Home ನಿಮ್ಮ ಜಿಲ್ಲೆ ಬೀದರ ಕಳ್ಳರ ಬಂಧನ : 14 ಲಕ್ಷದ ಆಭರಣ ಜಪ್ತಿ

ಕಳ್ಳರ ಬಂಧನ : 14 ಲಕ್ಷದ ಆಭರಣ ಜಪ್ತಿ

 

ಹುಮನಾಬಾದ: ತಾಲೂಕಿನ ವಿವಿಧಡೆ ಕಳ್ಳತನ ಮಾಡಿದ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 14 ಲಕ್ಷ ಮೊತ್ತದ ಚಿನ್ನಾಭರಣ ಜಪ್ತಿಮಾಡಿಕೊಂಡಿದ್ದಾರೆ.

ಶಿವಕುಮಾರ ಪಂಚಾಳ, ಸಲ್ಮಾನ ಅಲ್ತಾಫ್, ಅರುಣ ಸ್ವಾಮಿ, ಅವಿನಾಶ ತೊರಣ, ನಾಮದೇವ ಸೇಣಗೇರ ಬಂಧಿತ ಆರೋಪಿಗಳು ಎಲ್ಲಾ ಆರೋಪಿಗಳು 19 ವರ್ಷದಿಂದ 24 ವರ್ಷದ ಯುವಕರಾಗಿದ್ದಾರೆ. ಹುಮನಾಬಾದ, ಹಳ್ಳಿಖೇಡ ಬಿ, ದುಬಲಗುಂಡಿ ಹಾಗೂ ಅಮಿರಾಬಾದ ಗ್ರಾಮಗಳಲ್ಲಿನ ಮನೆ ಕಳ್ಳತನದಲ್ಲಿ ಈ ಯುವಕರು ಭಾಗಿಯಾಗಿದ್ದರು. ಹಳ್ಳಿಖೇಡ ಪಟ್ಟಣದ ಸೀಮಿನಾಗನಾಥ ಕ್ರಾಸ್ ಹತ್ತಿರ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 32 ತೊಲೆ ಬಂಗಾರದ ಆಭರಣಗಳು ಹಾಗೂ 41 ತೊಲೆ ಬೆಳ್ಳಿಯ ಆಭರಣಗಳು ಮತ್ತು ಎರೆಡು ವಾಹನ ಜಪ್ತಿಮಾಡಿಕೊಂಡಿದ್ದಾರೆ.
ಕಳ್ಳರ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಎಸ್.ಪಿ ಗೋಪಾಲ ಬ್ಯಾಕೊಡ್. ಡಿವೈ ಎಸ್ ಪಿ ಮಹೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಎಸ್ ನ್ಯಾಮೆಗೌಡರ್ ನೇತೃತ್ವದಲ್ಲಿ ಅಪರಾಧ ಪತ್ತೆ ತಂಡ ರಚಿಸಿ ಆರೋಪಿಗಳ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಳ್ಳಿಖೇಡ ಬಿ ಪಟ್ಟಣದಲ್ಲಿ ಕಳೆದ ಮಾ.28 ನಡೆದ ಕಳ್ಳತನ ಪ್ರಕರಣ ತನಿಖೆ ನಡೆಸುತ್ತಿರುವ ಅಧಿಕಾರಿಗಳ ತಂಡಕ್ಕೆ ಬೆರಳು ಮುದ್ರೆ ಅಧಿಕಾರಿಗಳಾದ ಆನಂದ ಮೇತ್ರೆ ಹಾಗೂ ಸಂತೋಷ ತಾವರಕಡೆ ಅವರು ಆರೋಪಿಗಳ ಬೆರಳಚ್ಚು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಸಹಕಾರ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಪಿ.ಎಸ್.ಐ ಮಹಾಂತೇಶ ಲುಂಬಿ, ರವಿಕುಮಾರ ಸಿಬ್ಬಂದಿಗಳಾದ ಭಗವಾನ, ಮಲ್ಲಪ್ಪ, ದೀಪಕ, ಶಿವಶರಣ, ನವೀನ, ರಮೇಶ, ಮಲ್ಲಯ್ಯಾ, ವಿಶ್ವನಾಥ, ಸುನೀಲಕುಮಾರ, ಭೀಮಪ್ಪಾ, ರಮೇಶ, ಮಲ್ಲಯ್ಯಾ, ವಸಂತರಾವ, ಮಲ್ಲಿನಾಥ, ದುಂಡಪ್ಪಾ ಇದ್ದರು.

Date: 10-04-2020  Time : 6:30PM

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…