Home ನಿಮ್ಮ ಜಿಲ್ಲೆ ಬೀದರ ಕಂದಾಯ ಇಲಾಖೆಯ ಅಧಿಕಾರಿಗಳ ಗೊಂದಲ ಕ್ಷಮೆಯಾಚಿಸಿದ ತಸಿಲ್ದಾರ್

ಕಂದಾಯ ಇಲಾಖೆಯ ಅಧಿಕಾರಿಗಳ ಗೊಂದಲ ಕ್ಷಮೆಯಾಚಿಸಿದ ತಸಿಲ್ದಾರ್

ಹುಮನಾಬಾದ: ಕಂದಾಯ ಇಲಾಖೆಯ ಅಧಿಕಾರಿಗಳ ಗೊಂದಲದಿಂದ ತಹಸಿಲ್ದಾರ್ ನಾಗಯ್ಯ ಹಿರೇಮಠ ಕ್ಷಮೆಯಾಚಿಸಿದ ಘಟನೆ ನಡೆದಿದೆ.

ರಸ್ತೆ ಮೇಲಿರುವ ಧಾರ್ಮಿಕ ಕೇಂದ್ರಗಳು ತೆರವುಗೊಳಿಸುವ ನಿಟ್ಟಿನಲ್ಲಿ ಮೋಳಕೇರಾ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದು, ತಪ್ಪು ಮಾಹಿತಿಯಿಂದ ಪುರಾತನ ದೇವಸ್ಥಾನದಲ್ಲಿ ಸಭೆ ನಡೆಸಿ ದೇವಸ್ಥಾನ ತೆರವುಗೊಳ್ಳಿಸುವ ನಿಟ್ಟಿನಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಲಕ್ಷ್ಮಿ ದೇವಸ್ಥಾನ ತೆರುವುಗೊಳಿಸುವ ನಿಟ್ಟಿನಲ್ಲಿ ಚರ್ಚೆ ಆರಂಭಿಸಿದರ. ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿನ ಲಕ್ಷ್ಮಿ ದೇವಸ್ಥಾನ ಪುರಾತನವಾಗಿದ್ದು 200 ವರ್ಷಕ್ಕೂ ಅಧಿಕ ಇತಿಹಾಸ ಹೊಂದಿದೆ ಎಂದು ಮಾಹಿತಿ ನೀಡಿದರು.

ನಂತರ ತಹಸೀಲ್ದಾರ್ ಗ್ರಾಮಲೆಕ್ಕಿಗ ಅಧಿಕಾರಿಗಳೊಂದಿಗೆ ವಿವರಣೆ ಪಡೆದರು. ವರದಿಯಲ್ಲಿ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಗ್ರಾಮಲೆಕ್ಕಿಗ ಆನಂದ್ ಅವರನ್ನು ಅಮಾನತು ಮಾಡುವಂತೆ ವರದಿ ನೀಡಿ ಎಂದು ಸ್ಥಳದಲ್ಲಿದ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಗ್ರಾಮಸ್ಥರನ್ನು ತಹಸೀಲ್ದಾರ್ ಕ್ಷಮೆಯಾಚಿಸಿದರು. ನಂತರ ಅಧಿಕಾರಿ ಸೂಚಿಸಿದ ದೇವಸ್ಥಾನಕ್ಕೆ ತೆರಳಿದ ಅಧಿಕಾರಿಗಳು ಅಲ್ಲಿಯೂ ಕೂಡ ಖಾಸಗಿ ಸರ್ವೆ ಭೂಮಿಯಲ್ಲಿ ದೇವಸ್ಥಾನ ಕಟ್ಟಿರುವುದು ಕಂಡುಬಂತು ಗ್ರಾಮಲೆಕ್ಕಿಗ ಕರ್ತವ್ಯಲೋಪ ಕಂಡು ಕೆಂಡಾಮಂಡಲವಾದ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

 

Date: 27-02-2020

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…