ಕೇಂದ್ರ ಆಹಾರ ನಿಗಮಕ್ಕೆ ಉಮೇಶ ಬಿರ್ಬಿಟ್ಟೆ ಅಟ್ಟೂರ್ ನೇಮಕ.
ಕೇಂದ್ರ ಆಹಾರ ನಿಗಮಕ್ಕೆ ಉಮೇಶ ಬಿರ್ಬಿಟ್ಟೆ ಅಟ್ಟೂರ್ ನೇಮಕ.
ಕಲಬುರಗಿ: ಭಾರತ ಸರ್ಕಾರದ ಆಹಾರ ನಿಗಮದ ನಾಮನಿರ್ದೇಶನ ಸದಸ್ಯರಾಗಿ ಕಲಬುರಗಿ ಮೂಲದ ಉಮೇಶ ಎಸ್. ಬಿರ್ಬಿಟ್ಟೆ (ಅಟ್ಟೂರ್) ನೇಮಕಗೊಂಡಿದ್ದಾರೆ.
ಕರ್ನಾಟಕ ರಾಜ್ಯಕ್ಕಾಗಿ ಭಾರತದ ಆಹಾರ ನಿಗಮದ ಸಮಾಲೋಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಕುರಿತು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಕ್ರಿಶ್ ಭವನ, ನವದೆಹಲಿ ವತಿಯಿಂದ ಆದೇಶ ಪತ್ರ ಹೊರಡಿಸಲಾಗಿದೆ.
ಉಮೇಶ್ ಬಿರ್ಬಿಟ್ಟೆ ಮೂಲತಹ ಬಸವಕಲ್ಯಾಣ ತಾಲೂಕಿನ ಅಟ್ಟೂರ್ ಗ್ರಾಮದವರಾಗಿದ್ದಾರೆ. ಕಲಬುರಗಿ ನಗರದಲ್ಲಿ ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಗೊಂಡ ಹಿನ್ನಲೆಯಲ್ಲಿ ಅಭಿಮಾನಿಗಳ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.

ಜೂ.15 ರಂದು ಸಮಾಜ ಕಲ್ಯಾಣ ಸಚಿವ* *ಡಾ.ಹೆಚ್.ಸಿ.ಮಹಾದೇವಪ್ಪ ಅವರ ಬೀದರ ಜಿಲ್ಲಾ ಪ್ರವಾಸ
ಬೀದರ, ಜೂನ್.12: ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಅವರು …

















