ಸುಟ್ಟು ಕರಕಲಾದ ಖಾಸಗಿ ಬಸ್
ಹುಮನಾಬಾದ: ಬೀದರದಿಂದ- ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಸ್ ಸುಟ್ಟು ಕರಕಲಾಗಿದ ಘಟನೆ ಹುಮನಾಬಾದ ತಾಲೂಕಿ ಧುಮನ್ನಸೂರ್ ಗ್ರಾಮದ ಹತ್ತಿರ ಬುಧವಾರ ಸಂಜೆ ಸಂಭವಿಸಿದೆ.
![]()
ಧುಮನಸೂರ್ ಗ್ರಾಮದ ಹತ್ತಿರ ರಸ್ತೆಯಲ್ಲಿರುವ ಹಂಪುಗಳಿದ ಬೆಂಕಿಕಾಣಿಸಿಕೊಂಡಿರಬೇಕು ಎಂದು ಊಹಿಸಲಾಗುತ್ತಿದ್ದು, ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿ ಕೆಲಹೊತ್ತಿನಲ್ಲಿಯೇ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬಸ್ಸಿನಲ್ಲಿ ಒಟ್ಟು 17 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಬೆಂಕಿ ಕಾಣಿಸಿಕೊಂಡ ನಂತರ ಪ್ರಯಾಣಿಕರು ಆತುರದಲ್ಲಿ ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ. ಯಾವುದೆ ಜೀವ ಹಾನಿ ಅಥವಾ ಗಾಯಗಳು ಸಭವಿಸಿಲ್ಲ. ಆದರೆ ಕೆಲ ಪ್ರಯಾಣಿಕರು ತಮ್ಮ ಬ್ಯಾಗಗಳು ಬಸ್ಸಿನಲ್ಲಿಯೆ ಸುಟ್ಟಿದೆ ಎಂದು ನೋವು ವ್ಯಕ್ತಪಡಿಸಿದ್ದಾರೆ. ಒಂದು ಗಂಟೆಗಳ ಕಾಲ ಎರೆಡು ಅಗ್ನಿ ಶಾಮಕ ವಾಹನಗಳು ನಿರಂತರ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಸ್ಥಳದಲ್ಲಿ ಸಿಪಿಐ ಮಲ್ಲಿಕಾರ್ಜಿನ ಯಾತನೂರ್, ಪಿ.ಎಸ್.ಐ ರವಿಕುಮಾರ, ಮಹಾಂತೇಶ ಲುಂಬಿ, ಕಿರಣಕುಮಾರ ಇದ್ದರು.
Date:02-09-2020 www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…
















