ಜೂಜಾಟ ಜನರ ಬಂಧನ-ಪೊಲೀಸ್ರು ಕ್ವಾರಂಟೈನ್.
ಜೂಜಾಟ ಜನರ ಬಂಧನ-ಪೊಲೀಸ್ರು ಕ್ವಾರಂಟೈನ್.
ಬೀದರ: ಕೋವಿಡ್ 19 ಸೋಂಕಿತನ ದ್ವಿತೀಯ ಸಂಪರ್ಕಕ್ಕೆ ಬಂದಿದ ಜನರು ಜೂಜಾಡುತ್ತಿದ ಅಡ್ಡೆ ಮೇಲೆ ದಾಳಿ ನಡೆಸಿದ ಜಿಲ್ಲೆಯ ಚಿಟಗುಪ್ಪ ವಲಯದ ಸಿಪಿಐ ಮತ್ತು ಇಬ್ಬರು ಪಿಎಸ್‌ಐ ಸೇರಿ 15 ಜನ ಪೊಲೀಸ್ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಈ ಬಗ್ಗೆ ಎಸ್‌ಪಿ ಡಿ.ಎಲ್ ನಾಗರಾಜ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಚಿಟಗುಪ್ಪ ಠಾಣೆ ಪೊಲೀಸರು ಶುಕ್ರವಾರ ತಾಲೂಕಿನ ಗ್ರಾಮವೊಂದರಲ್ಲಿ ಜೂಜಾಟ ನಿರತ ಅಡ್ಡೆ ಮೇಲೆ ದಾಳಿ ನಡೆಸಿ 12 ಜನರನ್ನು ಬಂಧಿಸಿ ಸುಮಾರು 80 ಸಾವಿರ ಹಣ ಜಪ್ತಿಮಾಡಿದ್ದರು. ಈ ಪೈಕಿ ಬೀದರ ನಗರದ ಕೋವಿಡ್-19 ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವುದು ಖಚಿತಪಟ್ಟ ಹಿನ್ನೆಲೆಯಲ್ಲಿ ಇದೀಗ ಜೂಜಾಟ್ ದಾಳಿಗೆ ತೆರಳಿ ಕಾನೂನು ಪ್ರಕ್ರಿಯೆಗಳು ಪೊರೈಸಿದ ಪೊಲೀಸರು ದ್ವಿತೀಯ ಸಂಪರ್ಕಕ್ಕೆ ಬಂದಂತಾದ ಹಿನ್ನಲೆಯಲ್ಲಿ ಪೊಲೀಸ ಅಧಿಕಾರಿಗಳು ಸೇರಿ 15 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಹುಮನಾಬಾನಲ್ಲೂ ಆತಂಕ: ಜೂಜಾಟ್ ನಡೆಸುವ ಹಾಗೂ ಜೂಜಾಟ್ ಆಡುವ ವ್ಯಕ್ತಿಗಳು ಹುಮನಾಬಾದ ಪಟ್ಟಣದವರು ಎಂಬುವುದು ಪೊಲೀಸ್ ಮೂಲಗಳು ತಿಳಿಸಿದ್ದು, ಕೋವಿಡ್ ಪತ್ತೆಯಾದ ವ್ಯಕ್ತಿ ಹಾಗೂ ಆತನ ನಿರಂತರ ಸಂಪರ್ಕದಲ್ಲಿದ ವ್ಯಕ್ತಿಯೊಬ್ಬ ಅನೇಕರ ಸಂಪರ್ಕ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಭಾನುವಾರ ಪೊಲೀಸರು ಕೆಲವರ ವೊಚಾರಣೆ ನಡೆಸಿದರು ಈ ಪೈಕಿ ಇಬ್ಬರ ವ್ಯಕ್ತಿಗಳ ಮಾದರಿ ಪಡೆದು ಲ್ಯಾಬಿಗೆ ಕಳುಹಿಸಲಾಗಿದೆ. ಅನೇಕ ಜೂಜುಕೊರರು ಸದ್ಯ ಆತಂಕದಲ್ಲಿದ್ದಾರೆ.
Date:24-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















