Home ನಿಮ್ಮ ಜಿಲ್ಲೆ ಬೀದರ ಲಾರಿ ಹರಿದು 14 ಕುರಿ ಸಾವು

ಲಾರಿ ಹರಿದು 14 ಕುರಿ ಸಾವು

6 ಕುರಿಗಳು ಗಂಭೀರವಾಗಿ ಗಾಯ

ಬೀದರ: ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆ ದಾಟುವಾಗ ಅಪಘಾತಕ್ಕೆ ಈಡಾಗಿ ಸುಮಾರು 14 ಕುರಿಗಳು ಮೃತಪಟ್ಟಿದ್ದು, 6 ಕುರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಭಿಸಿದೆ.

ಬೀದರ ತಾಲೂಕಿನ ಕೊಳಾರ(ಕೆ) ಗ್ರಾಮದ ಬಾಬು ಮತ್ತು ಅಮೃತಿ ಅವರಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದ್ದು, ಬೀದರ ಕಡೆಯಿಂದ ಹುಮನಾಬಾದ ಕಡೆಗೆ ಸಾಗುತ್ತಿದ ಲಾರಿ ಕುರಿಗಳಿಗೆ ಡಿಕ್ಕಿಮಾಡಿದ ಪರಿಣಾಮ ಸ್ಥಳದಲ್ಲಿಯೇ ಕುರಿಗಳು ಮೃತಪಟ್ಟಿವೆ. ಈ ಕುರಿತು ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…