ಕ್ವಾರಂಟೈನಲ್ಲಿ ಇರುವ ಜನರಿಗೆ ಊಟದ ವ್ಯವಸ್ಥೆ ಮಾಡಿ:
ಹುಮನಾಬಾದ: ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಂದ ಬಂದ ಜನರಿಗೆ ಕನಕಟ್ಟ ಗ್ರಾಮದ ಶಾಲೆಯಲ್ಲಿ ವಾಸ್ಥವ್ಯ ವ್ಯವಸ್ಥೆಮಾಡಿದ್ದು, ಅಲ್ಲಿನ ಜನರಿಗೆ ಊಟದ ವ್ಯವಸ್ಥೆ ಆಗುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇಧಿಕೆ ಮುಖಂಡ ಮನೋಜ ಸಿತಾಳೆ ಶಾಸಕರ ಗಮನಕ್ಕೆ ತಂದರು.
11 ಜನರು ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮನೆಯಿಂದ ಊಟ ತರಿಸಿಕೊಂಡು ಊಟಮಾಡುವಂತೆ ಪಂಚಾಯತ ಅಧಿಕಾರಿ ಹೇಳುತ್ತಿದ್ದಾರೆ. ಮನೆಯಿಂದ ಊಟ ತಂದ ನಂತರ ಅದೇ ಪಾತ್ರೆಗಳು ಮತ್ತೆ ಮನೆಗೆ ತೆಗೆದುಕೊಂಡು ಹೊಗುತ್ತಿದ್ದಾರೆ ಎಂದು ದೂರಿದರು. ಈ ಕುರಿತು ಪಿಡಿಓ ಸುರೇಖಾ ಮನೆಯ ಊಟ ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಾಯತ ವತಿಯಿಂರ ಊಟದ ವ್ಯವಸ್ಥೆಮಾಡಿಲ್ಲ ಎಂದು ತಿಳಿಸಿದರು.
ನಂತರ ಮಾತನಾಡಿದ ಶಾಸಕ ರಾಜಶೇಖರ ಪಾಟೀಲ, ಬೇರೆ ಕಡೆಗಳಿಂದ ಬಂದ ಜನರು ಸರ್ಕಾರಿ ಕಟ್ಟಡದಲ್ಲಿ ಉಳಿದುಕೊಂಡಿರುವ ಕಾರಣ ಅಲ್ಲಿನ ಪಂಚಾಯತ ಅಧಿಕಾರಿಗಳು ಊಟದ ವ್ಯವಸ್ಥೆ ಮಾಡಬೇಕು. ಸರ್ಕಾದ ನಿಯಮಗಳು ಪಾಲೀಸಬೇಕು ಎಂದು ಸೂಚಿಸಿದರು.
Date: 28-04-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















