ಗ್ರಾಮ ಪಂಚಾಯತ್ ಚುನಾವಣೆ ಪೂರ್ವ ಸಿದ್ಧತೆ ಶುರು..
ಬೆಂಗಳೂರು: ರಾಜ್ಯದ 6025 ಗ್ರಾಮ ಪಂಚಾಯಿತಿಗಳ ಸಾರ್ವತಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಪೂರ್ವಸಿದ್ಧತೆ ಶುರುಮಾಡಿದೆ.
ಗ್ರಾಮ ಪಂಚಾಯತ ಚುನಾವಣೆಗಳ ಪೂರ್ವಸಿದ್ಧತೆಗಳ ಕುರಿತು ಚರ್ಚಿಸಲು ಆಯುಕ್ತರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ ವಿಭಾಗವಾರು ಸಭೆಯನ್ನು ರಾಜ್ಯ ಚುನಾವಣಾ ಆಯೋಗದ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದೆ. ಬೆಂಗಳೂರು ಹಾಗೂ ಮೈಸೂರು ವಿಭಾದ ಸಭೆಯನ್ನು 14-12-20 ರಂದು ನಡೆಯಲ್ಲಿದೆ, ಬೆಳಗಾಂವಿ ಹಾಗೂ ಕಲಬುರಗಿ ವಿಭಾಗದ ಸಭೆಯನ್ನು 15-02-20 ರಂದು ಸಭೆ ನಡೆಯಲ್ಲಿದೆ.
ಚರ್ಚೆಗಳ ವಿಷಯ: ವ್ಯಾಪ್ತಿ ಬದಲಾವಣೆ ಆಗುವ ಗ್ರಾಮ ಪಂಚಾಯಿತಿಗಳ ಪುನರ್ ರಚನೆಗೆ ಕೈಗೊಂಡಿರುವ ಕ್ರಮಗಳು. (ಹೊಸದಾಗಿ ವರ್ಗವಾರು ಸ್ಥಾನಗಳನ್ನು ನಿಗದಿಪಡಿಸಬೇಕಾದ ಗ್ರಾಮ ಪಂಚಾಯಿತಿಗಳು ಮತ್ತು ಜನಸಂಖ್ಯೆ ಮತ್ತು ವರ್ಗವಾರು ಸ್ಥಾನಗಳ ಬಗ್ಗೆ ಮಾಹಿತಿ) ಚರ್ಚೆ ನಡೆಯಲ್ಲಿದೆ.
ಹೊಸ ತಾಲೂಕುಗಳ ಕೇಂದ್ರಸ್ಥಾನದಲ್ಲಿ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸಲು ನಗರಾಭಿವೃದ್ಧಿ ಇಲಾಖೆಯು ಕರಡು/ಅಂತಿಮ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಆದ ಬದಲಾವಣೆಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚೆ. ಆಯಾ ಗ್ರಾಮ ಪಂಚಾಯಿತಿಗಳ ಪ್ರಥಮ ಸಭೆಯ ದಿನಾಂಗಳ ಬಗ್ಗೆ ಪರಿಶೀಲನೆ ದೃಧೀಕರಿಸುವ ಕುರಿತು ಹಾಗೂ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳನ್ನು ನಿಗದಿಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.
Date: 14-02-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















