ಉದ್ಯಾನವನ ಸಾರ್ವಜನಿಕರ ಉಪಯೋಗಕ್ಕೆ ಬರಬೇಕು : ಶಾಸಕ ಪಾಟೀಲ
ಹುಮನಾಬಾದ: ಸಾರ್ವಜನಿಕರ ಉತ್ತಮ ಆರೋಗ್ಯಕ್ಕಾಗಿ ನಿರ್ಮಾಣಗೊಂಡಿರುವ ಉದ್ಯಾನವನ ಜನರÀ ಬಳಕ್ಕೆಗೆ ಬರಬೇಕು. ಸಾರ್ವಜನಿಕರು ಈ ಕಡೆಗೆ ಬರುವಂತೆ ಅಧಿಕಾರಿಗಳು ಆಕರ್ಷಿಸಬೇಕು, ವ್ಯವಸ್ಥೆಗಳು ಕಲ್ಪಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ಅಷ್ಟಿಕರ್ ಬಂಕ್ ಎದುರಿನ ಖೂಫಡ್ ಥೋಡ್ ಮಹೊಲ್ಲ ಬಡಾವಣೆ ಪ್ರದೇಶದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ, ಹುಮನಾಬಾದ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯಲ್ಲಿನ 17 ಎಕರೆ ಪ್ರದೇಶದಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ 1 ಕೋಟಿ ವಚ್ಚದದಲ್ಲಿ ನಿರ್ಮಿಸಿದ ಸಾಲುಮರದ ತಿಮ್ಮಕ್ಕ ವೃಕ್ಷೆÆÃಧ್ಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದ ಕಲ್ಲೂರ್ ರಸ್ತೆಯಲ್ಲಿ ಒಂದು ಸಾಲುಮರದ ತಿಮ್ಮಕ್ಕ ಉದ್ಯಾನವನ ನಿರ್ಮಾಣಗೊಂಡಿದ್ದು, ಇದೀಗ ಮತ್ತೊಂದು ಉದ್ಯಾನವನ ಉದ್ಘಾಟನೆಯಾಗಿದೆ. ಅರಣ್ಯ ಅಧಿಕಾರಿಗಳು ಉದ್ಯಾನವನ ಸೂಕ್ತವಾಗಿ ನಿರ್ವಹಣೆಮಾಡಬೇಕು. ಹೆಚ್ಚಿನ ಜನರು ಈ ಕಡೆಗೆ ಬರುವಂತೆ ಆಗಬೇಕು. ಶಾಲಾ, ಕಾಲೇಜು ವಿದ್ಯಾರ್ಥಿಗಳು ವನಭೋಜನಕ್ಕೆ ಬರುವಂತೆ ಆಕರ್ಷಿಸಬೇಕು. ಸಾರ್ವಜನಿಕರು ವಾಯಾಮ, ವಾಕಿಂಗ್ ಮಾಡಲು ಬಂದರೆ ಮಾತ್ರ ಸರ್ಕಾರದ ಯೋಜನೆ ಜನರಿಗೆ ಮುಟ್ಟಿಸಿದಂತೆ ಆಗುತ್ತದೆ. ಇನ್ನೂ ಅಭಿವೃದ್ಧಿ ಕಾರ್ಯಗಳ ಕುರಿತು ಕ್ರೀಯಾ ಯೋಜನೆ ಹಾಕಿಕೊಂಡರೆ ಸೂಕ್ತ ಅನುದಾನ ಕಲ್ಪಿಸುವ ಕೆಲಸ ಮಾಡುವುದಾಗಿ ತಿಳಿಸಿದ ಅವರು, ಕ್ಷೇತ್ರದ ಎಲ್ಲಾ ಕಡೆಗಲ್ಲಿ ಅಭಿವೃದ್ಧಿ ಕಾರ್ಯಗಳು ಜನರ ಕಣ್ಣಿಗೆ ಕಾಣುವಂತೆ ಇವೆ. ಮುಂದಿನ ಕೆಲ ದಿನಗಳ ನಂತರ ಕ್ಷೇತ್ರದ ಕೂಡಂಬಲ ಕ್ಷೇತ್ರದಿಂದ ಚುನಾವಣಾ ಪ್ರಾಚಾರ ಕೂಡ ಆರಂಭ ನಡೆಯಲ್ಲಿದೆ ಎಂದರು.
ಕಲಬುರಗಿ ವರತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ| ಎಸ್. ವೆಂಕಟೇಸನ್ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಸಿರು ಪ್ರದೇಶ ಬೆಳೆಸಲು ಹೆಚ್ಚಿನ ಆಸಕ್ತಿ ವಹಿಸಬೇಕು. ಮನುಷ್ಯನ ಆಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕೆ ಗಿಡ-ಮರಗಳ ಮಾತ್ರ ಬಹಳ ಮಹತ್ವದಾಗಿದೆ. ಬೆಲೆಬಾಳುವ ಭೂಮಿ ಒತ್ತುವರಿ ತೆರವುಮಾಡಿ ಇದೀಗ ಇಲಾಖೆಯಿಂದ ಉದ್ಯಾನವನ ನಿರ್ಮಾಣಗೊಂಡಿದ್ದು, ಇದರ ಪ್ರಯೋಜನ ಜನರು ಪಡೆದುಕೊಳ್ಳಬೇಕು ಎಂದರು. ಬೀದರ ಉಪ ಅರಣ್ಯಾಧಿಕಾರಿ ವಾನತಿ ಎಂಎA ಮಾತನಾಡಿ, 2011-12ನೇ ಸಾಲಿನಲ್ಲಿ ಸರ್ಕಾರ ಸಾಲುಮರದ ತಿಮ್ಮಕ್ಕ ಉದ್ಯಾನವನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಇದೀಗ ಹುಮನಾಬಾದ ಕ್ಷೇತ್ರದಲ್ಲಿ ಎರೆಡು ಉದ್ಯಾನವ ನಿರ್ಮಾಣಗೊಂಡಿದೆ. ಕ್ಷೇತ್ರದ ಶಾಸಕರ ಮುತ್ತುವರ್ಜಿಯೆ ಇದಕ್ಕೆ ಕಾರಣ ಎಂದ ಅವರು, ಅನೇಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಇನ್ನೂ ಒಂದು ಉದ್ಯಾನವನ ಕೂಡ ನಿರ್ಮಾಣಗೊಂಡಿಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ಸಾಮಾಜಿಕ ಅರಣ್ಯ ಉಪ ಅರಣ್ಯಾಧಿಕಾರಿ ಎ.ಬಿ ಪಾಟೀಲ, ಬಸವಕಲ್ಯಾಣ ಸಹಾಯಕ ಅರಣ್ಯಾಧಿಕಾರಿ ವಿ.ಡಿ ರಾಜೇಂದ್ರೆ, ಹುಮನಾಬಾದ ವಲಯ ಅರಣ್ಯಧಿಕಾರಿ ಶಿವಕುಮಾರ ರಾಠೋಡ್, ಪುರಸಭೆ ಸದಸ್ಯರಾದ ಎಸ್.ಎ ಬಾಸಿದ್, ಅನೀಲ ಪಲ್ಲರಿ, ಶೈಲೇಂದ್ರ ಕವಾಡಿ ಸೇರಿದಂತೆ ಅನೇಕರು ಇದ್ದರು.
Date: 09-02-2023 Time: 4:00pm:
www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















