Home ನಿಮ್ಮ ಜಿಲ್ಲೆ ಬೀದರ ಆಸ್ಪತ್ರೆಯಿಂದ ಮೂರುಜನ ಡಿಸ್ಚಾರ್ಜ್

ಆಸ್ಪತ್ರೆಯಿಂದ ಮೂರುಜನ ಡಿಸ್ಚಾರ್ಜ್

ಹುಮನಾಬಾದ: ಕಳೆದ 23 ದಿನಗಳಿಂದ ಹುಮನಾಬಾದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿದ 3 ಜನ ಶಂಕಿತರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

ದೆಹಲಿ ತಬ್ಲಿಘಿ ಜಮಾತ್ ಗೆ ಹೋಗಿ ಬಂದಿದ್ದ
ದುಬಲಗುಂಡಿ ಗ್ರಾಮದ ಇಬ್ಬರು ಹಾಗೂ ಹಳ್ಳಿಖೇಡ ಬಿ ಪಟ್ಟಣದ ಒಬ್ಬ ಯುವಕರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಆಂಬುಲೆನ್ಸ್ ಮೂಲಕ ಅವರ ಊರುಗಳಿಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ತಹಶೀಲ್ದಾರ್ ನಾಗಯ್ಯಾ ಹಿರೇಮಠ, ಆಸ್ಪತ್ರೆಯ ಮೇಲ್ವಿಚಾರಕ ಡಾ। ನಾಗನಾಥ ಹುಲಸೂರೆ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರಾದ ಜೆ.ಎಸ್ ನ್ಯಾಮಗೌಡರ್ ಮಾತನಾಡಿ, ಮುಂದಿನ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಬೇಕು. ಯಾವುದೇ ಸಮಸ್ಯೆ ಉಂಟಾದಲ್ಲಿ ಕೂಡಲೇ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಬೇಕು. ಹದಿನಾಲ್ಕು ದಿನಗಳ ಕಾಲ ಯಾವುದೇ ಕಡೆ ಸಂಚಾರ ಮಾಡುವಂತಿಲ್ಲ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಜೆ.ಎಸ್ ನ್ಯಾಮಗೌಡರ್ ಮಾತನಾಡಿ, 23 ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿದ ಅನುಭವ ಹಾಗೂ ಸಮಸ್ಯೆಗಳ ಕುರಿತು ವಿಚಾರಿಸಿದ್ದು, ಮೂರು ಜನರು ಉತ್ತಮ ಸೇವೆ ದೊರೆತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ। ಅಶೋಕ ಮೈಲಾರೆ, ಪಿ.ಎಸ್.ಐ ರವಿಕುಮಾರ, ಡಾ। ಬಸವಂತ ಗುಮ್ಮೆ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಡಾ। ಚೈತ್ರೇಶ, ಡಾ। ರೋಹಿತ ರಗೋಜಿ, ಡಾ। ಇಂದ್ರಜೀತ ಚಂದಾ, ಡಾ। ದೀಲಿಪ ಡೊಂಗರೆ, ಡಾ। ನುಫೇಲ್ ಸೇರಿದಂತೆ ಇತರರು ಇದ್ದರು.

 

Date:23-04-2020

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…