Home ನಿಮ್ಮ ಜಿಲ್ಲೆ ಬೀದರ ಚಿಟಗುಪ್ಪ: ಗ್ರಾಮ ಪಂಚಾಯಿತಿ ಚುನಾವಣೆ; ಪೊಲೀಸರಿಂದ ಪಥಸಂಚಲನ

ಚಿಟಗುಪ್ಪ: ಗ್ರಾಮ ಪಂಚಾಯಿತಿ ಚುನಾವಣೆ; ಪೊಲೀಸರಿಂದ ಪಥಸಂಚಲನ

ಕಸ್ತೂರಿ ಕಿರಣ ಸುದ್ದಿ

ಚಿಟಗುಪ್ಪ:
ಗ್ರಾಮ ಪಂಚಾಯಿತಿಗಳ ಪ್ರಥಮ ಸುತ್ತಿನ ಮತದಾನ ಮಂಗಳವಾರ ನಡೆಯುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಮನ್ನಾಎಖ್ಖೇಳಿ, ಬೇಮಳಖೇಡಾ, ವಿಠಲಪುರ್‍, ಬಸಿಲಾಪುರ್‍, ನಿರ್ಣಾ, ಮಂಗಲಗಿ, ತಾಳಮಡಗಿ, ಮಾಡಗೂಳ್, ಶಾಮತಾಬಾದ್, ಉಡಬಾಳ ಇತರ ಗ್ರಾಮಗಳಲ್ಲಿ ಪೊಲೀಸರ ಪಥ ಸಂಚಲನ ನಡೆಯಿತು.
ವೃತ್ತ ನಿರೀಕ್ಷಕ ಶರಣಬಸವೇಶ್ವರ ಭಜಂತ್ರಿ ಅವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್‍ ಅವರಾದ ಮಹಾಂತೇಶ್, ಮಡಿವಾಳಪ್ಪ, ಗಂಗಮ್ಮ ಅವರು ೧೦೦ ಪೊಲೀಸ ಪೇದೆಗಳ ತಂಡದೊಂದಿಗೆ ಮತದಾರರಲ್ಲಿ ನಿಷ್ಪಕ್ಷಪಾತವಾಗಿ, ನಿರ್ಭಯವಾಗಿ ಮತದಾನ ಮಾಡಲು ಜಾಗೃತಿ ಮೂಡಿಸಿದರು.
ಗ್ರಾಮಗಳ ಮುಖ್ಯ ಬೀದಿಗಳಲ್ಲಿ ಟಂಟಂ ಮಾಡುವ ಮೂಲಕ ಪಥ ಸಂಚಲನ ನಡೆಯಿತು. ನಾಗರಿಕರು ಆಸಕ್ತಿಯಿಂದ ಮನೆಗಳ ಹೊರಗಡೆ ಬಂದು ಪೊಲೀಸರ ಪಥ ಸಂಚಲನ ವೀಕ್ಷಣೆ ಮಾಡಿದರು.
ನಿರ್ಣಾದ ಭಾಸ್ಕರ ನಗರದಲ್ಲಿ ಪಥಸಂಚಲನೆ ವೇಳೆ ಮಕ್ಕಳು ಪೊಲೀಸರಿಗೆ ಸಲಾಮು ನೀಡಿದ್ದು ಕಂಡುಬಂತು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…