Home ಅಂಕಣಗಳು ತೋಟಗಾರಿಕೆ ಬೆಳೆಯಿಂದ 60 ಲಕ್ಷ ಆದಾಯ..

ತೋಟಗಾರಿಕೆ ಬೆಳೆಯಿಂದ 60 ಲಕ್ಷ ಆದಾಯ..

40 ಕರೆಯಲ್ಲಿ ವಿವಿಧ ಬೆಳೆ- ತಾಂತ್ರಿಕತೆಯಿಂದ ಲಾಭ ಗ್ಯಾರಂಟಿ

ದುರ್ಯೋಧನ ಹೂಗಾರ   (ಕಸ್ತೂರಿ ಕಿರಣ ಪತ್ರಿಕೆಯ ಸುದ್ದಿ ಮುಖ್ಯಸ್ಥರು)

ಬೀದರ: ಕೃಷಿ ಮಾಡುತ್ತಿರುವ ರೈತರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುವ  ಈ ಸಂದರ್ಭದಲ್ಲಿ ಹುಮನಾಬಾದ ತಾಲೂಕಿನ ಕನಕಟ್ಟ ಗ್ರಾಮದ ರೈತನೊಬ್ಬ ನಿರಂತರ ಪರಿಶ್ರಮ ಪಟ್ಟು ವರ್ಷಕ್ಕೆ 55 ರಿಂದ 60 ಲಕ್ಷ ಲಾಭ ಪಡೆಯುತ್ತಿದ್ದಾರೆ.

ಹೌದು ಇದು ತೋಟಗಾರಿಕೆ ಬೆಳೆ ಬೆಳೆದ ರೈತನ ಯಶೋಗಾಥೆ. ಕನಕಟ್ಟ ಗ್ರಾಮದ ವಿದ್ಯಾವಂತ ಶಹಾಜಿ ಸಂಬಾಜಿರಾವ್ ಬಿರಾದರ ನಿರಂತರ ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಮಾಡುವ ಮೂಲಕ ಸಾಧನೆ ಮಾಡುತ್ತಿದ್ದಾರೆ. ಅಲ್ಲದೆ, ಇತರೆ ರೈತರಿಗೂ ಸಲಹೆ ನೀಡುವ ಮೂಲಕ ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಸೂಕ್ತವಾಗಿ ಕೃಷಿ ಕ್ಷೇತ್ರದಲ್ಲಿ ದುಡಿದರೆ ಲಾಭ ಗ್ಯಾರಂಟಿ ಎನ್ನುತ್ತಾರೆ ರೈತ.

40 ಎಕರೆಯಲ್ಲಿ ಕೃಷಿ:

ರೈತನಿಗೆ ಒಟ್ಟು 40 ಎಕರೆ ನೀರಾವರಿ ಜಮೀನಿದ್ದು, 25 ಎಕರೆ ದ್ರಾಕ್ಷಿ, 5 ಎಕರೆಯಲ್ಲಿ ಮಾವು ಹಾಗೂ ಉಳಿದ ಜಮೀನಿನಲ್ಲಿ ಹೈಬ್ರಿಡ್ ಟೊಮ್ಯಾಟೊ, ಮೆಣಸಿನಕಾಯಿ, ಕೃಷಿ ಬೆಳೆಗಳನ್ನು ಬೆಳೆದಿದ್ದಾರೆ. ಈ ಪೈಕಿ ಅರ್ಧ ಎಕರೆಯಲ್ಲಿ ಪಾಲಿಹೌಸ್ ನಿರ್ಮಿಸಿಕೊಂಡಿದ್ದು, ತರಕಾರಿ ಸಸಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ವಿವಿಧ ತರಹದ ಹಣ್ಣಿನ ಸಸಿ/ಕಸಿ ಗಿಡಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಅದಕ್ಕೆ ಶ್ರೀರಾಮ ನರ್ಸರಿ ಎಂದು ಹೆಸರಿಟ್ಟಿದ್ದಾರೆ. ನರ್ಸರಿಯಿಂದ ಬೇರೆ ಬೇರೆ ಗ್ರಾಮಗಳಿಂದ ಬರುವ ಜನರು ತರಕಾರಿ ಸಸಿಗಳನ್ನು ಹಣ್ಣಿನ ಮತ್ತು ಅಲಂಕಾರಿಕ ಸಸಿಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದು, ನಿರಂತ ಕೃಷಿಯಿಂದ ಲಾಭ ಪಡೆಯುತ್ತಿದ್ದಾರೆ.

