Home ನಿಮ್ಮ ಜಿಲ್ಲೆ ಬೀದರ ಸಂತೋಷವಾಗಿ ಬದುಕುವವರೇ ನಿಜವಾದ ಸಂತರು : ಕೊಪ್ಪಳ ಶ್ರೀಗಳು

ಸಂತೋಷವಾಗಿ ಬದುಕುವವರೇ ನಿಜವಾದ ಸಂತರು : ಕೊಪ್ಪಳ ಶ್ರೀಗಳು

ಸಂತೋಷವಾಗಿ ಬದುಕುವವರೇ ನಿಜವಾದ ಸಂತರು : ಕೊಪ್ಪಳ ಶ್ರೀಗಳು

ಹುಮನಾಬಾದ: ಶರಣರ ತತ್ವ ಸಿದ್ದಾಂತಗಳು, ಆದರ್ಶಗಳ ಕುರಿತು ಕೇಳುವುದು ಹಾಗೂ ಜೀವನದಲ್ಲಿ ಅನುಸರಿಸುವುದರಿಂದ ಮನದ ತಾಪ ಕಡಿಮೆ ಆಗುತ್ತದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥಾನದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ ಹೇಳಿದರು.

ತಾಲೂಕಿನ ಹುಡಗಿ ಗ್ರಾಮದ ವಿರಕ್ತಮಠದ ನೂತನ ಶ್ರೀಗಳಾದ ಚನ್ನಮಲ್ಲ ದೇವರ ಪಟ್ಟಾಧಿಕಾರ ಸಮಾರಂಭ ಹಿನ್ನೇಲೆಯಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ ಶರಣಬಸವೇಶ್ವರ ಪುರಾಣ ಮಂಗಲ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೋಟಿಗಳು ಖರ್ಚುಮಾಡಿ ಸುಂದವಾದ ಮನೆ ನಿರ್ಮಿಸಿದರು, ಮನೆಯಲ್ಲಿ ಅಪಾರ ಸಂಪತು ಇದ್ದರೂ ಕೂಡ ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಒಂದು ಮಣ್ಣಿನ ದೀಪ ಆ ಮನೆಎ ಎಲ್ಲಾಕಡೆಗಳಲ್ಲಿ ಬೆಳಕು ಬೆಳಗಿಸುತ್ತದೆ ಹಾಗೆಯೇ ಶರಣರ ತತ್ವ ಸಿದ್ದಾಂತಗಳು ಕೇಳುವದರಿಂದ, ಜೀವನದಲ್ಲಿ ಅಮೋಘ ಬದಲಾವಣೆಗಳು ಕಾಣುತ್ತವೆ ಎಂದ ಅವರು, ಕಲ್ಯಾಣದಲ್ಲಿ ನಡೆದ ಶರಣ ಚಿಂತನೆಗಳಿAದ ದೂರದ ದೇಶದ ಅನೇಕರು ಕಲ್ಯಾಣದ ಕಡೆಗೆ ಬಂದಿರುವುದು ಇತಿಹಾಸ ಎಲ್ಲರಿಗೂ ತಿಳಿದಿದೆ. ರಾಜ್ಯಮನೆತನದ ಮೊಳಿಗೆ ಮಾರಯ್ಯಾ ಬಸವಣ್ಣನವರ ಮಾತುಗಳ ಪ್ರಭಾವಕ್ಕೆ ಒಳಗಾಗಿ ಇಲ್ಲಿಗೆ ಬಂದು ಜೀವನ ನಡೆಸಿದರು. ಅಕ್ಕ ಮಹಾದೇವಿ ಹತ್ತಿರ ಏನು ಇಲ್ಲದಿದ್ದರೂ ಕೂಡ ಜೀವನದಲ್ಲಿ ಸುಖಿಯಾಗಿದ್ದೇನೆ ಅಂತ ಹೇಳಿದರು. ಆದರೆ, ಇಂದು ಎಲ್ಲವೂ ಇದ್ದರೂ ಕೂಡ ಯಾರಿಗೂ ಸುಖ-ಸಂತೋಷ ದೊರೆಯುತ್ತಿಲ್ಲ. ಹಾಗಾದರೆ ಅಕ್ಕಮಹಾದೇವಿ ಹೇಗೆ ಸುಖಿಯಾಗಿದ್ದರು ಎಂಬುವುದು ತಿಳಿದುಕೊಳ್ಳಬೇಕು ಎಂದರು.

