ಐದು ಅನಧಿಕೃತ ಬಯೋ ಡೀಸೆಲ್ ಘಟಕಗಳ ಮೇಲೆ ಅಧಿಕಾರಿಗಳು ದಾಳಿ.
![]()
ಐದು ಅನಧಿಕೃತ ಬಯೋ ಡೀಸೆಲ್ ಘಟಕಗಳ ಮೇಲೆ ಅಧಿಕಾರಿಗಳು ದಾಳಿ.
ಬೀದರ/ಜುಲೈ 04: ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಅನಧಿಕೃತ ಬಯೋ ಡೀಸೆಲ್ ಮಾರಾಟ ಮಾಡುತ್ತಿರುವ ಘಟಕಗಳ ಮೇಲೆ ತಹಸೀಲ್ದಾರ ನಾಗಯ್ಯಾ ಹಿರೇಮಠ ಭಾನುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಕೈಗಾರಿಕಾ ಕಾರ್ಯಾನೆಗಳಿಗೆ ಬಳಸುವ ಬಯೋಡೀಸಲ್ ಅಕ್ರಮವಾಗಿ ಖಾಸಗಿ ವಾಹನಗಳಿಗೆ ಮಾರಾಟ ಮಾಡುತ್ತಿರುವ ಕುರಿತು ವಿವಿಧ ಪೆಟ್ರೋಲ್ ಬಂಕ್ ಮಾಲೀಕರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿದ ಹಿನ್ನೆಲೆಯಲ್ಲಿ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತಹಸೀಲ್ದಾರ ಐದು ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ.
ರೇಡ್ ಸಂದರ್ಭದಲ್ಲಿ ಎಲ್ಲಿ ಘಟಕಗಳ ಬಾಗಿಲು ಮುಚ್ಚಿರುವುದು ಕಂಡುಬಂತು. ಬೀಗ ಜಡಿದ ಘಟಕಗಳನ್ನು ಅಧಿಕಾರಿಗಳ ತಂಡ ಸೀಲ್ ಮಾಡಿದರು. ಕೆಲ ಘಟಕಗಳಲ್ಲಿನ ಮಾಲೀಕರು ಕೈಗಾರಿಕಾ ಬಳಕ್ಕೆ ಬಯೋ ಡೀಸೆಲ್ ತೆರಿಗೆ ಪಾವತಿ ಮಾಡಿ ಖರೀದಿಸಿದ ಬಿಲ್ ಗಳನ್ನು ಅಧಿಕಾರಿಗಳಿಗೆ ತೋರಿಸಿದರು. ಆದರೆ, ಪೂರ್ಣ ಪ್ರಮಾಣದ ದಾಖಲೆಗಳು ಇಲಾಖೆಗೆ ಸಲ್ಲಿಸುವಂತೆ ತಹಸೀಲ್ದಾರ ಘಟಕದ ಮುಖ್ಯಸ್ಥರಿಗೆ ತಿಳಿಸಿದರು.
Date: 04-07-2021:Time:12:40PM : www.kknewsonline.in

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















