Home ನಿಮ್ಮ ಜಿಲ್ಲೆ ಬೀದರ ಜನರ್ರಿಗೆ ಮನರಂಜಿಸಿದ ಬೀದರ್ ಉತ್ಸವ..

ಜನರ್ರಿಗೆ ಮನರಂಜಿಸಿದ ಬೀದರ್ ಉತ್ಸವ..

ದಶಕದ ಉತ್ಸವಕ್ಕೆ ಸಾಕ್ಷಿಯಾದ ಜನಸಾಗರ..

ಬೀದರ್ ಉತ್ಸವ ತಿಂಗಖವರೆಗೂ ಬೀದರ್ ಜನತೆ ಉತ್ಸವದ ಗುಂಗಿನಿಂದ ಹೊರ ಬರದಂತೆ ಮಾಡಿದ್ದು ಈ ಬೀದರ್ ಉತ್ಸವ..ಎಂಟು ವರ್ಷಗಳ ನಂತರ ಕೋಟೆ ಬಾನಂಗಳದಲ್ಲಿ ಪಟಾಕಿ ಸಿಟಿಮದ್ದುಗಳು ಮೂಡಿಸಿದ ಚಿತ್ತಾರ ಬಹುಷ್ಯ ಬೀದರ್ ಉತ್ಸವದ ಅಬ್ಬರಕ್ಕೆ ಸಾಕ್ಷಿಯಾಗಿತ್ತು.

ಎಂಟು ವರ್ಷಗಳ ನಂತರ ಪರಂಪರೆ ನಗರಿಯ ಐತಿಹಾಸಿಕ ಬಹಮನಿ ಕೋಟೆ ಆವರಣದಲ್ಲಿ ಮೂರು ದಿನಗಳ ವರೆಗೆ ನಡೆದ ಬೀದರ್‌ ಉತ್ಸವಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು.

ಮೂರು ದಿನ ನಡೆದ ಉತ್ಸವದಲ್ಲಿ ಜಿಲ್ಲೆಯ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ ಬಂದಿದ್ದು ಸರಿ ಸುಮಾರು 9ಲಕ್ಷ ಜನರು ಉತ್ಸವಕ್ಕೆ ಭೇಟಿ ಕೊಟ್ಟಿದ್ದಾರೆ.ಈ ಮೂರು ದಿನದಲ್ಲಿ..! ಇದು ಕೂಡಾ ಬೀದರ್ ಉತ್ಸವಕ್ಕೆ ದಾಖಲೆಯೇ..ಬೀದರ್ ಉತ್ಸವಕ್ಕೆ ಆರಂಭಂದಲ್ಲಿದ್ದ ಅಪಸ್ವರ ಬೀದರ್ ಉತ್ಸವ ಆರಂಭದಿಂದ ಸಮಾರೋಪ ಸಮಾರಂಭದವರೆಗೆ ಹೊಗಳಿಕೆಯಲ್ಲಿ  ಮಾರ್ಪಟ್ಟಿದ್ದು ಸುಳ್ಳಲ್ಲ.

ಚೀನಾದ ಕರೋನಾ ಹೆದರಿಕೆ ಒಮದಡೆಯಾದ್ರೆ,8ವರ್ಷದ ನಂತರ ಉತ್ಸವ ಮಾಡಲು ಹೊರಟ ಜಿಲ್ಲಾಡಳಿಕ್ಕೆ ಈ ಪರಿ ಜನರ ರೆಸ್ಪಾನ್ಸ್ ಸಿಗುತ್ತೆ ಅನ್ನೋ ಕಲ್ಪನೆ ಇರಲಿಲ್ಲ.ಉದ್ಘಾಟನೆ ಹಿಡಿದು ಸಮಾರೋಪ ಸಮಾರಂಭಕ್ಕೆ ಬಂದ ಜನ ಪ್ರತಿನಿಧಿಗಳು ಇಷ್ಟೋಂದು ಜನಸಾಗರ ನೋಡಿ ಅವರಿಗೆ ಒಂದಡೆ ಖುಷಿ ಇನ್ನೋಂದಡೆ ಗಮ್ ತರಹ ಪರಿಸ್ಥಿತಿ ಎದುರಾಗುದ್ದು ಸತ್ಯ..ಸಧ್ಯ ಬೀದರ್ ಉತ್ಸವದ ಬಗ್ಗೆ ಅಪಸ್ವರದ ಮಾತನಾಡಿದ ಜನಪ್ರತಿನಿಧಿಗಳು ಉತ್ಸವಕ್ಕೆ ಸಿಕ್ಕ ರೆಸ್ಪಾನ್ಸ್ ಅವರನ್ನ ಮೌನಕ್ಕೆ ಶರಣಾಗುವಂತೆ ಮಾಡಿದೆ ಅಂತಾರೆ ದೀಪಕ್..

