ಗರ್ಭಪಾತ ಮಾತ್ರೆಗಳ ದುರ್ಬಳಕೆ ಮಾಡುವವರ ವಿರುದ್ಧ ಕ್ರಮ: ಡಿಸಿ
ಬೀದರ: ಜಿಲ್ಲಾಧಿಕಾರಿ ಡಾ| ಹೆಚ್.ಆರ್.ಮಹಾದೇವ್ ಅವರ ಅಧ್ಯಕ್ಷತೆಯಲ್ಲಿ ಜ.13ರಂದು ಬ್ರಿಮ್ಸ್ ಕಾಲೇಜಿನಲ್ಲಿ ಔಷಧ ಅಂಗಡಿ ಹಾಗೂ ಡಿಸ್ಟಿçÃಬ್ಯೂಟರ್ ಮಾಲೀಕರ ಸಭೆ ನಡೆಯಿತು.
ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಕುಂದುತ್ತಿರುವ ಲಿಂಗಾನುಪಾತದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಗರ್ಭಪಾತದ ಮಾತ್ರೆಗಳ ದುರುಪಯೋಗ ನಿಲ್ಲಿಸಲು ಎಲ್ಲ ಔಷಧಿ ಅಂಗಡಿಯವರು ಕೈಜೋಡಿಸಬೇಕು ಎಂದು ಸೂಚಿಸಿದರು. ಮತ್ತು ಹೆಣ್ಣು ಭ್ರೂಣಹತ್ಯೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಜನರು ನೇರವಾಗಿ ಅಂಗಡಿಗಳಲ್ಲಿ ಗರ್ಭಪಾತದ ಮಾತ್ರೆಗಳನ್ನು ತೆಗೆದುಕೊಂಡು ಅನಾಹುತಕ್ಕೆ ಇಡಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಇದನ್ನು ತಡೆಯಲು ಕಠಿಣ ಕ್ರಮಗಳನ್ನು ಜರುಗಿಸಲು ಹಿಂಜರಿಯುವುದಿಲ್ಲವೆAದು ಎಚ್ಚರಿಸಿದರು. ಎಲ್ಲ ಅಂಗಡಿ ಮಾಲೀಕರು ಗರ್ಭಪಾತದ ಮಾತ್ರೆಗಳು ಇಡುವುದಿಲ್ಲ ಹಾಗೂ ಮಾರಾಟ ಮಾಡುವುದಿಲ್ಲವೆಂದು ಸರ್ವಸಮ್ಮತಿ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಇಂದುಮತಿ ಪಾಟೀಲ್ ಅವರು ಮಾತನಾಡಿ, ಲಿಂಗಾನುಪಾತವು 1000 ಗಂಡು ಮಕ್ಕಳಿಗೆ 904 ಹೆಣ್ಣು ಮಕ್ಕಳು ಇರುತ್ತಾರೆ. ಹಾಗಾಗಿ ತಾವೆಲ್ಲರು ಇಲಾಖೆಯೊಂದಿಗೆ ಕೈಜೋಡಿಸಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಕೋರಿದರು.
ವೈದ್ಯಾಧಿಕಾರಿ ಡಾ.ಉಮಾ ದೇಶಮುಖ ಅವರು ಮಾತನಾಡಿ, ಹೆಚ್ಚು ಹೆಣ್ಣು ಮಕ್ಕಳನ್ನು ಹೊಂದಿರುವ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಗರ್ಭಪಾತ ಮಾಡಿಸಲು ಮುಂದಾಗುತ್ತಿರುವುದು ಕಂಡುಬAದಿದೆ. ಹೆಣ್ಣು ಮಕ್ಕಳ ಪೋಷಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ಎಲ್ಲ ಅಂಗಡಿ ಮಾಲೀಕರಿಗೆ ಗರ್ಭಪಾತದ ಮಾತ್ರೆಗಳನ್ನು ತಮ್ಮ ಔಷಧಿ ಅಂಗಡಿಯಲ್ಲಿ ಇಡುವುದಿಲ್ಲವೆಂದು ಹಾಗೂ ಮಾರಾಟ ಮಾಡುವುದಿಲ್ಲವೆಂದು ಪ್ರಮಾಣವಚನವನ್ನು ಬೋಧಿಸಲಾಯಿತು.
ಸಭೆಯಲ್ಲಿ ಬ್ರಿಮ್ಸ್ ನಿರ್ದೇಶಕರಾದ ಡಾ.ಶಿವಕುಮಾರ, ಡಾ.ಜಯಶ್ರೀ ಸ್ವಾಮಿ, ಡಾ.ಸುನಂದಾ ಬಚ್ಚಾ ಸಹಾಯಕ ಔಷಧ ನಿಯಂತ್ರಕರು ಹಾಗೂ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಶಿವರಾಜ ಪಾಟಿಲ್, ಕಾರ್ಯದರ್ಶಿ ಮೊಹಮ್ಮದ ಖಾಲೆದ್ ಶರೀಫ್, ಮಹೇಶರೆಡ್ಡಿ ಉಪಸ್ಥಿತರಿದ್ದರು.
Date: 13-01-2020 Time: 6:30PM
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















