ಜ.14 ರಿಂದ 24ರ ವರೆಗೆ ವೀರಭದ್ರನ ಉತ್ಸವ ಮೂರ್ತಿಗೆ ಶಾಲು ಹೊದಿಕೆ.
ಜ.14 ರಿಂದ 24ರ ವರೆಗೆ ವೀರಭದ್ರನ ಉತ್ಸವ ಮೂರ್ತಿಗೆ ಶಾಲು ಹೊದಿಕೆ.
ಹುಮನಾಬಾದ/ಜ.12: ಕುಲದೇವ ವೀರಭದ್ರೇಶ್ವರ ಜಾತ್ರೆ ನಿಮಿತ್ಯ ಶಾಲು ಹೊದಿಸುವ ಭಕ್ತಾದಿಗಳು ಜ.14 ರಿಂದ 24ರ ವರೆಗೆ ನಡೆಯುವ ಉತ್ಸವ ಮೂರ್ತಿಗೆ ಶಾಲು ಹೊದಿಸಿ ಭಕ್ತಿ ನಮನ ಸಲ್ಲಿಸಬಹುದಾಗಿದೆ ಎಂದು ಪಟ್ಟಣದ ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಾಧರ ಶಿವಾಚಾರ್ಯ ತಿಳಿಸಿದ್ದಾರೆ.
ಸಂಕ್ರಾಂತಿ ಹಬ್ಬದ ದಿನದಿಂದ ಪ್ರತಿನಿತ್ಯ ಪಟ್ಟಣದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯುತ್ತದೆ. ಭಕ್ತರ ಶಾಲು ಹೊದಿಸುವ ವಾಡಿಕೆ ಹಿಂದನತೆ ಇರುತ್ತದೆ. ಆದರೆ, ಜ.25 ಅಗ್ನಿ ತುಳಿಯುವ ದಿನ ಹಾಗೂ ಜ.26 ರಥೋತ್ಸವ ದಿನದಂದು ಉತ್ಸವ ಮೂರ್ತಿಗೆ ಶಾಲು ಹೊದಿಸಲು ಅವಕಾಶ ಇಲ್ಲ. ಬದಲಿಗೆ ಭಕ್ತರು ನೇರವಾಗಿ ದೇವಸ್ಥಾನದಲ್ಲಿ ವೀರಭದ್ರ ಮೂರ್ತಿಗೆ ಶಾಲು ಅರ್ಪಣೆ ಮಾಡಬಹುದು. ನಿಗದಿತ ದಿನದಂತೆ ಧಾರ್ಮಿಕ ಆಚಾರಣೆಗಳು ಅದ್ದೂರಿಯಾಗಿ ನಡೆಯಬೇಕು ಎಂಬ ನಿಟ್ಟಿನಲ್ಲಿ ಕೆಲ ನಿರ್ಧಾರಗಳು ಮಾಡಲಾಗಿದೆ.
ದೂರದಿಂದ ಬರುವ ಭಕ್ತರು ಜ.25 ರ ರಾತ್ರಿ ಹಾಗೂ ಜ.26 ರಾತ್ರಿ ನಡೆಯುವ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಭಾಗವಹಿಸಿ ಉತ್ಸವ ಮೂರ್ತಿಯ ದರ್ಶನ ಪಡೆಯಬೇಕು. ಉತ್ಸವದಲ್ಲಿ ಪಟಾಕಿ ಸೇರಿದಂತೆ ವಿವಿಧ ವೈಭವಗಳು ವೀಕ್ಷಿಸಬಹುದಾಗಿದೆ ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.
Date:12/01/2023 : www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















