ಉದ್ಯೋಗ ಖಾತ್ರಿ ಕಾಮಗಾರಿ ಪರಿಶೀಲಿಸಿದ ಶಾಸಕ ಪಾಟೀಲ.
೭ಹುಮನಾಬಾದ: ತಾಲೂಕಿನ ವಿವಿಧ ಗ್ರಾಮಗಳಿಗೆ ಶಾಸಕ ರಾಕಶೇಖರ ಪಾಟೀಲ ಭೇಟಿನೀಡಿ ಮಹಾತ್ಮಗಾಂಧಿ ಉದ್ಯೋಗ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲನೆ ನಡೆಸಿದರು.
ತಾಲೂಕಿನ ಮೊಳಕೇರಾ, ಧುಮನಸೂರ, ಹುಣಸಗೇರಾ, ಸೋನಕೇರಾ, ಹಂದಿಕೇರಾ, ಘೋಡವಾಡಿ ಗ್ರಾಮಗಳಲ್ಲಿನ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಮಾಸ್ಕ ವಿತರಣೆ ಮಾಡಿದರು. ಉದ್ಯೋಗ ಖಾತ್ರಿ ಯೋಜನೆ ಅಡಿ ಮಾಡುತ್ತಿರುವ ಕಾಮಗಾರಿ ಉತ್ತಮವಾಗಿದ್ದರೆ ಮುಂದಿನ ದಿನಗಳಲ್ಲಿ ನೀರು ಸಂಗ್ರಹವಾಗಿ ಅನುಕೂಲ ಆಗುತ್ತದೆ. ಜ್ವರ ಕೆಮ್ಮು ನೆಗಡಿ ಬಂದರೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ. ಇಂತಹ ರೋಗ ಗಳ ಲಕ್ಷಣಗಳು ಕಂಡುಬಂದರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಯೋಜನಾಧಿಕಾರಿ ವಿಜಯಕುಮಾರ ಮಡ್ಡೆ, ತಾಲೂಕು ಪಂಚಾಯತ ಅಧಿಕಾರಿ ವೈಜಿನಾಥ ಫುಲೆ, ಯೋಜನಾಧಿಕಾತಿ ಶಂಕರ ಕನಕ, ಡಾ। ಗೋವಿಂದ ಸೇರಿದಂತೆ ಇತರೆ ಇದ್ದರು.
Date:28-04-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…