ಕುಷ್ಠರೋಗಕ್ಕೆ ಬೇಕಿರೋದು ಚಿಕಿತ್ಸೆ.ಹೆದರಿಕೆ ಅಲ್ಲ ಜಿಪಂ ಸಿಇಓ ಶಿಲ್ಪಾ ಹೇಳಿಕೆ
ಕುಷ್ಠರೋಗ ವಾಸಿಯಾಗುತ್ತೆ ಅದೊಂದು ರೋಗ ಶಾಪವಲ್ಲ
ಜನರು ಭಯಪಡುವ ಅಗತ್ಯವಿಲ್ಲ-ಸಿಇಓ ಶಿಲ್ಪಾಂ ಎಂ
ಕುಷ್ಠರೋಗದ ಲಕ್ಷಣಗಳಿದ್ದವರಿಗೆ ಪತ್ತೆಹಚ್ಚಿ ರೋಗ ಖಚಿತವಾದ ಬಳಿಕ ಬಹು ಔಷಧಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಕಿರಣ ಪಾಟಿಲ್ ಮಾತನಾಡಿ, ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ, ಇದು ಯಾವುದೇ ಶಾಪ ಪಾಪದಿಂದ ಬರುವುದಿಲ್ಲ ಈ ಕಾಯಿಲೆ ಮೈಕೋ ಬ್ಯಾಕ್ಟೀರಿಯಂ ಲೆಪ್ರೇ ಎಂಬ ರೋಗಾಣುವಿನಿಂದ ಬರುತ್ತದೆ, ಈ ಬ್ಯಾಕ್ಟೀರಿಯಗಳು ಚಿಕಿತ್ಸೆ ಪಡೆಯದೇ ಇದ್ದ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹೊರಬರುವ ತುಂತುರ ಹನಿಗಳ ಮೂಲಕ ರೋಗಾಣುಗಳು ಗಾಳಿಯಲ್ಲಿ ಸೇರಿಕೊಂಡು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ಈ ಕಾಯಿಲೆ ಸಾರ್ವಜನಿಕರು ಭಯಪಡಬೇಕಾಗಿಲ್ಲ, ಅದನ್ನು ಗುಪ್ತವಾಗಿ ಇಡದೇ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಗಮನಕ್ಕೆ ತಂದು, ಪ್ರಾರಂಭಿಕ ಹಂತದಲ್ಲೆ ಪತ್ತೆ ಹಚ್ಚಿ ಬಹು ಔಷಧಿಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೀರಶೆಟ್ಟಿ ಚನ್ನಶೆಟ್ಟಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಎಲ್ ಗಂಗಾಧರ, ವಾಜಿದ್ ಪಾಶಾ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಧಿತರಿದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















