ಚಿಟಗುಪ್ಪ ಪುರಸಭೆ ಸಿಬ್ಬಂದಿಗೆ ಪಾಸಿಟಿವ್ – ಪುರಸಭೆ ಸೀಲ್ ಡೌನ್?
ಚಿಟಗುಪ್ಪ ಪುರಸಭೆ ಸಿಬ್ಬಂದಿಗೆ ಪಾಸಿಟಿವ್ – ಪುರಸಭೆ ಸೀಲ್ ಡೌನ್?
ಬೀದರ: ಕೊರೊನಾ ಮಹಾಮಾರಿ ತಡೆಯುವ ನಿಟ್ಟಿನಲ್ಲಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಸೂಲಿ ಮಾಡುತ್ತಿದ್ದ ಚಿಟಗುಪ್ಪ ಪುರಸಭೆ ಸಿಬ್ಬಂದಿಯೊಬ್ಬರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಪುರಸಭೆ ಸೀಲ್ ಡೌನ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.
ಪುರಸಭೆ ಮಹಿಳಾ ಸಿಬ್ಬಂದಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತಿರುವ ಮಧ್ಯದಲ್ಲಿಯೇ ಪಾಸಿಟಿವ್ ಬಂದಿದ್ದು, ಇದೀಗ ಪುರಸಭೆ ಮುಖ್ಯಾಧಿಕಾರಿ, ಸಿಬ್ಬಂದಿಗಳು ಹಾಗೂ ಕಾರ್ಮಿಕರು ಸೇರಿದಂತೆ 30ಕ್ಕೂ ಅಧಿಕ ಜನರು ಹೋಂ ಕ್ವಾರಂಟೈನ್ ಆಗುವ ಸ್ಥಿತಿ ನಿರ್ಮಾಣವಾಗಿದೆ. ಪಾಸಿಟಿವ್ ಬಂದಿರುವ ಸಿಬ್ಬಂದಿಯೊಂದಿಗೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ತೆರಳಿ ಕ್ವಾರಂಟೈನ್ ವ್ಯವಸ್ಥೆಗಳು ಪರಿಶೀಲಿಸಿದ ವೈದ್ಯರೊಬ್ಬರು ಕೂಡ ಹೋಂ ಕ್ವಾರಂಟೈನ್ ಆಗಿದ್ದಾರೆ. ಈ ವರೆಗೆ ಪಾಸಿಟಿವ್ ಬಂದಿರುವ ಮಹಿಳಾ ಸಿಬ್ಬಂದಿಯ ತಂಡ ಮಾಸ್ಕ್ ಧರಿಸದ ಜನರಿಂದ 80 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ ಮಾಹಿತಿ ನೀಡಿದ್ದಾರೆ.
ಆತಂಕದಲ್ಲಿ ಚಿಟಗುಪ್ಪ ಜನರು: ಚಿಟಗುಪ್ಪ ಪಟ್ಟಣದಲ್ಲಿ ಪ್ರತಿನಿತ್ಯ ಪಾಸಿಟಿವ್ ಪ್ರಕರಣಗಳ ಜೊತೆಗೆ ಸಾವುಗಳು ಸಂಭವಿಸುತ್ತಿರುವ ಬಗ್ಗೆ ಇಲ್ಲಿನ ಜನರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಈ ಹಿಂದೇ ಪಟ್ಟಣದ ಪೊಲೀಸ್ ಸಿಬ್ಬಂದಿಗಳು ಹೋಂ ಕ್ವಾರಂಟೈನ್ ಆಗಿದ್ದರು, ಇದೀಗ ಪುರಸಭೆ ಸಿಬ್ಬಂದಿಗಳು ಕೂಡ ಕ್ವಾರಂಟೈನ್ ಆಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಈ ಕುರಿತು ಶುಕ್ರವಾರ ಸಂಜೆ ಪುರಸಭೆ ಸಭಾಂಗಣದಲ್ಲಿ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಭವರಸಿಂಗ್ ಮೀನಾ ಸಭೆ ನಡೆಸಿ, ಪುರಸಭೆ ಸದಸ್ಯರ ಹಾಗೂ ಪಟ್ಟಣದ ಮುಖಂಡರ ಸಮಸ್ಯೆಗಳು ಹಾಗೂ ದೂರುಗಳು ಆಲಿಸಿದರು.
ಪಟ್ಟಣದಲ್ಲಿ ಬೆಳಿಗ್ಗೆ 7 ರಿಂದ 10 ಗಂಟೆಯ ವರೆಗಿನ ಸಮಯದಲ್ಲಿ ವ್ಯಾಪರ ವಹಿವಾಟು ನಡೆಸು ವ್ಯಾಪರಸ್ಥರಿಗೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಂಡು ವಹಿವಾಟು ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಹೆಚ್ಚಿನ ಸಮಯ ಅವಕಾಶ ನೀಡಬೇಕು ಎಂದು ಪಟ್ಟಣದ ಜನರು ಅಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಎಸಿ 12 ಗಂಟೆಯ ವರೆಗೆ ತರಕಾರಿ ಕಿರಾಣ ಅಂಗಡಿಗಳು ಕಾರ್ಯ ನಿರ್ವಹಿಸುಂತೆ ತಿಳಿಸಿದರು. ಅಲ್ಲದೆ, ಈ ವರೆಗೆ 800 ಜನರ ಕೊರೊನಾ ಟೆಸ್ಟ್ ಗಾಗಿ ಮಾದರಿ ಪಡೆದಿದ್ದು, ಎಲ್ಲಾ ವರದಿಗಳು ಬಂದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
Date:28-06-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















