ಕೊರೋನಾ ವೈರಸ್: ಮುನ್ನೆಚ್ಚರಿಕೆ ವಹಿಸಿ
ಬೀದರ: ನೊವೆಲ್ ಕೊರೋನಾ ವೈರಸ್ (ಕೋವಿಡ್-19) ಸೋಂಕು ಹರಡದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯಪಡದೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿ.ಜಿ.ರೆಡ್ಡಿ ಅವರು ಮನವಿ ಮಾಡಿದ್ದಾರೆ.
ಕೊರೋನಾ ವೈರಸ್ ಒಂದು ವೈರಾಣು ಸೋಂಕಾಗಿದ್ದು, ಇದನ್ನು ಕೋವಿಡ್-19 ಎಂದು ಸಹ ಕರೆಯಲಾಗುತ್ತದೆ. ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಅಥವಾ ಕಷ್ಟದ ಉಸಿರಾಟ ಹಾಗೂ ಬೇಧಿ ಇವು ಅದರ ಲಕ್ಷಣಗಳಾಗಿವೆ. ಈ ಲಕ್ಷಣಗಳಿಗನುಸಾರವಾಗಿ ಚಿಕಿತ್ಸೆ ನೀಡಲಾಗುತ್ತದೆಯೇ ಹೊರತು ನಿಖರವಾದ ಚಿಕಿತ್ಸೆ ಇರುವುದಿಲ್ಲ. ಆದಾಗ್ಯೂ ಸಾರ್ವಜನಿಕರು ಭಯಪಡುವ ಅವಶ್ಯಕತೆ ಇಲ್ಲ, ಪರಿಪೂರ್ಣ ಮುಂಜಾಗೃತಾ ಕ್ರಮ ಅನುಸರಿಸಿದರೆ ಈ ಸೋಂಕು ಬರದಂತೆ ತಡೆಯಬಹುದು ಎಂದು ತಿಳಿಸಿದ್ದಾರೆ.
ಮುಂಜಾಗೃತಾ ಕ್ರಮಗಳು: ಕೊರೋನಾ ವೈರಸ್ ಭಾದಿತ ದೇಶಗಳಿಂದ ಅಥವಾ ವಿದೇಶಗಳಿಂದ ಭಾರತಕ್ಕೆ ಬಂದವರು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿದೇಶ ಪ್ರವಾಸ ಮಾಡಿ ಬಂದವರು ಕೋವಿಡ್-19 ಪರೀಕ್ಷೆ ಮಾಡಿಸಿದಾಗ –ವಿಇ ವರದಿ ಬಂದಾಗ್ಯೂ 14 ದಿನಗಳವರೆಗೆ ಗೃಹ ಬಂಧನದಲ್ಲಿರಿ, ಯಾರನ್ನೂ ಸಂಪರ್ಕಿಸಬಾರದು.
ಕೊರೋನಾ ವೈರಸ್ ಲಕ್ಷಣಗಳಿರುವ ವ್ಯಕ್ತಿಗಳು ಅಸ್ತಮಾ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುವ ವಯೋವೃದ್ಧರಾಗಿದ್ದರೆ ತೀವ್ರ ನಿಗಾವಣೆಯಲ್ಲಿಡಬೇಕು. ಪ್ರತಿಯೊಬ್ಬರು ಸೋಂಕು ಪೀಡಿತರ ಸಂಪರ್ಕದಿ0ದ ದೂರವಿರಬೇಕು. ಕೆಮ್ಮುವಾಗ, ಸೀನುವಾಗ ಕೈವಸ್ತçವನ್ನು ಬಳಸಬೇಕು. ವಿನಾಕಾರಣ ಬಾಯಿ, ಮೂಗು ಹಾಗೂ ಕಣ್ಣುಗಳಿಗೆ ಕೈಗಳಿಂದ ವರೆಸಿಕೊಳ್ಳಬೇಡಿ. ಸುರಕ್ಷಿತವಲ್ಲದ ಸಾಕು ಪ್ರಾಣಿಗಳನ್ನು ಹಾಗೂ ಕಾಡು ಪ್ರಾಣಿಗಳನ್ನು ಸುಮ್ಮ-ಸುಮ್ಮನೆ ಮುಟ್ಟಬೇಡಿ. ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿ, ವ್ಯಕ್ತಿಗಳ ಮಧ್ಯೆ ಕನಿಷ್ಟ 2 ಮೀಟರ್ ಅಂತರವಿರುವAತೆ ನೋಡಿಕೊಳ್ಳಬೇಕು.
ವಿನಾಕಾರಣ ಬೇರೆ ಬೇರೆ ವಸ್ತುಗಳನ್ನು ಮುಟ್ಟಬಾರದು. ತಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಪದೇ ಪದೇ ತೊಳೆದುಕೊಳ್ಳಬೇಕು. ಮಾಂಸ, ಮೊಟ್ಟೆ ಇತರೆ ಮಾಂಸಹಾರ ಸೇವನೆ ಮಾಡುವಂತಹವರು ಚೆನ್ನಾಗಿ ಬೇಯಿಸಿ ತಿನುವುದು. ಈ ರೋಗದ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಬೇಧಿ ಇತ್ಯಾದಿ ಕಂಡುಬAದರೆ ತಕ್ಷಣ ಸಮೀಪದ ಆಸ್ಪತ್ರೆಗೆ ಬರಬೇಕು. ಯಾವುದೇ ಕಾರಣಕ್ಕೂ ಈ ರೋಗದ ಕುರಿತು ವದಂತಿಗಳಿಗೆ ಕಿವಿಗೊಡದೆ ಈ ರೋಗದ ಕುರಿತಾದ ಮುಂಜಾಗೃತಾ ಕ್ರಮ, ಚಿಕಿತ್ಸೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಆಸ್ಪತ್ರೆಗಳಿಗೆ ಬೇಟಿ ನೀಡಿ ಪಡೆಯುವುದು. ಈ ರೋಗಕ್ಕೆ ಚಿಕಿತ್ಸೆ ಉಂಟೆAದು ಹಣ ಸೆಳೆಯುವ ಸಲುವಾಗಿ ವದಂತಿ ಹಬ್ಬಿಸುವವರನ್ನು ನಂಬಿ ಮೋಸ ಹೋಗಬೇಡಿರಿ ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ 24*7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ ಇಲ್ಲವೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ಕಾರ್ಯಾಲಯದ ಸಮಗ್ರ ಕಣ್ಗಾವಲು ಘಟಕವನ್ನು ಇಲ್ಲವೆ 08482-224144 ದೂರವಾಣಿಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Date: 16-03-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















