ಚಿಟಗುಪ್ಪ ಪುರಸಭೆಗೆ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ.
ಚಿಟಗುಪ್ಪ ಪುರಸಭೆಗೆ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ.
ಚಿಟಗುಪ್ಪ: ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್,ಉಪಾಧ್ಯಕ್ಷೆ ಸೌಭಾಗ್ಯ ವತಿ ಅವಿರೋಧ ಆಯ್ಕೆ.
ಚಿಟಗುಪ್ಪ: ಪಟ್ಟಣದ ಪುರಸಭೆಗೆ ೯ನೇ ಅವಧಿಗೆ ಶನಿವಾರ ತಾಲ್ಲೂಕಿನ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಾಲಾಶ್ರೀ ಶಾಮರಾವ್, ಉಪಾಧ್ಯಕ್ಷೆಯಾಗಿ ಸೌಭಾಗ್ಯವತಿ ಅಶೋಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಹಶೀಲ್ದಾರ್ ಜಿಯಾವುಲ್ಲ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ನಿಗದಿತ ಅವಧಿಗೆ ಚುನಾವಣಾಧಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಿದರು.
ನಂತರ ಶಾಸಕ ರಾಜಶೇಖರ್ ಪಾಟೀಲ ಅವರು ನೂತನ ಅಧ್ಯಕ್ಷೆ ಮಾಲಾಶ್ರೀ ಮತ್ತು ಉಪಾಧ್ಯಕ್ಷೆ ಸೌಭಾಗ್ಯವತಿ ಅವರನ್ನು ಸನ್ಮಾನಿಸಿ ಮಾತನಾಡಿ.
ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಕ್ಷಬೇಧ ಮರೆತು ಒಗ್ಗಟ್ಟಿನಿಂದ ಶ್ರಮಿಸಬೇಕು, ನಾಗರಿಕರಿಗೆ ಸಮಸ್ಯೆಯಾಗದಂತೆ ದುಡಿಯಬೇಕು, ಪಟ್ಟಣದ ಹಲವು ಕಾಮಗಾರಿಗೆ ಬೇಕಾದ ಹಣಕಾಸಿನ ನೆರವು ಶಾಸಕ ನಿಧಿಯಿಂದ ಬೇಕಾದ್ರು ಪೂರೈಸುವ ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ ಪುರೋಹಿತ ಸೇರಿದಂತೆ ವಿವಿಧ ಪುರಸಭೆ ಸದಸ್ಯರು ಇದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