ಪ್ರತಿಯೊಬ್ಬ ಮನುಷ್ಯನು ದೇವರು ಕೊಟ್ಟ ಆಯುಷ್ಯ ಸರಿಯಾಗಿ ಬಳಸಿಕೊಳ್ಳಬೇಕು. ಜೀವನದಲ್ಲಿ ಸಂತೋಷದಿAದ ಬದುಕುವಂತಾಗಬೇಕು. ಇಂದಿನ ದಿನಗಳಲ್ಲಿ ಸಂತೋಷವಾಗಿ ಬದುಕುವವರೇ ಸಂತರು. ಜೀವನದ ವಾಸ್ತವಿಕ ಸತ್ಯ ಅರಿಯಬೇಕು. ಮನುಷ್ಯ ಹುಟ್ಟಿದ ಮೇಲೆ ಅವರನ ಸಾವಿನ ದಿನ ಕೂಡ ಇರುತ್ತೆ ಎಂಬುವುದು ತಿಳಿಯಬೇಕು. ಸತ್ಯ ಮರೆತು ಬದುಕಬಾರದು. ಈ ಪ್ರಪಂಚದಲ್ಲಿ ಕೈ, ಕಾಲು, ಕಣ್ಣು ಇಲ್ಲದವರು ಬದುಕುತ್ತಿದ್ದಾರೆ. ದೇವರು ಎಲ್ಲವನ್ನೂ ನಮಗೆ ಕರುಣಿಸಿದರು ಕೂಡ ನಾವು ಯಾಕೆ ಸಂತೋಷದಿAದ ಬದುಕಬಾರದು ಎಂದು ಪ್ರಶ್ನಿಸಿದರು.

ಸಮಾರಂಭ ಉದ್ಘಾಟಿಸಿದ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಜೀವನಕ್ಕೊಂದು ಸ್ಪರ್ತಿ ಬರುತ್ತದೆ. ಕೊಪ್ಪಳದ ಶ್ರೀಗಳು ನಮ್ಮ ಕ್ಷೇತ್ರಕ್ಕೆ ಆಗಮಿಸಿರುವುದು ಹರ್ಷ ತಂದಿದೆ. ಇಲ್ಲಿನ ವಿರಕ್ತ ಮಠದ ನೂತನ ಶ್ರೀಗಳ ಪಟ್ಟಾಧಿಕಾರಿ ನಿಮಿತ್ಯ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳು ಜರುಗುತ್ತಿದ್ದು, ಫೆ.10ರಂದು ನಡೆಯುವ ಪಟ್ಟಧಿಕಾರಿ ಸಮಾರಂಬದಲ್ಲಿ ಕೂಡ ಹೆಚ್ಚಿನ ಜನರು ಭಾಗವಹಿಸಿ ವಿವಿಧ ಧಾರ್ಮಿಕ ಆಚರಣೆಗಳ ವಿಕ್ಷಣೆಮಾಡಬೇಕು ಎಂದರು.

ಸಮಾರAಭದಲ್ಲಿ ಭಾತಂಬ್ರಾ ಶಿವಯೋಗಿಶ್ವರ ಮಹಾಸ್ವಾಮಿಗಳು, ಡಾ| ಶಂಭುಲಿAಗ ಶಿವಾಚಾರ್ಯರು, ಘನಲಿಂಗರುದ್ರಮಿನಿ ಸ್ವಾಮಿಗಳು, ಪ್ರಣಾವಾನಂದ ಸ್ವಾಮಿಗಳು, ಪಂಡಿತಾರಾಧ್ಯ ಶಿವಾಚಾರ್ಯರು, ಮುರಘೇಂದ್ರ ಸ್ವಾಮಿಗಳು, ಎಂಎಲ್‌ಸಿ ಡಾ| ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಯುವ ಮುಖಂಡ ಡಾ| ಸಿದ್ದಲಿಂಗಪ್ಪ ಪಾಟೀಲ, ಬಿಜೆಪಿ ಮುಖಂಡ ಸುಭಾಷ ಕಲ್ಲೂರ್, ಪದ್ಮಾಕರ್ ಪಾಟೀಲ, ಸೋಮನಾಥ ಪಾಟೀಲ, ಗುಂಡುರೆಡ್ಡಿ ಕಮಲಾಪೂರೆ ಸೇರಿದಂತೆ ಅನೇಕ ಮುಖಂಡರು ವಿವಿಧ ಮಠಗಳ ಶ್ರೀಗಳು ಸಾವಿರಾರು ಜನರು ಭಾಗವಹಿಸಿದರು. ಸದಾಶಿವ ಮಠಪತಿ ದಾಸೋಹ ಸೇವೆ ಸಲ್ಲಿಸಿದರು.

Date: 09-02-2023 Time: 4:00pm

www.kknewsonline.in

Main

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…