Home ನಿಮ್ಮ ಜಿಲ್ಲೆ ಬೀದರ ಕೆಲಸ ಮಾಡದ ಗುತ್ತೆದಾರರ ಕರಾರು ರದ್ದು : ಡಿಸಿ

ಕೆಲಸ ಮಾಡದ ಗುತ್ತೆದಾರರ ಕರಾರು ರದ್ದು : ಡಿಸಿ

ಮುಂದಿನ 24 ಗಂಟೆಗಳಲ್ಲಿ ತಪ್ಪದೇ ಕೆಲಸದ ಪ್ರಗತಿ ಸಲ್ಲಿಸಬೇಕು

ಬೀದರ: ನಗರೋತ್ಥಾನ ವಿವಿಧ ಹಂತಗಳ ಕಾಮಗಾರಿಗಳು ಗುತ್ತಿಗೆದಾರರು ಮುಂದಿನ 24 ಗಂಟೆಗಳಲ್ಲಿ ತಪ್ಪದೇ ಕೆಲಸದ ಪ್ರಗತಿ ಸಲ್ಲಿಸಬೇಕು. ತಪ್ಪಿದಲ್ಲಿ ಕರಾರು ಒಪ್ಪಂದ ರದ್ದುಪಡಿಸಿ ಮರು ಟೆಂಡರ್ ಆಹ್ವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಬೀದರ ಹಾಗೂ ಬಸವಕಲ್ಯಾಣ ನಗರಸಭೆ, ಹುಮನಾಬಾದ್, ಚಿಟಗುಪ್ಪಾ, ಭಾಲ್ಕಿ, ಹಳ್ಳಿಖೇಡ್ (ಬಿ) ಪುರಸಭೆ, ಔರಾದ್ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಅಭಿಯಂತರು ಮತ್ತು ಮೇ| ಶಾರದಾ ಕನ್ಸ್ಟ್ರಕ್ಷನ್ಸ್ ಪ್ರೆöÊ.ಲಿ. ಮತ್ತು ಮೇ| ಕೊಟರಕಿ ಕನ್ಸಟ್ರಕ್ಷನ್ಸ್ ಬೀದರ ಏಜೆನ್ಸಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ನಗರೋತ್ಥಾನ ಹಂತ-3, ನಗರೋತ್ಥಾನ (ವಿಶೇಷ) ಹಾಗೂ ನಗರೋತ್ಥಾನ (ಶೇ.4 ಪ್ರೋತ್ಸಾಹಧನ) ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿ, ಹಲವು ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿದ್ದ ಅಧಿಕಾರಿಗಳು, ಅಭಿಯಂತರರು, ಗುತ್ತಿಗೆದಾರರು ಹಾಗೂ ಗುತ್ತಿಗೆದಾರರ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ನಗರಸಭೆ ಬೀದರ ವ್ಯಾಪ್ತಿಯಲ್ಲಿ ನಗರೋತ್ಥಾನ ಹಂತ-3, ನಗರೋತ್ಥಾನ (ವಿಶೇಷ) ಯೋಜನೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಈಗಾಗಲೇ ಕಾಮಗಾರಿ ಆದೇಶ ನೀಡಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳುಗಳ ಕಾಲಮಿತಿ ನಿಗದಿಪಡಿಸಲಾಗಿತ್ತು. ಇದುವರೆಗೆ 4 ಉಪ ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಅಲ್ಲದೆ, ಈ ವರೆಗೆ ಗುತ್ತೆದಾರರಿಗೆ 4 ನೋಟಿಸ್‌ಗಳನ್ನು ನೀಡಲಾಗಿದ್ದು, ಗುತ್ತಿಗೆದಾರರು ಕಾಮಗಾರಿಯ ಅನುಷ್ಠಾನದಲ್ಲಿ ಯಾವುದೇ ಪ್ರಗತಿ ಸಾಧಿಸಿರುವುದಿಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು.

