ಜೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್ ಪಾವತಿ ಮಾಡಿ.
ಬೀದರ: ಲಾಕ್ ಡೌನ್ ಹಿನ್ನಲೆಯಲ್ಲಿ ಹುಮನಾಬಾದ ಪಟ್ಟಣ, ಹಳ್ಳಿಖೇಡ (ಬಿ) ಪಟ್ಟಣ ಮತ್ತು ಕಾ & ಪಾ ಉಪ-ವಿಭಾಗ ಜೆಸ್ಕಾಂ ಹುಮನಾಬಾದ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಿದ್ಯುತ್ ಗ್ರಾಹಕರು ಕಡ್ಡಾಯವಾಗಿ ವಿದ್ಯುತ್ ಬಿಲ್ ಪಾವತಿ ಮಾಡಬೇಕು ಎಂದು ಜೆಸ್ಕಾಂ ಅಧಿಕಾರಿ ತಿಳಿಸಿದ್ದಾರೆ.
ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಹುಮನಾಬಾದ ಸಹಾಯಕ ಕಾರ್ಯನಿರ್ವಾಹಕ ಅಬಿಯಂತರರು ಪ್ರಕಟಣೆಯೊಂದು ಹೊರಡಿಸಿದ್ದು, 3 ತಿಂಗಳ ಅವಧಿ ವಿದ್ಯುತ್ ಬಿಲ್ ಪಾವತಿಸುವುದನ್ನು ಮುಂದುಡಿರುವ ಬಗ್ಗೆ ರಾಜ್ಯ ಸರ್ಕಾರ ಅಥವಾ ಜೆಸ್ಕಾಂ ವಿದ್ಯುತ್ ಸರಬರಾಜು ಕಂಪನಿ ಯಾವುದೇ ಅಧಿಕೃತ ನಿರ್ದೇಶನ ನೀಡಿಲ್ಲ ಎಂದು ಸ್ಪಸ್ಟ ಸ್ಪಷ್ಟಪಡಿಸಿದ್ದಾರೆ.
ಕರೋನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜೆಸ್ಕಾಂ ಹುಮನಾಬಾದ ವಿದ್ಯುತ್ ಗ್ರಾಹಕರಿಗೆ ಮಾಸಿಕ ವಿದ್ಯುತ್ ಬಿಲ್ ಸರಾಸರಿ ಅಥವಾ ಹಿಂದಿನ ತಿಂಗಳ ಬಿಲ್ ಆಧಾರದ ಮೇಲೆ ತಮ್ಮ ಸ್ಥಾವರಗಳಿಗೆ ವಿದ್ಯುತ್ ಬಿಲ್ ಬೇಡಿಕೆ ಮಾಡಿದ್ದು, ಅದರಂತೆ ಗ್ರಾಹಕರು ಸರಾಸರಿ ಅಥವಾ ಹಿಂದಿನ ತಿಂಗಳ ಬಿಲ್ ಮೊತ್ತವನ್ನೆ ಈ ಬಾರಿಯು ಪಾವತಿಸಬೇಕು. ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಪಾವತಿಸಲು ದೂರವಾಣಿ ಸಂಖ್ಯೆ 1912 ಗೆ ಕರೆ ಮಾಡಿ ತಮ್ಮ ಸ್ಥಾವರದ ವಿದ್ಯುತ್ ಬಿಲ್ ಮಾಹಿತಿ ಪಡೆದುಕೊಳ್ಳಬಹುದು. ಸಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜನರು ಮಾಸ್ಕಗಳನ್ನು ಧರಿಸಿ ಜೆಸ್ಕಾಂನ ಕ್ಯಾಷ್ ಕೌಂಟರನಲ್ಲಿ ಪಾವತಿಸಬಹುದು. ಅಲ್ಲದೆ, ಆನ್‌ಲೈನ್ ಮೂಲಕ ಕೂಡ ಹಣ ಪಾವತಿ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Date: 10-04-2020 Time: 5:40PM
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















