ಆನಂದ ಗುರುಜೀ ಚಿತ್ರ ಬಿಡಿಸಿದ ಹುಮನಾಬಾದ ಯುವಕ

ಹುಮನಾಬಾದ: ಇತ್ತೀಚೆಗೆ ಹುಮನಾಬಾದ ಪಟ್ಟಣಕ್ಕೆ ಭೇಟಿನೀಡಿದ ನಂದ ಗುರುಜೀ ಅವರ ಭವ್ಯ ಮೆರವಣಿಗೆ ಸಂದರ್ಭದಲ್ಲಿ ಪಟ್ಟಣದ
ಯುವಕನ್ನೊಬ ತಾನು ಬಿಡಿಸಿದ ಚಿತ್ರವನ್ನು ಶ್ರೀಗಳಿಗೆ ನೀಡಿ ಜನರ ಮೆಚ್ಚುಗೆಗೆ ಕಾರಣವಾಗಿದ್ದಾನೆ.
ಪಟ್ಟಣದ ಶ್ರೀ ಲಕ್ಷ್ಮಿವೆಂಕಟೇಶ್ವರ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿರುವ ರಾಜೇಶ ಶಂಕರ ಶಿಲವಂತ ಆನಂದ ಗುರುಜೀ ಅವರ ಚಿತ್ರ ಬಿಡಿಸಿದ ಯುವಕ. ಬಾಲಕ ವಿವಿಧ ರೀತಿಯ ಕಲೆಗಳ ಅನುಭವ ಪಡೆಯುತ್ತಿಒದ್ದು, ಪೆನ್ಸಿಲ್ ನಲ್ಲಿ ಕಲಾಕೃತಿ, ಉಬ್ಬು ಕಲೆ ಬಿಡಿಸುವ ಹವ್ಯಾಸ ಬೆಳೆಸಿಕೊಂಡಿದ್ದಾನೆ. ಯುವಕನ ತಂದೆ ಶಂಕರ ಕೂಡ ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರಗಳ ಬಂಗಾರ ಹಾಗೂ ಬೆಳ್ಳಿಯ ವಿವಿಧ ದೇವರ ಮೂರ್ತಿಗಳು, ಪಲ್ಲಕಿ, ದೇವರ ಮಂಟಪಗಳು ಸೇರಿದಂತೆ ವಿವಿಧ ಕಲೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ಅವರ ಪುತ್ರಕೂಡ ವಿವಿಧ ಕಲೆಗಳು ಕರಗತ ಮಾಡಿಕೊಳ್ಳುತ್ತಿದ್ದು, ಹಳೆ ಸಂಸ್ಕೃತಿ ಪರಂಪೆ ಉಳಿಸಿ ಬೆಳೆಸುವ ಉದ್ದೇಶ ರಾಜೇಶ ಹೊಂದಿದ್ದಾನೆ.

Published/Date:01-12-2019
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















