ಅಂಬುಲೆನ್ಸ್, ಡೆಡ್ ಬಾಡಿ ಕಳಿಸುವಾಗ ನಿಯಮ ಪಾಲಿಸಿ: ಡಿಎಚ್ಓ
ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ
ಬೀದರಃ ಆಯಾ ತಾಲೂಕು ಕೇಂದ್ರ ಹಾಗೂ ಪಿಎಚ್ ಸಿ ಮತ್ತು ಸಿಎಚ್ ಸಿ ನಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಕೇಂದ್ರಕ್ಕೆ ಅಂಬುಲೆನ್ಸ್ ಕಳಿಸುವಾಗ ನಿಯಮ ಪಾಲನೆ ಮಾಡಬೇಕು. ಮಾರ್ಗಸೂಚಿಯಂತೆ ಶವಸಂಸ್ಕಾರ ಮಾಡಲು ಗಮನ ಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಾಲೂಕುಮಟ್ಟದ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏ.12ರಂದು ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದ ಅವರು, ಈ ವೇಳೆಯಲ್ಲಿ ಯಾರೇ ತೀರಿಕೊಂಡರೂ ಅವರ ಬಗ್ಗೆ ಜನತೆಗೆ ಸರಿಯಾದ ಮಾಹಿತಿ ಹೋಗಬೇಕು. ಕರೋನಾ ಲಕ್ಷಣಗಳು ಇರುವ ಶಂಕಿತರು ತೀರಿಕೊಂಡರೆ, ಬಹಳಷ್ಟು ವೈದ್ಯರು ಮತ್ತು ಸಿಬ್ಬಂದಿ ಸೇರದೇ ಕಲವೇ ಜನ ಸೇರಿ, ಶವವನ್ನು ಪ್ಲಾಸ್ಟಿಕ್ ನಲ್ಲಿ ಶೀಲ್ ಮಾಡಿ ಕಳಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಬ್ರಿಮ್ಸ ಡೈರೆಕ್ಟರ್ ಮಾತನಾಡಿ, ರೋಗಿಗಳನ್ನು ಪಿವರ್ ಕ್ಲಿನಿಕ್, ಪಿಎಚ್ ಸಿ, ಸಿಎಚ್ ಸಿ ಮತ್ತು ಆರೋಗ್ಯ ಆಸ್ಪತ್ರೆಯಿಂದ ನಮ್ಮಲ್ಲಿಗೆ ಅಂಬುಲೆನ್ಸ ಕಳಿಸುವಾಗ ನಿಯಮ ಪಾಲನೆ ಆಗುತ್ತಿಲ್ಲ. ಅಂಬುಲೆನ್ಸ ಮೂಲಕ ಬಂದ ವ್ಯಕ್ತಿಗೆ ಮೊದಲು ಯಾರು ಚಿಕಿತ್ಸೆ ನೀಡಿದರು. ಯಾರೂ ಚಿಕಿತ್ಸೆಗೆ ಸೂಚಿಸಿದರು. ಆ ವ್ಯಕ್ತಿಗೆ ಟ್ರಾವೆಲ್ ಹಿಸ್ಟರಿ ಇದೆಯೇ? ಎಂಬ ಮಾಹಿತಿ ಕಲೆ ಹಾಕಿ, ಅದರ ಪೂರ್ಣ ವಿವರದೊಂದಿಗೆ ಕಳಿಸಬೇಕು. ಜ್ವರ ಇದ್ದರೆ ಅಲ್ಲಿಯೇ ಮಾಸ್ಕ ಹಾಕಿರಬೇಕು. ಅಲ್ಲಿಂದಲೇ ಆಕ್ಸಿಜನ್ ಅಳವಡಿಸಿ ಕಳಿಸಿದರೆ ರೋಗಿಯ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಅನುಕೂಲ. ಇದನ್ನು ಎಲ್ಲ ಪಿಎಚ್ ಸಿ ಮತ್ತು ಸಿಎಚ್ ಸಿ ಮತ್ತು ತಾಲೂಕು ಆಸ್ಪತ್ರೆ ವೈದ್ಯರು ಪಾಲನೆ ಮಾಡಬೇಕು ಎಂದು ಸೂಚಿಸಿದರು.
Date:12-04-2020 Time:5:15PM
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















