Home ನಿಮ್ಮ ಜಿಲ್ಲೆ ಬೀದರ ಹುಮನಾಬಾದ ಪುರಸಭೆಗೆ ಕಸ್ತೂರಬಾಯಿ ಅಧ್ಯಕ್ಷೆ -ಉಪಾಧ್ಯಕ್ಷರಾಗಿ ಸತ್ಯವತಿ ಮಠಪತಿ ಅವಿರೋಧ ಆಯ್ಕೆ.

ಹುಮನಾಬಾದ ಪುರಸಭೆಗೆ ಕಸ್ತೂರಬಾಯಿ ಅಧ್ಯಕ್ಷೆ -ಉಪಾಧ್ಯಕ್ಷರಾಗಿ ಸತ್ಯವತಿ ಮಠಪತಿ ಅವಿರೋಧ ಆಯ್ಕೆ.

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಹುಮನಾಬಾದ: ಹುಮನಾಬಾದ ಪುರಸಭೆಯ ನೂತನ ಅಧ್ಯಕ್ಷರಾಗಿ ಕಸ್ತೂರಬಾಯಿ ನರಸಪ್ಪ ಹಾಗೂ ಉಪಾಧ್ಯಕ್ಷರಾಗಿ ಸತ್ಯವತಿ ಮಠಪತಿ ಅವಿರೋಧವಾಗಿ ಶುಕ್ರವಾರ ಆಯ್ಕೆಗೊಂಡರು.

ತಹಶೀಲ್ದಾರ ನಾಗಯ್ಯಾ ಹಿರೇಮಠ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮ ಪತ್ರ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಚುನಾವಣಾಧಿಕಾರಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ಕುರಿತು ಘೋಷಣೆ ಮಾಡಿದರು.https://play.google.com/store/apps/details?id=kknewsonline.inಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮನ್ಯ ಮಹಿಳೆ ಮೀಸಲಾತಿ ಘೋಷಣೆ ಆಗಿತ್ತು. 2019ರಲ್ಲಿ ಚುನಾವಣೆ ನಡೆದಿದ್ದು, ಒಂದುವರೆ ವರ್ಷದ ನಂತರ ಚುನಾವಣೆ ನಡೆದಿದೆ.

ಪುರಸಭೆಯ ಒಟ್ಟು 27 ವಾರ್ಡಗಳ ಪೈಕಿ ಕಾಂಗ್ರೆಸ್ 19 ಸ್ಥಾನ, ಬಿಜೆಪಿ 4 ಸ್ಥಾನ, ಜೆಡಿಎಸ್ 3 ಸ್ಥಾನ ಹಾಗೂ ಸ್ವತಂತ್ರ ಅಭ್ಯಾರ್ಥಿ ಯೊಬ್ಬರು ಚುನಾವಣೆಯಲ್ಲಿ ಆಯ್ಕೆಗೊಂಡಿದ್ದರು.

ಈ ಸಂದರ್ಭದಲ್ಲಿ ಶಾಸಕ ರಾಜಶೇಖರ ಪಾಟೀಲ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸಿದರು. ಪುರಸಭೆ ಸದಸ್ಯರಾದ ಸುನೀಲ ಪಾಟೀಲ್, ಅಫ್ಸರಮಿಯ್ಯ, ಪಾರ್ವತಿ ಶೇರಿಕಾರ, ಮಹೇಶ ಪಾಟೀಲ್, ಗುಂಡಪ್ಪ, ರೇಷ್ಮಾ, ಇಸರತ್ ಸುಲ್ತಾನಾ, ಸೈಯದ್ ಅಬ್ದುಲ್, ಸವಿತಾ ಅಶೋಕ, ಮುಖರಂ ಜಾ, ಅನೀಲ್‌ ಪಲ್ಲೆರಿ, ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಈಶ್ವರ, ಸಂಗಪ್ಪ, ಜಾವೆದ್, ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

Date: 06-11-2020  www.KKNEWSONLINE.IN

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…