ಖೇಣಿ ಕುಟುಂಬದವರಿಗೆ ಪಾಸಿಟಿವ್
ಹುಮನಾಬಾದ: ಬಿಎಸ್‌ಎಸ್‌ಕೆ ಅಧ್ಯಕ್ಷ ಸಂಜಯ್ ಖೇಣಿ ಸೇರಿ ಕುಟುಂಬದ ಮೂರು ಜನ ಸದಸ್ಯರಿಗೆ ಭಾನುವಾರ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಸಂಜಯ ಖೇಣಿ, ಪತ್ನಿ ದೀಪಾಲಿ ಖೇಣಿ ಹಾಗೂ ಮಗ ಡಾ| ಆದಿತ್ಯ ಖೇಣಿ ಅವರಿಗೆ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಸ್ವ ಗ್ರಾಮದಿಂದ ಚಿಕಿತ್ಸೆಗಾಗಿ ಕಲಬುರಗಿಗೆ ತೆರಳಿದ್ದಾಗಿ ಖುದ್ದು ಸಂಜಯ್ ಖೇಣಿ ಮಾಹಿತಿ ನೀಡಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದು, ಸದ್ಯ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆದರೂ ಕೂಡ ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದಾರೆ.
ಕಡ್ಡಾಯವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಜನರ ಮಧ್ಯೆ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಬೇಕು. ಆಗ ಮಾತ್ರ ಕೊರೊನಾ ಹಾವಳಿ ತಡೆಯಬಹುದು. ಅಲ್ಲದೆ, ಪಾಸಿಟಿವ್ ಬಂದಿರುವ ವ್ಯಕ್ತಿಗಳು ಬಹಿರಂಗವಾಗಿ ಹೇಳಿಕೊಳ್ಳಬೇಕು ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಂಪರ್ಕದ ಜನರಿಗೂ ಕೂಡ ಕರೆಮಾಡಿ ಮಾಹಿತಿ ನೀಡಬೇಕು. ಅವರು ಕೂಡ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಿ, ಅವರ ಕುಟುಂಬ ಕೂಡ ಆರೋಗ್ಯವಂತರಾಗಿ ಇರುವಂತೆ ಮಾಡಬೇಕು. ಇದು ನಮ್ಮ ಕರ್ತವ್ಯ ಎಂದು ಭಾವಿಸಬೇಕು ಎಂದ ಅವರು, ಪಾಸಿಟಿವ್ ಬಂದಿರುವ ಮಾಹಿತಿ ಜನರಿಗೆ ಗೊತ್ತಾದರೆ ಮಾನಹಾನಿ ಸಂಭವಿಸುತ್ತೆ ಎಂಬ ಮನೋಭಾವನೆ ಬಿಡಬೇಕು ಎಂದು ಸಲಹೆ ಮಾಡಿದ್ದಾರೆ.
Date: 12-07-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…