ಶಿವಕುಮಾರ ಚಟ್ಟನಳ್ಳಿ, ವಿನಾಯಕ ಯಾದಾವ, ರವಿ ಮಾಡಗಿ, ಜಗದೀಶ ಭಾವಿ, ಪ್ರಭುರಾವ ತಾಳಮಡಗಿ, ಸೋಮಯ್ಯಾ ಮಠಪತಿ, ಸುರೇಶ ಘಾಂಗರೆ, ಬಾಬುರಾವ ಪರಮಶೇಟ್ಟಿ, ಶಕೀಲ್ ಐ.ಎಸ್, ವಿಜಕುಮಾರ ಮೇಟಿ, ನವೀನ, ವೀರಪ್ಪ ಧೂಮನಸೂರ್, ಲಕ್ಷ್ಮಿಕಾಂತ ಹಿಂದೊಡ್ಡಿ ಸೇರಿದಂತೆ ಅನೇಕರು ಇದ್ದರು.

 

Date: 23-06-2020 www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…