Home ನಿಮ್ಮ ಜಿಲ್ಲೆ ಬೀದರ ಅಬಕಾರಿ ಅಧಿಕಾರಿಗಳ ದಾಳಿ: 48 ಕೆಜಿ ಗಾಂಜ ಜಪ್ತಿ.

ಅಬಕಾರಿ ಅಧಿಕಾರಿಗಳ ದಾಳಿ: 48 ಕೆಜಿ ಗಾಂಜ ಜಪ್ತಿ.

ಅಬಕಾರಿ ಅಧಿಕಾರಿಗಳ ದಾಳಿ: 48 ಕೆಜಿ ಗಾಂಜ ಜಪ್ತಿ.

ಬೀದರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಭಂಗೂರ ಗ್ರಾಮದ ಸಮೀಪ ಅಕ್ರಮ ಗಾಂಜಾ ಸಾಗಿಸುತ್ತಿದ ಖಚಿತ ಮಾಹಿತಿ ಮೇರೆಗೆ ಭಾನುವಾರ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 48 ಕೆ.ಜಿ ಗಾಂಜ ವಶಪಡಿಸಿಕೊಂಡಿದ್ದಾರೆ.

ತೆಲಂಗಾಣದ ಜಹಿರಾಬಾದ ದಿಂದ ಮಹಾರಾಷ್ಟ್ರದ ಲಾತೂರಗೆ ತೆರಳುತ್ತಿದ ವಾಹನದಲ್ಲಿ ಎರೆಡು ಕೆಜಿಯ 24 ಪ್ಯಾಕ್ಗಳು 48ಕೆಜಿ ಗಾಂಜಾ ಪತ್ತೆಯಾಗಿದ್ದು, ವಾಹನ ಸೇರಿ 11 ಲಕ್ಷ ಮೌಲ್ಯದ ಗಾಂಜ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಲಾತೂರ ಮೂಲದ ಸಚ್ಚಿನ ಪುಲಚಂದ್, ಜ್ಞಾನೇಶ್ವರ ರಾಮ ಸಾರಿಗೆ, ಶ್ರೀಕೃಷ್ಣ ಅಳಲೆ ಬಂಧಿತ ಆರೋಪಿಗಳು. ಈ ಕುರಿತು ಅಬಕಾರಿ ಅಧಿಕಾತಿಗಳು ಹೆಚ್ಚಿನ ತನಿಖೆ ನಡೆಸಿದ್ದಾರೆ.

ಅಬಕಾರಿ ಜಿಲ್ಲಾಧಿಕಾರಿ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಅನೀಲಕುಮಾರ ಪೊದ್ದಾರ ನೇತೃತ್ವದಲ್ಲಿ ಸಿಪಿಐ ರವಿಂದ್ರ ಪಾಟೀಲ ಹಾಗೂ ಸಿಪಿಐ ಸತ್ಯನಾರಾಯಣ ತ್ರಿವೇದಿ ಹಾಗೂ ಸಿಬ್ಬಂದಿಗಳು ಸೇರಿಕೊಂದ ದಾಳಿ ನಡೆಸಿದ್ದಾರೆ.

 

Date:13-12-2020 : www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…