Home ನಿಮ್ಮ ಜಿಲ್ಲೆ ಬೀದರ ಆಟೋದಲ್ಲಿ ಗಸ್ತು ನಡೆಸಿದ CPI ಶರಣಬಸಪ್ಪ ಕೋಡ್ಲಾ

ಆಟೋದಲ್ಲಿ ಗಸ್ತು ನಡೆಸಿದ CPI ಶರಣಬಸಪ್ಪ ಕೋಡ್ಲಾ

ಪೊಲೀಸ್ ಕಾರ್ಯಕ್ಕೆ ಜನರ ಮೆಚ್ಚಿಗೆ

ಆಟೋದಲ್ಲಿ ಗಸ್ತು ನಡೆಸಿದ CPI ಶರಣಬಸಪ್ಪ ಕೋಡ್ಲಾ

ಹುಮನಾಬಾದ: ಪಟ್ಟಣದಲ್ಲಿ ಅಪರಾಧ ಕೃತ್ಯಗಳು
ತಡೆಗಟ್ಟುವ ನಿಟ್ಟಿನಲ್ಲಿ ಹುಮನಾಬಾದ ಸಿಪಿಐ ಶರಣಬಸಪ್ಪ ಕೋಡ್ಲಾ ನೇತೃತ್ವದಲ್ಲಿ ಆಟೋದಲ್ಲಿ ಗಸ್ತು ನಡೆಸುತ್ತಿದ್ದಾರೆ.

ವಿವಿಧ ಅಪರಾಧ ಕೃತ್ಯಗಳು ತಡೆಯುವ ನಿಟ್ಟಿನಲ್ಲಿ ರಾತ್ರಿ ಸಮಯದಲ್ಲಿ ಪೊಲೀಸರು ಗಸ್ತು ನಡೆಸುವುದು ಸಾಮಾನ್ಯ ಆದರೆ, ಸಾಮಾನ್ಯ ಜನರಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಟೋದಲ್ಲಿ ಪ್ರಯಾಣಿಕರಂತೆ ಸಂಚರಿಸಿ ರಾತ್ರೆ ಸಮಯದಲ್ಲಿ ಸಂಚರಿಸುತ್ತಿರುವ ಜನರ ಮೇಲೆ ನಿಗಾ ವಹಿಸಿದರು.

ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಿ ವಿಚಾರಣೆ ನಡೆಸಿದ ಮಾಹಿತಿಗಳು ತಿಳಿದುಬಂದಿದೆ. ಅಲ್ಲದೆ, ರಾತ್ರೆ ಹೊತ್ತಿನಲ್ಲಿ ಪಟ್ಟಣದ ವಿವಿಧಡೆ ಸಂಚರಿಸುವ ವಾಹನಗಳ ಮೇಲು ನಿಗಾವಹಿಸಿದ ಪೋಲಿಸರು ವಿಚಾರಣೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದ ಕುರಿತು ತಿಳಿದು ಬಂದಿದೆ. ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಜನರು ಮೆಚ್ಚಿಗೆ ವ್ಯಕ್ತಪಡಿಸಿದ್ದು, ಪಟ್ಟಣದಲ್ಲಿ ಯಾವುದೇ ಅಪರಾಧಗಳು ನಡೆಯದಂತೆ ಇನ್ನೂ ಜಾಗೃತೆ ವಹಿಸಬೇಕು ಎಂದು ಜನರ ಅನಿಸಿಕೆಯಾಗಿದೆ.

Date: 17-09-2022 : Time:10:25am

www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…