Home ನಿಮ್ಮ ಜಿಲ್ಲೆ ಬೀದರ ವೀರಭದ್ರೇಶ್ವರ ದೇವಸ್ಥಾನದಲ್ಲಿ ರಾಜಕೀಯ ಮಾಡುವುದು ಬೇಡ : ವೀರಣ್ಣಾ ಪಾಟೀಲ ಸಲಹೆ

ವೀರಭದ್ರೇಶ್ವರ ದೇವಸ್ಥಾನದಲ್ಲಿ ರಾಜಕೀಯ ಮಾಡುವುದು ಬೇಡ : ವೀರಣ್ಣಾ ಪಾಟೀಲ ಸಲಹೆ

ಹುಮನಾಬಾದ: ಪಟ್ಟಣದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ರಾಜಕೀಯ ಮಾಡುವುದು ಬೇಡ. ಯಾವುದೇ ಪಕ್ಷ ಭೇದ ಮರೆತು ದೇವರ ಭಕ್ತರಾಗಿ ದೇವಸ್ಥಾನಕ್ಕೆ ಬರಬೇಕು. ಶಿಷ್ಟಾಚಾರಕ್ಕೆ ಅವಕಾಶ ಇಲ್ಲ ಎಂದು ನೂತನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣಾ ಪಾಟೀಲ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಸವಕಲ್ಯಾಣ ಸಹಾಯಕ ಆಯುಕ್ತರ ನೇತೃತ್ವದಲ್ಲಿ ನಡೆದ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಹಾಲಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಎಲ್ಲಾ ರಾಜಕೀಯ ಧುರಿಣರು ಸಹಕರಿಸಬೇಕು. ದೇವಸ್ಥಾನದ ಒಳಗೆ ಕಾಲು ಇರಿಸಿದರೆ ದೇವರ ಭಕ್ತರಾಗಿ ಮಾತ್ರ ಒಳಗೆ ಬರಬೇಕು. ದೇವಸ್ಥಾನದ ಒಳಗೆ ಯಾವುದೇ ರಾಜಕೀಯ, ಶಿಷ್ಟಾಚಾರ ಕುರಿತು ಮನದಲ್ಲಿ ಇರಬಾರದು. ದೇವಸ್ಥಾನದ ಅಭಿವೃದ್ಧಿಗಾಗಿ ಸಂಸದ ಭಗವಂತ ಖೂಬಾ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರನ್ನು ಭೇಟಿಮಾಡಿ ಅಭಿವೃದ್ದಿ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವರಿಕೆ ಮಾಡಲಾಗುವುದು ಎಂದರು.


ದೇವಸ್ಥಾನದಲ್ಲಿ 5.5 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳ ಕ್ರೀಯಾ ಯೋಜನೆ ತಯಾರು ಮಾಡಲಾಗುತ್ತಿದೆ. ಸರ್ಕಾರದ ಹಂತದಲ್ಲಿ ಅನುಮೋದನೆ ಕಾರ್ಯ ನಡೆದಿದೆ. ಅಲ್ಲದೆ, ಮಾಜಿ ಸಚಿವ ರಾಜಶೇಖರ ಪಾಟೀಲರು ಕೂಡ ಮುಜುರಾಜಿ ಸಚಿವರನ್ನು ಭೇಟಿಮಾಡಿ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುವಂತೆ ಮನವರಿ ಮಾಡಿದ್ದಾರೆ. ಸ್ಥಳೀಯ ಶಾಸಕರು ಅನ್ನ ದಾಸೋಹದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದು, ಅವರು ಕೂಡ ಆ ವ್ಯವಸ್ಥೆ ಮಾಡಲು ಮನವಿ ಮಾಡುತ್ತೇವೆ. ಈಗಾಗಲೇ ವಿಧಾನ ಪರಿಷತ್ ಸದಸ್ಯರಾದ ಡಾ| ಚಂದ್ರಶೇಖರ ಪಾಟೀಲ ಅವರ ಅನುದಾನದಲ್ಲಿ ದೇವಸ್ಥಾನದ ಎದುರಿಗೆ ವಿದ್ಯುತ್ ದೀಪಗಳ ವ್ಯವಸ್ಥೆ ನಡೆದಿದೆ. ಅಲ್ಲದೆ, ಇನ್ನೊಬ್ಬ ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲರು 10 ಲಕ್ಷ ಅನುದಾನ ನೀಡಿದ್ದಾರೆ ಎಂದು ವಿವರಿಸಿದ ಅವರು, ಜ.14 ರಿಂದ 26ರ ವರೆಗೆ ವೀರಭದ್ರನ ಜಾತ್ರೆ ನಡೆಯಲ್ಲಿದ್ದು, ಈ ನಿಟ್ಟಿನಲ್ಲಿ ವಿವಿಧ ಸಮಿತಿಗಳ ಪ್ರಮುಖರ ಸಭೆ ನಡೆಸಲಾಲಾಗವುದು. ದೂರದಿಂದ ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ವಿವಿಧ ಇಲಾಖೆಗಳು ಪ್ರತಿವರ್ಷ ಸಲ್ಲಿಸುವ ಕೆಲಸ ಕಾರ್ಯಗಳು ಮಾಡುವಂತೆ ಅಧಿಕಾರಿಗಳಿಗೂ ತಿಳಿಸಲಾಗುವುದು ಎಂದು ತಿಳಿದಿದರು.

