ಹುಮನಾಬಾದ ಪುಟಪಾತ್ ಮಾಕಾಗಾರಿ ಯಾವ ಇಲಾಖೆಯದು..
ಹುಮನಾಬಾದ ಪುಟಪಾತ್ ಮಾಕಾಗಾರಿ ಯಾವ ಇಲಾಖೆಯದು..?
ಹುಮನಾಬಾದ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪುಟಪಾತ್ ಕಾಮಗಾರಿ ಯಾವ ಇಲಾಖೆಗೆ ಸಂಬಂಧಿಸಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲದಂತಾಗಿದೆ.
ಹೌದು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಗತೋತ್ಥಾನ್ ಯೋಜನೆ ಅಡಿಯಲ್ಲಿ ಪುಟಪಾತ್ ಕಾಮಗಾರಿ ನಡೆಯುತ್ತಿದ್ದು ಪುರಸಭೆ ವ್ಯಾಪ್ತಿಗೆ ಬರುವುದಿಲ್ಲ. ಬದಲಿಗೆ PWD ಇಲಾಖೆಗೆ ಬರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ತಿಳಿಸಿದ್ದಾರೆ.
ಈ ಕುರಿತು PWD ಇಲಾಖೆಯ ಅಧಿಕಾರಿ ರಾಜಕುಮಾರ ಕಲಬುರಗಿ ಅವರನ್ನು ಮಾತನಾಡಿದರೆ, ನಮ್ಮ ಇಲಾಖೆ ಕಾಮಗಾರಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಂತರ ಮತ್ತೆ ಪುರಸಭೆ ಅಧಿಕಾರಿಗೆ ಸಂಪರ್ಕ ನಡೆಸಿದ ಸಂದರ್ಭದಲ್ಲಿ ಡಿಯುಡಿಸಿ ಇಲಾಖೆಗೆ ಸಂಬಂಧಿಸಿದ್ದು, ಕಾಮಗಾರಿ ಕುರಿತು ಅವರೇ ನೋಡಬೇಕು ಎಂದು ತಿಳಿಸಿದ್ದಾರೆ.
ಸದ್ಯ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಾಗಿಲ್ಲ ಎಂದು ಸ್ಠಳಿಯ ಜನರು ಆರೋಪಿಸುತ್ತಿದ್ದಾರೆ. ಹಳೆ ಕಬ್ಬಿಣ ಬಳಸುತ್ತಿದ್ದಾರೆ ಹಾಗೂ ನಿಯಮದ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ ಎಂದು ಸ್ಥಳಿಯ ವ್ಯಾಪರಸ್ಥರು ಆರೋಪಿಸುತ್ತಿದ್ದಾರೆ.
ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಬೇಕು ಎಂದು ಸಮಾಜ ಸೇವಕ ಗುಂಡರೆಡ್ಡಿ ಪುಟ್ಟಕಲ್ ಒತ್ತಾಯಿಸಿದ್ದಾರೆ
Date: 18-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















