Home ನಿಮ್ಮ ಜಿಲ್ಲೆ ಬೀದರ ಪಿಡಿಒ ಸಂಘದ ಪದಾಧಿಕಾರಿಗಳ ಆಯ್ಕೆ

ಪಿಡಿಒ ಸಂಘದ ಪದಾಧಿಕಾರಿಗಳ ಆಯ್ಕೆ

ಹುಮನಾಬಾದ: ಹುಮನಾಬಾದ ತಾಲೂಕು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷರಾಗಿ ಅರ್ಜುನ ಶಿಂಧೆ ಅವರು ನೇಮಕಗೊಂಡರು.

ಶಂಘದ ಜಿಲ್ಲಾ ಅಧ್ಯಕ್ಷರಾದ ಕಂಟೆಪ್ಪಾ ಜಿ ನಾಗಗೊಂಡ ನೇತೃತ್ವದಲ್ಲಿ ನಡರಸ ಸಭೆಯಲ್ಲಿ ತಾಲೂಕು ಅಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಹುಮನಾಬಾದ ತಾಲೂಕು ಸಂಘದ ಗೌರವಾಧ್ಯಕ್ಷರಾಗಿ ವಿಜಯಕುಮಾರ್ ಚಾಂಗ್ಲೇರಾ , ಉಪಾಧ್ಯಕ್ಷರಾಗಿ ಪೂರ್ಣಿಮಾ ಪಂಚಾಳ, ಗೌರವ ಸಲಹೆಗಾರರಾಗಿ ಮಹಾದೇವ ಹಾಗೂ ಸಂಗಪ್ಪ, ಪ್ರಧಾನ್ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಸಾಗರ, ಖಜಾಂಚಿ ಮಲ್ಲಪ್ಪ ಸೋನ್ನದ, ಸಂಘಟನಾ ಕಾರ್ಯದರ್ಶಿ ಜಗದೀಶ್ ಮಮದಾಪೂರ, ಸದಸ್ಯರಾಗಿ ಸಂಧ್ಯಾ, ವಿಜಯ ಲಕ್ಷ್ಮೀ, ಆನಂದ ಸಾವಳೆ, ರಾಜಕುಮಾರ ಬುಳ್ಳಾ ಆಯ್ಕೆ ಮಾಡಲಾಯಿತು.

ಕಲ್ಬುರ್ಗಿ ವಿಬಾಗದ ಉಪಾಧ್ಯಕ್ಷರಾದ ಶರದಕುಮಾರ ಅಭಿಮಾನ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೈಜಿನಾಥ ಫುಲೇ,ಜಿಲ್ಲಾ ಖಜಾಂಚಿ ಜಗಪ್ಪ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾದ ವಿಜುಶೀಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸವಿತಾ ಹೀರೆಮಠ, ಜೀಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿ ಸವಿತಾ ಭಯ್ಯಾ ಸೇರಿದಂತೆ ಅನೇಕರು ಇದ್ದರು.

 

Date: 15-02-2020

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…