ಉಮೇಶ ಅಟ್ಟೂರ್ ಅವರಿಗೆ ಜಯ ಕರ್ನಾಟಕ ಸಂಘಟನೆಯಿಂದ ಸನ್ಮಾನ.
ಉಮೇಶ ಅಟ್ಟೂರ್ ಅವರಿಗೆ ಜಯ ಕರ್ನಾಟಕ ಸಂಘಟನೆಯಿಂದ ಸನ್ಮಾನ.
ಹುಮನಾಬಾದ: ತಾಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ನೂತನವಾಗಿ ಆಯ್ಕೆಗೊಂಡ ಭಾರತ ಸರ್ಕಾರದ ಆಹಾರ ನಿಗಮದ ಸದಸ್ಯ ಉಮೇಶ ಬಿರಬಿರ್ಟೆ ಅಟ್ಟೂರ್ ಅವರನ್ನು ಸನ್ಮಾನಿಸಲಾಯಿತು.

ಪಟ್ಟಣದ ಜಯಕರ್ನಾಟಕ ಸಂಘಟನೆ ಕಾರ್ಯಾಲಯದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಹಾಗೂ ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ಉಂಟಾಗುವ ಸಮಸ್ಸೆಗಳು ಹಾಗೂ ಆಹಾರ ಗುಣಮಟ್ಟದ ಸಮಸ್ಸೆ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡಿದರೆ ಯಾವುದೇ ಮುಲಾಜು ಇಲ್ಲದೆ ಕ್ರಮ ವಹಿಸುವುದಾಗಿ ಸೂಚಿಸಿದ್ದರು. ಜಯ ಕರ್ನಾಟಕ ಸಂಘಟನೆ ನಾಡು ನುಡಿ ಜಲಕ್ಕಾಗಿ ಹೋರಾಟ ನಡೆಸಿಕೊಂಡು ಬರುವ ಮೂಲಕ ರಾಜ್ಯದಲ್ಲಿ ಹೆಸರು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ನವೀನ ಬತಲಿ, ಸಂದೀಪ ಬತಲಿ, ರವಿ ಭಂಡಾರಿ, ಅವೀನಾಶ ಧುಮಾಳೆ, ಪ್ರವೀಣ ಗುತ್ತೆದ್ದಾರೆ, ರಾಜು ವಳಖೇಂಡಿ, ಪವನ ಮದಳೆ, ಮಹೇಶ ಕಟ್ಟಿಮನಿ, ರಾಹುಲ ಪರೀಟ್, ಸೋಮು ಡಾಂಗೆ, ಪವನ ಗಡವಂತಿ ಸೇರಿದಂತೆ ಇತರರು ಇದ್ದರು.
Date: 10-09-2020 www.kknewaonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















