ಅರ್ಧ ನಿರ್ಮಾಣಗೊಂಡ ಕಟ್ಟಡ ತೆರವು.
ನಿರ್ಣಾ ಗ್ರಾಮದಲ್ಲಿ ಕೆಆರ್ಐಡಿಎಲ್ ನಿಂದ ನಿರ್ಮಾಣಗೊಂಡ ಕಟ್ಟಡ
ಬೀದರ:ಸೆ.01/ ಕ್ರೀಯಾ ಯೋಜನೆ ಪ್ರಕಾರ ಸರ್ಕಾರಿ ಕಟ್ಟಡ ನಿರ್ಮಿದ ಕಾರಣ ಜೆಸಿಬಿ ಮೂಲಕ ಕಟ್ಟಡ ತೆರವುಗೊಳಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕೆ ತಳಪಾಯ ನಿರ್ಮಾಣ ಮಾಡದೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿರುವ ಕುರಿತು ಸ್ಥಳೀಯ ಜನರು ದೂರಿದರು. ಕಟ್ಟಡದ ನಿರ್ಮಾಣದ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರ ಬಳಸಿ ತೆರವುಗೊಳ್ಳಿಸಿದ ಘಟನೆ ಕೂಡ ನಡೆದಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡುತ್ತಿವೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆ ಅದಡಿಯಲ್ಲಿ ಸುಮಾರು 55 ಲಕ್ಷ ಮೊತ್ತದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿತ್ತು ಎನ್ನಲಾಗಿದೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆ ವತಿಯಿಂದ ಕಾಮಗಾರಿ ನಡೆದಿದ್ದು, ಕಟ್ಟಡ ಕಾಮಗಾರಿ ಅರ್ಧಕ್ಕೆ ಬರುವರೆಗೆ ಅನೇಕ ಭಾರಿ ದೂರಿದರು ಕೂಡ ಅಧಿಕಾರಿಗಳು ಮಾತ್ರ ಆ ಕಡೆ ಗಮನ ಹರಿಸಿಲ್ಲ ಎಂದು ಸ್ಥಳೀಯ ಜನರು ದೂರಿದಿದ್ದಾರೆ.
ನೇರವಾಗಿ ಇಲಾಖೆಯ ಅಧಿಕಾರಿಗಳೆ ಶಾಮಿಲಾಗಿ ಬೇಕಾಬಿಟ್ಟಿ ಕಟ್ಟಡ ನಿರ್ಮಿಸುವ ಉದ್ದೇಶ ಹೊಂದಿದ್ದರು, ಪದೆ ಪದೆ ದೂರು ಹೇಳಿದ ಕಾರಣ ಅಧಿಕಾರಿಗಳು ತಮ್ಮ ತಪ್ಪು ಅರಿವಾಗಿ, ಮುಂದೆ ಸಮಸ್ಯೆ ಉಂಟಾಗಬಹುದೆಂದು ಅರೆತುಕೊಂಡು ಕಟ್ಟದ ತೆರವಿಗೆ ಮುಂದಾಗಿದ್ದಾರೆ ಎಂದು ಗ್ರಾಮದ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಲಾಖೆಯ ಸಹಾಯಕ ನಿರ್ದೇಶಕಿ ಮಹೇಶ್ವರಿ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ, ಕೆಲ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ತೆರವುಗೊಳ್ಳಿಸಲಾಗುತ್ತಿದ್ದು, ದೋಷಗಳು ಸರಿಪಡಿಸಿ ಮತ್ತೆ ನಿರ್ಮಾಣ ಮಾಡಲಾಗುತ್ತದೆ. ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿ ಸರಿಪಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಂಡಿದ್ದಾರೆ.
Date: 01-09-2022 : www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