ಬೀದರ್ ಉತ್ಸವಕ್ಕೆ ಟೊಂಕಕಟ್ಟಿ ಶ್ರಮಿಸಿದವರು:

ಬೀದರ್ ಉತ್ಸವ ಮಾಡಲು ಹೊರಟ ಜಿಲ್ಲಾಧಿಕಾರಿ ಡಾ.ಗೋವಿಂದರೆಡ್ಡಿ ಮತ್ತರವ ಟೀಮ್ ಸಾತ್ ಕೊಟ್ಟ ಅಧಿಕಾರಿಗಲ ಕಾರ್ಯ ನಿಜಕ್ಕು ಮೆಚ್ಚುಗೆ ಅರ್ಹ.ಆರಂಭದಲ್ಲಿ ಉತ್ಸವ ಹೇಗೆ ಮಾಡಬೇಕು..|ಎನು ಮಾಡಬೇಕು..?ಯಾವುದು ಮಾಹಿತಿ ಇಲ್ಲ..ಎಲ್ಲರು ಹೇಳುವವರೆ ಹಾಗೆ ಮಾಡಿ ಹೀಗೆ ಮಾಡಿ..ಎಲ್ಲರಿಗೂ ಇಲ್ಲ ಅಂತ ಹೇಳಕ್ಕೆ ಆಗುವುದಿಲ್ಲ ಎಲ್ಲರನ್ನ ಉತ್ಸವಕ್ಕೆ ಜೊತೆಗೆ ತೆಗೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಇದ್ದಿದ್ದು ಜಿಲ್ಲಾಡಳಿತ ಮೇಲೆ.ಅದನ್ನ ಯಶ್ವಸಿಯಾಗಿ ನಿಭಾಯಿಸಿದ್ದು ಬೀದರ್ ಡಿಸಿ ಡಾ.ಗೋವಿಂದರೆಡ್ಡಿ.ಇವರಿಗೆ ಸಾತ್ ಕೊಟ್ಟಿದ್ದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯದರ್ಶಿ ಶಿಲ್ಪಾ ಮೇಡಂ.ಉತ್ಸವಕ್ಕೆ ಬಂದ ಜನ ಸಾಗರ ಬಹುಷ್ಯ ಈ ಪರಿ ಜನರು ಬಂದಾಗಲು ಎನೆ ಅವಘಡ ಆಗದಂತೆ ಕಾನುನೂ ಸುವ್ಯವಸ್ಥೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಅವರ ಕಾರ್ಯ ನಿಜಕ್ಕು ಮೆಚ್ಚುವಂತದ್ದು.ಖುದ್ದು ವೇದಿಕೆ ಬಿಟ್ಟು ತಾವೇ ಟ್ರಾಫಿಕ್ ನಿಭಾಯಿಸಲು ಬೀದರ್ ಉತ್ಸವದ ಮೂಖ್ಯ ವೇದಿಕೆ ಹಿಂಬಾಗದ  ರಸ್ತೆಗಿಳಿದ ಅವರು ವಾಹನಗಳನ್ನ ಸಾರಾಗವಾಗಿ ಹೋಗಲು ಹರ ಸಹಾಸ ಪಟ್ಟಿದ್ದು ಅವರ ಶೃದ್ದೆಯ ಕಾರ್ಯಕ್ಕೆ ಕೈಗನ್ನಡಿಯಾಗಿತ್ತು. 