ತೋಟಗಾರಿಕೆ ಕಡೆ ಒಲವು

ಮೊದಲು ಯಾವ ಬೆಳೆ ಬೆಳೆಯುತ್ತಿದ್ದಿರಿ, ಎಷ್ಟು ಆದಾಯ ಬರುತ್ತಿತ್ತು ಮತ್ತು ತೋಟಗಾರಿಕೆ ಕಡೆ ಒಲವು ಹೇಗಾಯಿತು ಎಂದು ಪ್ರಶ್ನೆಗೆ ಉತ್ತರಿಸಿದ ಶಹಾಜಿ, ಮೊಟ್ಟ ಮೊದಲು ತೊಗರಿ, ಜೋಳ, ಕಬ್ಬು, ಕೃಷಿಯನ್ನೆ ಮಾಡುತ್ತಿದ್ದೆ. ಈ ರೀತಿಯ ಕೃಷಿ ಹೆಚ್ಚಿನ ಖರ್ಚಿನದ್ದು ಮತ್ತು ಕಡಿಮೆ ಆದಾಯದ್ದು, ಅಲ್ಲದೇ ಕೂಲಿ ಕರ‍್ಮಿಕರ ಸಮಸ್ಯೆ ಎದುರಾಗಿತ್ತು. 10-15 ಲಕ್ಷ ರೂ. ಆದಾಯ ಬರುತ್ತಿತ್ತು ಅಷ್ಟೆ. ಇದಕ್ಕಿಂತಲೂ ಹೆಚ್ಚಿನ ಆದಾಯ ಪಡೆಯಲು ಏನು ಮಾಡಬೇಕೆಂದು ತೋಟಗಾರಿಕೆ ಮಾಡಿದ ಸ್ಥಳೀಯ ಮತ್ತು ಮಹಾರಾಷ್ಟçದ ಯಶಶ್ವಿ ರೈತರ ಅನುಭವವನ್ನು ನೋಡಿ, ಕೇಳಿ ತಿಳಿದುಕೊಂಡೆ ಮತ್ತು ಹುಮನಾಬಾದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕ ಮಾಡಿ ಸಲಹೆಗಳು ಪಡೆದುಕೊಂಡು ಮನಸ್ಸಿನಲ್ಲಿಟ್ಟುಕೊಂಡು ಹೇಗಾದರೂ ಮಾಡಿ ಆ ರೈತರಂತೆ ನಾನು ಏಕೆ ಹೆಚ್ಚಿನ ಆದಾಯ ಪಡೆಯಬಾರದೆಂದು ದೃಢ ಸಂಕಲ್ಪ ಮಾಡಿ ತೋಟಗಾರಿಕೆ ಇಲಾಖೆಯಿಂದ ಏನೇನು ಸವಲತ್ತುಗಳು ಸಿಗಬಹುದೆಂದು ಎಲ್ಲ ಮಾಹಿತಿಗಳು ಪಡೆದುಕೊಂಡೆ. ನಂತರ ತೋಟಗಾರಿಕೆ ಅಧಿಕಾರಿಗಳು ಹೇಳಿದಂತೆ ಕೃಷಿ ಭಾಗ್ಯ ಯೋಜನೆಯಲ್ಲಿ ಅರ್ಧ ಎಕರೆ ಪಾಲಿಹೌಸನ್ನು ತಯಾರಿಸಿ ಸಹಾಯಧನ ಪಡೆದುಕೊಂಡೆ. ಅದರೊಳಗೆ ತರಕಾರಿ ಸಸಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ಮತ್ತು ಹೂವಿನ ಬೆಳೆಗಳನ್ನು ಮಲ್ಚಿಂಗ್ ಪದ್ದತಿಯಲ್ಲಿ ಬೆಳೆಯುತ್ತಿದ್ದೇನೆ. ಮಾವಿನ ಗಿಡಗಳಿಗೆ ಹೂ, ತರಕಾರಿ ಬೆಳೆಗಳಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡೆ. ಹೀಗೆ ತೋಟಗಾರಿಕೆ ಇಲಾಖೆಯ ಈ ಯೋಜನೆಗಳನ್ನು ಅಳವಡಿಸಿಕೊಂಡು ಸಹಾಯಧನವನ್ನು ಪಡೆದುಕೊಂಡೆ. ಹೀಗೆ ತೋಟಗಾರಿಕೆ ಇಲಾಖೆಯಿಂದ ತುಂಬ ಸಹಾಯವಾಗಿದೆ ಎಂದು ಹೇಳಿದರು.

ರೈತರಿಗೆ ಸಲಹೆ

ಈ ರೈತ 2009ನೇ ಸಾಲಿನಲ್ಲಿ ನಾಟಿ ಪದ್ದತಿಯಲ್ಲಿ ತೊಗರಿ ಬೆಳೆಯನ್ನು ಬೆಳೆಸಿ ಹೆಚ್ಚಿನ ಇಳುವರಿ ಪಡೆದಿದ್ದಕ್ಕೆ  ಪ್ರಗತಿಪರ ರೈತನೆಂದು, ಕೃಷಿ ವಿಜ್ಞಾನ ಕೇಂದ್ರ ಬೀದರದಿಂದ ಪ್ರಸಸ್ತಿ ನೀಡಲಾಗಿತ್ತು. ರೈತ ಸ್ನೆಹಿತರಿಗೆ ಸಾಧನೆ ಮಾಡಲು ಏನನ್ನು ಹೇಳಲು ಬಯಸುತ್ತೀರಿ ಎಂದು ಕೇಳಿದಾಗ, ಶ್ರಮ ವಹಿಸಿ ಸಾಧ್ಯವಿದ್ದಲ್ಲಿ ಮನೆಮಂದಿಯೆಲ್ಲ ದುಡಿಯಬೇಕು. ಆಳಿಗೆ, ಕರ‍್ಮಿಕರಿಗೆ ಖರ್ಚಾಗುವುದು ಉಳಿಯುತ್ತದೆ. ಇಲಾಖೆಯ ಯೋಜನೆಗಳನ್ನು ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ಸಮಗ್ರ ಕೃಷಿಯನ್ನು ಮಾಡಿದರೆ ಆಕಸ್ಮಿಕವಾಗಿ ಒಂದರಲ್ಲಿ ನಷ್ಟವಾದರೆ ಇನ್ನೊಂದರಿAದ ಲಾಭ ಗ್ಯಾರಂಟಿ ಆಗುತ್ತದೆ ಯಾವುದೇ ಮಾಹಿತಿಗಾಗಿ 9902226944, 9448982222 ಕ್ಕೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.


Date:08-11-2019

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…