Home ನಿಮ್ಮ ಜಿಲ್ಲೆ ಬೀದರ ಗ್ರಾಪಂ ಚುನಾವಣೆ: ಎರಡನೇ ಹಂತದ ಮತದಾನ ಡಿಸೆಂಬರ್ 27ಕ್ಕೆ

ಗ್ರಾಪಂ ಚುನಾವಣೆ: ಎರಡನೇ ಹಂತದ ಮತದಾನ ಡಿಸೆಂಬರ್ 27ಕ್ಕೆ

ಗ್ರಾಪಂ ಚುನಾವಣೆ: ಎರಡನೇ ಹಂತದ ಮತದಾನ ಡಿಸೆಂಬರ್ 27ಕ್ಕೆ

ಬೀದರ: ಬೀದರ, ಔರಾದ್ ಮತ್ತು ಕಮಲನಗರ ತಾಲೂಕುಗಳಲ್ಲಿ ಡಿಸೆಂಬರ್ 27ರಂದು ಎರಡನೇ ಹಂತದ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಬೀದರ 33, ಔರಾದ್ 21 ಮತ್ತು ಕಮಲನಗರ 18 ಸೇರಿ ಒಟ್ಟು 72 ಗ್ರಾಮ ಪಂಚಾಯಿತಿಗಳಿಗೆ ಡಿಸೆಂಬರ್ 27ರಂದು ಮತದಾನ ನಡೆಯಲಿದೆ.ಈ ಮೂರು ತಾಲೂಕುಗಳು ಸೇರಿ ಪುರುಷ ಮತದಾರರು 2,07,886 ಮತ್ತು ಮಹಿಳಾ ಮತದಾರರು 1,94,286 ಮತ್ತು ಇತರೇ ಏಳು ಸೇರಿ ಒಟ್ಟು 4,02,179 ಮತದಾರರು ತಮ್ಮ ಮತ ಹಕ್ಕನ್ನು ಚಲಾಯಿಸಲಿದ್ದಾರೆ.
ಬೀದರನಲ್ಲಿ 204 ಕ್ಷೇತ್ರದಲ್ಲಿ 615 ಸದಸ್ಯ ಸ್ಥಾನಗಳಿಗೆ, ಔರಾದ್ನಲ್ಲಿ 133 ಕ್ಷೇತ್ರದಲ್ಲಿ 389 ಸದಸ್ಯ ಸ್ಥಾನಗಳಿಗೆ ಮತ್ತು ಕಮಲನಗರದಲ್ಲಿ 100 ಕ್ಷೇತ್ರಗಳಲ್ಲಿ 281 ಸದಸ್ಯ ಸ್ಥಾನಗಳಿಗೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ.

https://play.google.com/store/apps/details?id=kknewsonline.in

ಬೀದರ, ಔರಾದ್ ಮತ್ತು ಕಮಲನಗರ ತಾಲೂಕುಗಳ ಒಟ್ಟು 72 ಗ್ರಾಮ ಪಂಚಾಯಿತಿಗಳಲ್ಲಿ 1285 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನಗಳು 4., 109 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 1172 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಪರಿಶಿಷ್ಟ ಜಾತಿಯ 1007, ಪರಿಶಿಷ್ಟ ಪಂಗಡದ 437, ಹಿಂದುಳಿದ ಅ ವರ್ಗದ 210, ಹಿಂದುಳಿದ ಬ ವರ್ಗ 20, ಸಾಮಾನ್ಯ 1715 ಸೇರಿ ಒಟ್ಟು 3389 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಇರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂದೋಸ್ತ್ಗೆ ವ್ಯವಸ್ಥೆ: ಡಿಸೆಂಬರ್ 27ರಂದು ಬೀದರ, ಔರಾದ್ ಮತ್ತು ಕಮಲನಗರ ತಾಲೂಕುಗಳಲ್ಲಿ ನಡೆಯಲಿರುವ ಎರಡನೇ ಹಂತದ ಮತದಾನದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು 37 ಪಿಎಸ್‌ಐಗಳು, 5 ಸಿಪಿಐಗಳು ಮತ್ತು 3 ಡಿಎಸ್ಪಿ ಅವರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರು ತಿಳಿಸಿದ್ದಾರೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…