Home ನಿಮ್ಮ ಜಿಲ್ಲೆ ಬೀದರ ನೈಲನ್ ಪ್ಲಾಸ್ಟಿಕ್ ಚೈನಿಸ್ ಮಾಂಜ ಮಾರಾಟ ಮಾಡಿದರೆ ಕಾನೂನು ಕ್ರಮ : ಡಿವೈಎಸ್ಪಿ ನಾಮೇಗೌಡರ

ನೈಲನ್ ಪ್ಲಾಸ್ಟಿಕ್ ಚೈನಿಸ್ ಮಾಂಜ ಮಾರಾಟ ಮಾಡಿದರೆ ಕಾನೂನು ಕ್ರಮ : ಡಿವೈಎಸ್ಪಿ ನಾಮೇಗೌಡರ

ಜನರ ಜೀವಕ್ಕೆ ಆಪತ್ತು ಆಗದ ದಾರ ಬಳಸಿ-ಕದ್ದು ಮುಚ್ಚಿ ಮಾರಾಟ ಮಾಡಿದರೆ ಮಾಹಿತಿ ನೀಡಿ

ನೈಲನ್ ಪ್ಲಾಸ್ಟಿಕ್ ಚೈನಿಸ್ ಮಾಂಜ ಮಾರಾಟ ಮಾಡಿದರೆ ಕಾನೂನು ಕ್ರಮ : ಡಿವೈಎಸ್ಪಿ ನಾಮೇಗೌಡರ
ಜನರ ಜೀವಕ್ಕೆ ಆಪತ್ತು ಆಗದ ದಾರ ಬಳಸಿ-ಕದ್ದು ಮುಚ್ಚಿ ಮಾರಾಟ ಮಾಡಿದರೆ ಮಾಹಿತಿ ನೀಡಿ