ಈ ಮಧ್ಯೆ ವೇದಿಕೆಗೆ ಬಂದ ಖ್ಯಾತ ಕಲಾವಿದ ಹಾಡುಗಳು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ಜನಮದಲ್ಲಿ ಹಲವು ತಿಂಗಳುಗಳ ಕಾಳ ಅಚ್ಚಳಿಯದೆ ಉಳಿಯುತ್ತವೆ.ಕಾರಣ ಮನ ಸೂರೆಗೊಳ್ಳುವ ಕಾರ್ಯಕ್ರಮ ನೀಡಿದ ಖ್ಯಾತ ಸಂಗೀತ ಕಲಾವಿದರನ್ನ ಬೀದರ್ ಜನತೆ ಸ್ವಾಗತಿಸಿದ ರೀತಿ ಅದ್ಬುತ.ಮಧ್ಯಮಧ್ಯದಲ್ಲಿ ವೇದಿಕೆ ಎದುರಿದ್ದ ಲಕ್ಷಾಂತರ ಜನರು ಮೊಬೈಲ್ ಟಾರ್ಚ್ ಹಾಕಿದಾಗ ಕಲಾವಿದರ ಉತ್ಸಾಹ ಇಮ್ಮಡಿಯಾಗಿದ್ದು ಸುಳ್ಳಲ್ಲ.ಬಹುಷ್ಯ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಸಾಗರ ನೋಡಿದ್ದು ಇದೇ ಫಸ್ಟ್ ಅನ್ನೋ ತರಹ ಇತ್ತು  ಕೆಲ ಕಲಾವಿದರ ರೆಸ್ಪಾನ್ಸ್..

ಕಡೆಯ ಸಮಾರೋಪ ಸಮಾರಂಭದ ದಿನದ ಕಾರ್ಯಕ್ರಮ ಮನೆಯಲ್ಲಿ ವೀಕ್ಷಣೆ ಮಾಡಲು ಜಿಲ್ಲಾಡಳಿತ ಲೈವ್ ಗೆ  ಅವಕಾಶ ಮಾಡಿಕೊಟ್ಟಾಗ ಲಕ್ಷಾಂತರ ಜನರು ಸ್ಥಳಿಯ ಚಾನಲ್ ಹಾಗೂ ಯೂ ಟ್ಯೂಟ್ ಗಲ್ಲಿ  ಮೊದಲ ಬಾರಿಗೆ ಲೈವ್ ಆಗಿ ಬೀದರ್ ಉತ್ಸವ ಕಾರ್ಯಕ್ರಮ ಕಣ್ಣತುಂಬಿಕೊಂಡಿದ್ದು.ಕೋಟೆ ಒಳಗೂ ಜನಸಾಗರ..ಮನೆಯಲ್ಲಿ ಕೂತು ನೋಡಿದ ಜನರ ಸಂಖ್ಯೆಯೂ ಲಕ್ಷಕ್ಕಿಂತ ಜಾಸ್ತಿ ಅನ್ನೋದು ವಿಶೇಷ..

ಕಾರ್ಯಕ್ರಮದ ವೇದಿಕೆ ಜಿಲ್ಲೆಯ ಜನರನ್ನ ಆಕರ್ಷಸಿದೆ.ಬಹಮನಿ  ಕೋಟೆಯಲ್ಲಿ ನಡೆದ ಉತ್ಸವದ ವೇದಿಕೆ ಬಗ್ಗೆ ಕೆಲವೊಬ್ಬರು ರಾಜಕೀಯ ಲಾಭಕ್ಕಾಗಿ ಅದರ ಬಗ್ಗೆ ದೂರಿದ್ದು ಹೊರತು ಪಡಿಸಿದರೆ ವೇದಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಲಕ್ಷಾಂತರ ಜನರು.ಬರುವ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಉತ್ಸವ ಲಾಭ ಪಡೆಯಲು ರಾಜಕೀಯ ಪಕ್ಷಗಳು ಇದರ ಪ್ರಸ್ತಾಪ ಮಾಡೆ ಮಾಡತ್ತಾರೆ ಅನ್ನೋದರಲ್ಲಿ ಎರಡು ಮಾತಿಲ್ಲ..

ಮುಖ್ಯಮಂತ್ರಿ ಬಸವ್ರಾಜ್ ಬೊಮ್ಮಾಯಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು ಕೇಂದ್ರ ಸಚಿವ ಭಗವಂತ ಖೂಭಾ,ಸಚಿವ ಪ್ರಭು ಚೌವಾಣ,ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ,ಶಾಸಕರುಗಳಾದ  ಬಂಡೆಪ್ಪ ಕಾಶಂಪೂರ್, ಶರಣು ಸಲಗರ,ರಹಿಮ್ ಖಾನ್,ರಾಜಶೇಖರ್ ಪಾಟೀಲ್ ಹುಮನಾಬಾದ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

 

 

 

 

 

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…