ಗ್ರಾಪಂ ಚುನಾವಣೆ: ಬೀದರ ಶೇ.77.98 ಮತದಾನ
ಗ್ರಾಪಂ ಚುನಾವಣೆ: ಬೀದರ ಶೇ.77.98 ಮತದಾನ
ಬೀದರ: ಗ್ರಾಮ ಪಂಚಾಯಿತಿ ಎರಡನೇ ಹಂತದ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬೀದರ, ಔರಾದ್ (ಬಿ) ಮತ್ತು ಕಮಲನಗರ ತಾಲೂಕುಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆದ ಮತದಾನದ ಪ್ರಮಾಣವು ಶೆ.77.98 ರಷ್ಟು ನಡೆದಿದೆ.
ತಾಲೂಕುವಾರು ಮತದಾನದ ವಿವರ: ಬೆಳಗ್ಗೆ 7 ರಿಂದ 9 ರವರೆಗೆ ಬೀದರ ಶೇ.3.66., ಔರಾದ್ ಬಿ ಶೆ.5.55., ಕಮಲನಗರ ಶೆ.7.22 ಸೇರಿ ಒಟ್ಟು ಶೇ.4.96 ರಷ್ಟು ಮತದಾನವಾಗಿತ್ತು. ಬೆಳಗ್ಗೆ 7 ರಿಂದ 11ರವರೆಗೆ ಬೀದರ ಶೇ.22.78., ಔರಾದ್ ಬಿ ಶೇ.19.66 ಮತ್ತು ಕಮಲನಗರ ಶೇ.20.95 ಸೇರಿ ಒಟ್ಟು ಶೇ.21.52 ರಷ್ಟು ಮತದಾನವಾಗಿತ್ತು. ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗೆ ಬೀದರ ಶೇ.39.41., ಔರಾದ್ ಬಿ ಶೆ.34.22., ಕಮಲನಗರ ಶೆ.38.83 ಸೇರಿ ಒಟ್ಟು ಶೇ.37.84ರಷ್ಟು ಮತದಾನವಾಗಿತ್ತು. ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬೀದರನಲ್ಲಿ ಶೇ.57.46, ಔರಾದ್ ಬಿನಲ್ಲಿ ಶೆ.53.67 ಮತ್ತು ಕಮಲನಗರದಲ್ಲಿ ಶೆ.58.57 ಸೇರಿ ಶೇಕಡಾವಾರು ಒಟ್ಟು ಶೇ.56.65ರಷ್ಟು ಮತದಾನವಾಗಿದೆ.
ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಬೀದರ ತಾಲೂಕಿನಲ್ಲಿ 77.96., ಔರಾದ್ ಬಿ ತಾಲೂಕಿನಲ್ಲಿ 76.61 ಮತ್ತು ಕಮಲನಗರ ತಾಲೂಕಿನಲ್ಲಿ 79.71 ಆಗಿದ್ದು, ಮೂರು ತಾಲೂಕುಗಳು ಸೇರಿ ಒಟ್ಟು 77.98ರಷ್ಟು ಮತದಾನವಾಗಿದೆ.
ಬೀದರ, ಔರಾದ್ (ಬಿ) ಮತ್ತು ಕಮಲನಗರ ಮೂರು ತಾಲ್ಲೂಕುಗಳಲ್ಲಿನ ಒಟ್ಟು 72 ಗ್ರಾಮ ಪಂಚಾಯಿತಿಗಳಿಗೆ ಒಟ್ಟು 509 ಮತಗಟ್ಟೆಗಳಲ್ಲಿ ನಡೆದ ಈ ಚುನಾಣೆಯಲ್ಲಿ 3389 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಜಿಲ್ಲಾಡಳಿತ ಕಾರ್ಯ ಯಶಸ್ವಿ: ಜಿಲ್ಲೆಯಲ್ಲಿ ನಡೆದ ಮೊದಲನೇ ಹಾಗೂ ಎರಡನೇ ಹಂತದ ಗ್ರಾಮ ಪಂಚಾಯತ ಚುನಾವಣೆ ಯಾವುದು ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ.
ಎರೆಡು ಹಂತದ ಚುನಾವಣೆ ಪೂರ್ಣಗೊಂಡ ನ್ಜಿತರ ಅಧಿಕಾರಿಗಳ ತಂಡ ಬಿವಿಬಿ ಕಾಲೇಜು ಮೈದಾನದಲ್ಲಿ ಒಟ್ಟಾಗಿ ರಾತ್ರೆಯ ಊಟ ಸವಿದ್ದರು. ಜಿಲ್ರಾಲಾಧಿಕಾರಿ ಮಚಂದ್ರನ್ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಜಿಲ್ಲಾ ಪಂಚಾಯತಿ ಸಿಇಓ ಜ್ಞಾನೇಂದ್ರಕುಮಾರ ಗಂಗ್ವಾರ್, ಸಹಾಯ ಆಯುಕ್ತೆ ಪನ್ಬಾರ್, ಡಿವೈಎಸ್ಪಿ ಬಸವೇಶ್ವರ ಹೀರಾ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