ಹುಮನಾಬಾದ: ಸಂಕ್ರಾಂತಿ ಹಬ್ಬದ ನಿಮಿತ್ಯ ಪಟ್ಟಣದಲ್ಲಿ ಗಾಳಿಪಟ್ಟ ಮಾರಾಟ ಮಾಡುವರು ನೈಲನ್ ದಾರ, ಚೈನಿಸ್ ದಾರ ಅಥವಾ ಪ್ಲಾಸ್ಟಿಕ್ ದಾರಗಳು ಮಾರಾಟ ಮಾಡಬಾರದು. ಇವರುಗಳು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಜೆ.ಎಸ್ ನ್ಯಾಮೇಗೌಡರ ತಿಳಿಸಿದರು.
ಪಟ್ಟಣದ ಸಿಪಿಐ ಕಚೇರಿಯಲ್ಲಿ ಕರೆದ ಗಾಳಿಪಟ್ಟ ವ್ಯಾಪರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಗಾಳಿಪಟ ಉತ್ಸವ ಆಚರಣೆಗೆ ಯಾವುದೇ ಅಡಚಣೆ ಇಲ್ಲ. ಆದರೆ, ಪ್ಲಾಸ್ಟಿಕ್ ದಾರ, ಚೈನಿಸ್ ಮಾಂಜ, ನೈಲನ್ ದಾರಗಳು ಬಳಸುತ್ತಿರುವ ಕಾರಣಕ್ಕೆ ಮನುಷ್ಯ ಹಾಗೂ ಹಕ್ಕಿಗಳ ಜೀವಕ್ಕೆ ಧಕ್ಕೆ ಉಂಟಾಗುತ್ತಿದೆ. ಗಾಳಿಪಟ ಹಾರಿ ಎಲ್ಲಿಆದರು ಬಿದ್ದ ಸಂದರ್ಭದಲ್ಲಿ ಅದರ ದಾರ ರಸ್ತೆಯಲ್ಲಿ ಸಂಚಾರ ಮಾಡುವ ವ್ಯಕ್ತಿಗಳ ಕುತ್ತಿಗೆ ಕತ್ತರಿಸಿದ ಘಟನೆಗಳು ಘಟಿಸಿವೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಜೀವ ಹೆದರಿಕೆ ಉಂಟಾಗುತ್ತಿದೆ. ಸ್ವಲ್ಪ ಹಣ ಗಳಿಕೆಗೆ ಜನರ ಜೀವಕ್ಕೆ ಧಕ್ಕೆ ಆಗಬಾರದು. ಜನರ ಸುರಕ್ಷತ್ತೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ತಹಶೀಲ್ದಾರ ಅಂಜುಮ್ ತಬಾಸುಮ್ ಮಾತನಾಡಿ, ಈಗಾಗಲೇ ಬಹುತೇಕ ಕಡೆಗಳಲ್ಲಿ ಜೀವಕ್ಕೆ ಆಪತ್ತು ಉಂಟು ಮಾಡುವ ದಾರಗಳು ಬಳಸಬಾರದು. ಪಟ್ಟಣದಲ್ಲಿ ಯಾರಾದರು ಬೇರೆ ಕಡೆಯಿಂದ ತಂದು ವ್ಯಾಪಾರ ಮಾಡಿದರೆ ಅಥವಾ ಮಾರಾಟ ಮಾಡಿದರೆ ಯಾರಾದರು ಖರೀದಿ ಮಾಡಿದರೆ ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಕರೆಮಾಡಿ ಮಾಹಿತಿ ನೀಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರಿಗಿಸಲಾಗುವುದು ಎಂದರು.
ಸಿಪಿಐ ಗುರು ಪಾಟೀಲ ಮಾತನಾಡಿ, ವ್ಯಾಪರಸ್ಥರು ಎಲ್ಲರೂ ಒಂದಾಗಿ ಇದಕ್ಕೆ ಕಡಿವಾಣ ಹಾವುಕ ಕೆಲಸ ಆಗಬೇಕಿದೆ. ಪ್ರತಿವರ್ಷ ಬ್ಯಾನ್ ಆಗಿರುವ ದಾರಗಳಿಂದ ಅನೇಕರಿಗೆ ಸಮಸ್ಯೆ ಎದುರಿಸಿದ್ದಾರೆ. ಜೀವಕ್ಕೆ ಅಪಾಯ ಆಗುವ ದಾರ ನಿಮ್ಮ ಕುಟುಂಬಸ್ಥರನ್ನು ಕೂಡ ಗಾಯ ಮಾಡಬುದು ಎಂಬುವುದು ಅರೆತ್ತುಕೊಳ್ಳಬೇಕು. ಈಗಗಲೇ ಪಟ್ಟಣದ ಎಲ್ಲಾ ಕಡೆಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಯಾವುದೇ ಮಾಹಿತಿ ದೂರು ಬಂದರೆ ಅಂತಹ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ, ಯಾವುದೇ ದುರ್ಘಟನೆ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ತನಿಖೆ ನಡೆಸಿ ಅಂತವರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಪುಟ್ಪಾತ್ ತೆರವು ಮಾಡಿ: ಪಟ್ಟಣದಲ್ಲಿನ ಅಂಗಡಿಗಳ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಮುಂದಿನ ಎರೆಡು ದಿನಗಳಲ್ಲಿ ಪಟ್ಟಣದ ಎಲ್ಲಾ ವ್ಯಾಪರಸ್ಥರು ತಮ್ಮ ಅಂಗಡಿಗಳ ಮುಂದೆ ಇರುವ ಪಾದಚಾರಿ ರಸ್ತೆ ಜನರ ಸಂಚಾರಕ್ಕೆ ಬಿಡಬೇಕು. ಆ ರಸ್ತೆಯಲ್ಲಿ ಯಾವುದೇ ವ್ಯಾಪರ ಮಾಡುವುದು, ಅಥವ ಅಂಗಡಿಯರವು ತಮ್ಮ ವಸ್ತುಗಳು ಇರಿಸುವುದು ಕಂಡು ಬಂದಲ್ಲಿ ಅವುಗಳನ್ನು ಪುರಸಭೆಗೆ ತೆಗೆದುಕೊಂಡು ಹೊಗುವುದಾಗಿ ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ರಾಗ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್‌ಪಿ ಜೆ.ಎಸ್ ನ್ಯಾಮೇಗೌಡರ, ಪಟ್ಟಣದ ಅಂಬೇಡ್ಕರ್ ವೃತ್ತದಿಂದ ನೂರ್ ಖಾನ್ ಅಖಾಡಾ ವರೆಗೆ ರಸ್ತೆ ಸಂಚಾರದ ದೂರುಗಳು ಹೆಚ್ಚಾಗುತ್ತಿದ್ದು, ಪಟ್ಟಣ ಸುಂದರ ಕಾಣಬೇಕಾದರೆ ರಸ್ತೆಗಳು ಸುಗಮವಾಗಿ ಇರಬೇಕು. ತರಕಾರಿ ವ್ಯಾಪರಸ್ಥರು ಹಾಗೂ ಬೀದಿಬದಿ ವ್ಯಾಪರಸ್ಥರು ಪಟ್ಟನದ ಥೇರ್ ಮೈದಾನದಲ್ಲಿ ಪುರಸಭೆ ವತಿಯಿಂದ ವ್ಯವಸ್ಥೆ ಮಾಡಿಕೊದಲಾಗುವುದು. ಇದನ್ನು ವ್ಯಾಪರಸ್ಥರು ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಕ್ರಮಕ್ಕೆ ಅವಕಾಶನೀಡಬಾರದು ಎಂದು ವ್ಯಾಪರಸ್ಥರಿಗೆ ಮನವಿ ಮಾಡಿದ್ದರು.

Date: 03-01-2024 : Time: 4:15pm

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…