ನಗರೋತ್ಥಾನ ಹಂತ-3 ಯೋಜನೆಯಡಿ ಕಾಮಗಾರಿಗಳ ಪೈಕಿ ಕೆಲವು ಕಾಮಗಾರಿಗಳನ್ನು ಪ್ರಾರಂಭಿಸಲು ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎಂದು ಸಂಬAಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಭೆಗೆ ತಿಳಿಸಿದರು. ಈಗಾಗಲೇ ಕಾಮಗಾರಿ ಆದೇಶ ನೀಡಲಾಗಿದೆ. ಸದರಿ ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳುಗಳ ಕಾಲಮಿತಿ ನಿಗಧಿಪಡಿಸಲಾಗಿದ್ದು, 2020ರ ಮಾರ್ಚ 10ಕ್ಕೆ ಮುಕ್ತಾಯವಾಗಲಿದೆ. ಬಾಕಿ ಉಳಿದ ಕಾಮಗಾರಿಗಳನ್ನು ನಿಗಧಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಗುತ್ತಿಗೆದಾರರಿಗೆ ನೊಟೀಸ್ ನೀಡಲು ಸೂಚನೆ:
ಬಸವಕಲ್ಯಾಣ ನಗರಸಭೆ ವ್ಯಾಪ್ತಿಯ ನಗರೋತ್ಥಾನ ಹಂತ-3 ಹಾಗೂ ನಗರೋತ್ಥಾನ (ಶೇ.4 ಪ್ರೋತ್ಸಾಹಧನ) ಯೋಜನೆಯಡಿ ಕಾಮಗಾರಿಗಳು ಪ್ರಗತಿಯ ಕುರಿತು ಚರ್ಚಿಸಲಾಯಿತು. 12 ಕಾಮಗಾರಿಗಳ ಪೈಕಿ 03 ಕಾಮಗಾರಿಗಳು ಪೂರ್ಣಗೊಂಡಿದ್ದು, 9 ಕಾಮಗಾರಿಗಳು ಪೂರ್ಣಗೊಳಿಸಬೇಕಾಗಿದೆ. ಕಾಮಗಾರಿಯು ತುಂಬಾ ನಿಧಾನಗತಿಯಿಂದ ಸಾಗುತ್ತಿದೆ. ಗುತ್ತಿಗೆದಾರರು ಕೆಲವು ಕಡೆಗಳಲ್ಲಿ ಗುಣಮಟ್ಟದ ಹಾಗೂ ನಿರ್ಧಿಷ್ಟತೆಯ ಪ್ರಕಾರ ಕಾಮಗಾರಿಗಳನ್ನು ನಿರ್ವಹಿಸುತ್ತಿಲ್ಲವೆಂದು ಬಸವಕಲ್ಯಾಣ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಭೆಗೆ ತಿಳಿಸಿದರು. ಮೇ: ಟ್ರಾನ್ಸಪೊಟೆಕ್ ಇವರ ಅಭಿಯಂತರರು ಕೂಡಾ ನಿಯಮಿತವಾಗಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡುತ್ತಿಲ್ಲವೆಂದು ತಿಳಿಸಿದರು. ಈ ಬಗ್ಗೆ ಸಂಬAಧಿಸಿದ ಗುತ್ತಿಗೆದಾರರಿಗೆ ಹಾಗೂ ಪಿ.ಎಂ.ಸಿ. ರವರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ತುರ್ತಾಗಿ ಅಂದಾಜು ಪಟ್ಟಿಗೆ ಅನುಮೋದನೆ ಪಡೆದು 3 ಕಾಮಗಾರಿಗೆ ಟೆಂಡರ್ ಆಹ್ವಾನಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ:
ಪಟ್ಟಣ ಪಂಚಾಯತ ಔರಾದ(ಬಿ) ವ್ಯಾಪ್ತಿಯಲ್ಲಿ 129.29 ಲಕ್ಷ ರೂ.ಗಳಲ್ಲಿ 06 ಕಾಮಗಾರಿಗಳಿಗಾಗಿ ಟೆಂಡರ್ ಆಹ್ವಾನಿಸಿದ್ದು, ಅವುಗಳ ಪೈಕಿ ಈಗಾಗಲೇ 5 ಕಾಮಗಾರಿಗಳು ಪೂರ್ಣಗೊಂಡಿವೆ. 01 ಕಾಮಗಾರಿಯು ಬೇರೆ ಯೋಜನೆಯಡಿಯಲ್ಲಿ ಪೂರ್ಣಗೊಳಿಸಿರುವುದರಿಂದ ಅದನ್ನು ಕೈಗೆತ್ತಿಕೊಂಡಿಲ್ಲ. ಇನ್ನು 1 ಕಾಮಗಾರಿಯು ಸ್ಥಳ ಸಮಸ್ಯೆಯಿಂದ ಪ್ರಾರಂಭಿಸಿರುವುದಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಬಾಕಿ 2 ಕಾಮಗಾರಿಗಳ ಬದಲಿಗೆ ಬೇರೆ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಜಿಲ್ಲಾ ನಗರಾಭಿವೃದ್ಧಿಕೋಶದ ಕಾರ್ಯಪಾಲಕ ಅಭಿಯಂತರರು ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರಿಗೆ ಸೂಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಕೋಟಪ್ಪಗೋಳ, ಬೀದರ ಹಾಗೂ ಬಸವಕಲ್ಯಾಣ ನಗರಸಭೆ ಪೌರಾಯುಕ್ತರಾದ ಬಸಪ್ಪ, ಸುರೇಶ ಬಬಲಾರ ಮತ್ತು ಹುಮನಾಬಾದ್, ಚಿಟಗುಪ್ಪಾ, ಭಾಲ್ಕಿ, ಹಳ್ಳಿಖೇಡ್ (ಬಿ) ಪುರಸಭೆ ಅಧಿಕಾರಿಗಳು ಹಾಗೂ ಅಭಿಯಂತರು ಮತ್ತು ಗುತ್ತಿಗೆದಾರರು ಇದ್ದರು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…