ಕಳೆದ ಕೆಲ ದಿನಗಳ ಹಿಂದೆ ಎಸಿ ಅವರ ನೇತೃತ್ವದಲ್ಲಿ ನಡೆದ ಜಾತ್ರಾ ಪೂರ್ವಸಿದ್ಧತಾ ಸಭೆಯಲ್ಲಿ ಕೆಲವರು ಉದ್ದೇಶ ಪೂರ್ವಕವಾಗಿ ಗದ್ದಲ ಎಬ್ಬಿಸುವ ಉನ್ನಾರು ಮಾಡಿದರು. ಪುರಸಭೆ ಮಾಜಿ ಸದಸ್ಯ ಗಿರೀಶ ಪಾಟೀಲ, ಶರಣಪ್ಪ ಗುಡ್ಡ್, ಶ್ರೀನಿವಾಸ ಚವ್ಹಾಣ್ ಸೇರಿದಂತೆ ಕಲವರು ಸಭೆ ಮಾಡಿ ಮಾತನಾಡಿರುವ ಸಂಭಾಷಣೆ, ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ನಿಟ್ಟಿನಲ್ಲಿ ಅಂದು ಪೊಲೀಸ್ ಇಲಾಖೆ ಸೂಕ್ತ ಬಂದೋಸ್ತ ಮಾಡಿದ ಕಾರಣಕ್ಕೆ ಯಾರು ಕೂಡ ಮುಂದೆ ಬಂದಿಲ್ಲ. ದೇವರ ಸ್ಥಾನದಲ್ಲಿ ತಪ್ಪು ಮಾಡುವರಿಗೆ ಉಳಿಗಾಲ ಇಲ್ಲ ಎಂದ  ಹೇಳಿದ ಅವರು, ತಪ್ಪು ಆಲೋಚನೆ ಮಾಡುವರಿಗೆ ದೇವರೆ ನೋಡಿಕೊಳ್ಳುತ್ತಾನೆ ಎಂದರು.

ಈ ಸಂದರ್ಭದಲ್ಲಿ ನೂತನ ಸದಸ್ಯರಿಗೆ ಸನ್ಮಾನಿಸಲಾಯಿತು. ಅಭಿಷೇಕ್ ಪಾಟೀಲ, ಮಲ್ಲಿಕಾರ್ಜುನ ಮಾಳಶೆಟ್ಟಿ, ಸೋಮಶೇಖರ ಬುಳ್ಳಾ, ದತ್ತಕುಮಾರ ಚಿದ್ರಿ, ಕಲಾವತಿ ಬಾಬುಸಿಂಗ್, ಮಹಾದೇವಿ ಗುಳಶೆಟ್ಟಿ, ಮಹೇಶ ಅಗಡಿ, ಗುರು ಪೂಜಾರಿ, ತಹಶಿಲ್ದಾರ ಅಂಜುಮ್ ತಬಾಸುಮ್, ಗ್ರೇಡ್-2 ತಹಶೀಲ್ದಾರ ಮಂಜುನಾಥ ಪಂಚಾಳ, ಬಾಬುರಾವ ಪರಮಶೆಟ್ಟಿ, ಉಮೇಶ ಜಮಗಿ ಸೇರಿದಂತೆ ಅನೇಕರು ಇದ್ದರು.

ವರದಿ: ದುರ್ಯೋಧನ ಹೂಗಾರ

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…