ಕಳಪೆ ಕಾಮಗಾರಿಗೆ ಜನರು ಆಸ್ಪದ ನೀಡಬಾರದು-ಶಾಸಕ ಪಾಟೀಲ.
ಕಳಪೆ ಕಾಮಗಾರಿಗೆ ಜನರು ಆಸ್ಪದ ನೀಡಬಾರದು-ಶಾಸಕ ಪಾಟೀಲ.
6.25 ಕೋಟಿಯಲ್ಲಿ ಹೈಟೆಕ್ ರಸ್ತೆಗೆ ಚಾಲನೆ- ಮುಂದಿನ ವರ್ಷಕ್ಕೆ 43 ಕೋಟಿ ಯೋಜನೆ.
ಹುಮನಾಬಾದ: ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಕಳಪೆ ಎಂದು ಕಂಡು ಬಂದರೆ ಜನ ಸಾಮಾನ್ಯರು ಪ್ರಶ್ನಿಸಬೇಕು. ಕೆಲಸ ನಿಲ್ಲಿಸಿ ಅಧಿಕಾರಿಗಳ ಗಮನ ಸೆಳೆಯಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಶಿವಚಂದ್ರ ನೆಲೋಗಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘

ಪಟ್ಟಣದ ಪ್ರವಾಸಿ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿ 50 ರಿಂದ ರಾಷ್ಟ್ರೀಯ ಹೆದ್ದಾರಿ 65ರ ವರೆಗಿನ ಸುಮಾರು 0.850 ಕಿ.ಮೀ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 2019-20ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ 6.25 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲ್ಲಿದೆ. ಹೈಟೆಕ್ ನಗರಗಳ ಮಾದರಿಯಲ್ಲಿ ರಸ್ತೆ ನಿರ್ಮಾಣವಾಗಲ್ಲಿದೆ. ವಿದ್ಯುತ್ ದೀಪಗಳು ಸೇರಿದಂತೆ ಅತ್ಯಾಧುನಿಕ ಮಾದರಿಯಲ್ಲಿ ಕಾಮಗಾರಿ ನಡೆಯಲ್ಲಿದೆ ಎಂದು ಹೇಳಿದರು. ಅಲ್ಲದೆ, ಲೋಕೋಪಯೋಗಿ ಇಲಾಖೆಯ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ವಾಂಜರಿ ಬಡಾವಣೆ ವರೆಗಿನ ರಸ್ತೆ ಸುಧಾಣೆ ಕಾಮಗಾರಿ 1.17 ಕೋಟಿ ವೆಚ್ಚದಲ್ಲಿ ನಡೆಯಲ್ಲಿದೆ. ಎರೆಡು ಕಾಮಗಾರಿಗಳು ಬಸವರಾಜ ಕೋರಿ ಗುತ್ತೆದಾರರು ಕೆಲಸ ನಿರ್ವಹಿಸಲ್ಲಿದ್ದಾರೆ ಎಂದು ಶಾಸಕರು ಹೇಳಿದರು.
ಈ ಹಿಂದೆ ಹೈದ್ರಾಬಾದ ಕರ್ನಾಟಕ ಮಂಡಳಿಯ ಅಧ್ಯಕ್ಷರಾಗಿರುವ ಅವಧಿಯಲ್ಲಿ ಅಧ್ಯಕ್ಷರಿಗೆ ಸಿಗುವ ಸೌಲಭ್ಯಗಳ ಅಡಿಯಲ್ಲಿ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಕ್ರೀಯಾ ಯೋಜನೆ ತಯಾರಿಸಿದ್ದು, ಇದೀಗ ಕಾಮಗಾರಿ ಆರಂಭಗೊಂಡಿವೆ. ಅಲ್ಲದೆ ಮುಂದಿನ ವರ್ಷದ ಅವಧಿಗೆ ಸುಮಾರು 43 ಕೋಟಿಗಳ ವಿವಿಧ ಕಾಮಗಾರಿಗಳ ಕ್ರೀಯಾ ಯೋಜನೆ ತಯಾರಿಸಲಾಗುತ್ತಿದೆ. ಕ್ಷೇತ್ರದ ವಿವಿಧಡೆ ನಡೆಯುವ ಕಾಮಗಾರಿಗಳು ಕಳಪೆ ಎಂದು ಕಂಡು ಬಂದರೆ ಅಧಿಕಾರಿಗಳ ಗಮನ ಸೇಳೆಯುವ ಕೆಲಸ ಜನರು ಮಾಡಬೇಕು. ಜನರ ತೆರಿಗೆ ಹಣದಲ್ಲಿಯೇ ಈ ಕಾಮಗಾರಿ ಮಾಡಲಾಗುತ್ತಿದ್ದು, ಜನರು ಕೂಡ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಲಕ್ಷ್ಮಿಣರಾವ ಬುಳ್ಳಾ ಸೇರಿದಂತೆ ಅನೇಕರು ಇದ್ದರು.
Date:12-06-2020 Time:
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















