ಕ್ರಿಯಾ ಯೋಜನೆ ಪ್ರಕಾರ ನಡೆಯುತ್ತಿಲ್ಲ ಅಂತೆ ಕಾಮಗಾರಿ..?
ಕ್ರಿಯಾ ಯೋಜನೆ ಪ್ರಕಾರ ನಡೆಯುತ್ತಿಲ್ಲ ಅಂತೆ ಕಾಮಗಾರಿ..?
ಹುಮನಾಬಾದ: ಪಟ್ಟಣದ ಕಲ್ಲೂರ್ ರಸ್ತೆಯಲ್ಲಿ ನಡೆಯುತ್ತಿರುವ ನಗರೋತ್ಥಾನ ಯೋಜನೆಯ ಕಾಮಗಾರಿ ಕ್ರೀಯಾ ಯೋಜನೆ ಪ್ರಕಾರ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಕಲ್ಲೂರ್ ರಸ್ತೆಯ ಎಡ ಮತ್ತು ಬಲ ಬದಿಯಲ್ಲಿ ಫುಟ್ ಪಾತ್ ಕಾಮಗಾರಿ ನಡೆಯುತ್ತಿದ್ದು, ಕ್ರೀಯಾ ಯೋಜನೆ ಪ್ರಕಾರ ಕೆಲಸ ನಡೆಯುತ್ತಿಲ್ಲ. ಚರಂಡಿ ಕಾಮಗಾರಿಗೆ ಗಿಲಾವ ಮಾಡಬೇಕು ಎಂಬ ನಿಯಮ ಇದ್ದರೂ ಕೂಡ ಗಿಲಾವ ಮಾಡದೆ ಕಾಮಗಾರಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೂಡ ಇವೆ. ಅಲ್ಲದೆ, ಚರಂಡಿಯ ಮೇಲೆ ಹಾಕಲಾದ ಬೇಡ್ ಬಿರುಕು ಬಿಟ್ಟಿದ್ದು, ವ್ಯಾಪರಸ್ಥರು ಗುಣಮಟ್ಟದ ಕುರಿತು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಪುರಸಭೆ ಇಂಜಿನಿಯರ್ ಗಮನ ಸೆಳೆದರು ಕೂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಲು ಕಾರ್ಯನಡೆದಿಲ್ಲ. ಈ ಕುರಿತು ಬೀದರ ನಗರಾಭಿವೃದ್ಧಿ ಇಲಾಖೆಯ ಪಿಡಿ ಶರಣಬಸಪ್ಪ ಕೊಟ್ಟಪಗೊಳ್ಳ್ ಅವರು ಕಾಮಗಾರಿ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
ಕಾಮಗಾರಿ ಕುರಿತು ಗುತ್ತೆದಾರ ಶಿಲವಂತ ಪ್ರತಿಕ್ರಿಯೆ ನೀಡಿದ್ದು, ಸದ್ಯ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮಧ್ಯೆಯೇ ಆರೋಪಗಳು ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕಾಮಗಾರಿಯ ಗುಣಮಟ್ಟದ ಪರಿಶೀಲನೆ ಮಾಡುವ ತಂಡದವರು ಪರಿಶೀಲನೆ ನಡೆಸುತ್ತಾರೆ ಎಂದು ಹೇಳುವ ಮೂಲಕ ಕಾಮಗಾರಿ ಕಳಪೆ ಇದ್ದರೂ ಯಾರು ಮಾತಾಡಬಾರದು ಎಂಬಂತೆ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ನಡೆಯದಿದ್ದರೆ ಸಂಬಂಧಿಸಿದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಅಧಿಕಾರಿಗಳ ಕರ್ತವ್ಯದ ಕುರಿತು ಪ್ರಶ್ನಿಸಿದ್ದಾರೆ.
ಸ್ಥಳಿಯ ಶಾಸಕ ರಾಜಶೇಖರ ಪಾಟೀಲ ವಿವಿಧ ಕಾಮಗಾರಿ ಚಾಲನೆ ನೀಡುವ ಹಂತದಲ್ಲಿ ಕಳಪೆ ಕಾಮಗಾರಿ ಅಥವ ನಿಯಮದ ಪ್ರಕಾರ ಕಾಮಗಾರಿ ನಡೆಯದಿದ್ದರೆ ಸಾರ್ವಜನಿಕರು ಕಾಮಗಾರಿ ತಡೆಯುವ ಕೆಲಸ ಮಾಡಬೇಕು ಎಂದು ಹೇಳಿದ ಮಾತುಗಳು ಇಲ್ಲಿ ಸ್ಮರಿಸಬಹುದ್ದಾಗಿದೆ.
ಒಟ್ಟಾರೆ ಕಾಮಗಾರಿ ಕುರಿತು ಅಧಿಕಾರಿಗಳ ತಂಡ ತಮ್ಮ ಕರ್ತವ್ಯ ಸೂಕ್ತವಾಗಿ ನಿರ್ವಹಿಸಿದರೆ ಗುತ್ತೆದ್ದಾರ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ.
Date:20-06-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















