ಮಾಧ್ಯಮಗಳ ಕಾರ್ಯ ಶ್ಲಾಘನೀಯ : ಎಸ್.ಪಿ ಡಿ.ಎಲ್.ನಾಗೇಶ

ಮಾಧ್ಯಮಗಳ ಕಾರ್ಯ ಶ್ಲಾಘನೀಯ : ಎಸ್.ಪಿ ಡಿ.ಎಲ್.ನಾಗೇಶ
ಬೀದರ: ದೇಶದ ಆಡಳಿತದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಜೊತೆಗೆ ಪತ್ರಿಕಾ ರಂಗವು ತನ್ನದ ಆದ ಸ್ಥಾನ ಹೊಂದಿದ್ದು, ಸರ್ಕಾರ ಹಾಗೂ ಸಮಾಜದ ನಡುವೆ ಸೇತುವೆ ನಿರ್ಮಿಸುವ, ಸಾಮಾನ್ಯ ಜನರ ಧ್ವನಿಯನ್ನು ಆಡಳಿತ ಹಾಗೂ ಜನಪ್ರತಿನಿಧಿಗಳ ಕಿವಿಗೆ ತಲುಪಿಸುವ ಸಂದೇಶ ವಾಹಕ ಕಾರ್ಯ ಪತ್ರಿಕಾರಂಗ ಮಾಡುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ತಿಳಿಸಿದರು.
ನಗರದ ಎಸ್.ಆರ್.ಎಸ್. ಫಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋವಿಡ್-19 ಈ ಸಂದಿಗ್ದ ಸ್ಥಿತಿಯಲ್ಲಿ ವೈದ್ಯರು, ಪೊಲೀಸರ ಜೊತೆಗೆ ಪತ್ರಕರ್ತರು ಕೋವಿಡ್ ವಾರಿರ್ಯಸ್‌ಗಳಾಗಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿದ್ದಾರೆ. ಈಗಾಗಲೆ ಅನೇಕ ಜನ ಈ ಮಹಾಮಾರಿಗೆ ಬಲಿಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಕೋವಿಡ್-19 ವಿದಾಯಕ್ಕೆ ಪತ್ರಕರ್ತರು ಸರ್ಕಾರದ ಜೊತೆ ಕೈಜೋಡಿಸಿ, ತಮ್ಮ ಕೌಟಿಂಬಿಕ ಭದ್ರತೆಯೊಂದಿಗೆ ಸರ್ಕಾರದ ನಿಯಮಗಳನ್ನು ಜನ ಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಜವಾಬ್ದಾರಿ ಮುಂದುವರೆಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಮಾತನಾಡಿ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಶುದ್ದೀಕರಣಕ್ಕೆ ಪತ್ರಕರ್ತರ ಸೇವೆ ಅಗತ್ಯವಾಗಿದೆ. ದೇಶದ ಸ್ವಾತಂತ್ರö್ಯ ಪಡೆಯಲು ಹಾಗೂ ದೇಶದ ಅಭಿವೃದ್ಧಿಗೆ ಪತ್ರಕರ್ತರ ಸೇವೆ ಅನನ್ಯವಾಗಿದೆ. ಯಾವುದೇ ಸಂದರ್ಭದಲ್ಲಿ ಕೂಡ ಹಿಂದೆ ಸರಿಯದೆ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ತ್ಯಾಗ ಬಹಳಷ್ಠಿದೆ ಎಂದು ಬಣ್ಣಿಸಿದರು.
ಸಾನ್ನಿಧ್ಯ ವಹಿಸಿದ ಪ್ರಜಾಪೀತಾ ಬ್ರಹ್ಮಾಕುಮಾರಿ ಈಶ್ವರ್ರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನಜಿ ಮಾತನಾಡಿ, ಸಕಾರತ್ಮಕ ಪತ್ರಿಕೆಯಿಂದ ಶಸಕ್ತ ಭಾರತ ನಿರ್ಮಾಣ ಸಾಧ್ಯವಿದೆ. ಪತ್ರಕರ್ತರ ಕಾರ್ಯ ಪರಮಾತ್ಮನ ಕಾರ್ಯಕ್ಕೆ ಸಮಾನವಾಗಿದ್ದು ತಮ್ಮ ವೃತ್ತಿಯಲ್ಲಿ ಅಧ್ಯಾತ್ಮ ಹಾಗೂ ರಾಜಯೋಗ ತತ್ವದ ತಳಹದಿಯಲ್ಲಿ ಕಾರ್ಯ ಮುಂದುವರೆಸಿದರೆ ಸಶಕ್ತ ಪತ್ರಕರ್ತರಾಗಲು
ಸಾಧ್ಯವಿದೆ. ಕೋರೋನ ಮಾಹಮಾರಿ ಸಂದೇಶ ಸಮಾಜದ ಎಲ್ಲಾ ಸ್ಕರಗಳಿಗೆ ಬಿತ್ತರಿಸುವ ಮೂಲಕ ಅದಕ್ಕೆ ಅಂತ್ಯ ಹಾಡಲು ಮುಂದೆ ಬರಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿ, ಪತ್ರಕರ್ತರಿಗೆ ಆಯುಷ್ಮಾನ ಭಾರತ ಅಡಿಯಲ್ಲಿ ಸುಮಾರು 5 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ, ಪ್ರಯಾಣದ ಉಚಿತ ಬಸ್ ಪಾಸ್, ನಿವೇಶನ, ನಿವೃತ್ತಿ ವೇತನ ಸೇರಿದಂತೆ ಇತರೆ ಸೌಕರ್ಯಗಳು ಮಾಧ್ಯಮ ಪಟ್ಟಿಯಲ್ಲಿರುವ ಹಾಗೂ ಮಾಧ್ಯಮ ಪಟ್ಟಿಯಲ್ಲಿ ಇರದ ಪತ್ರಕರ್ತರಿಗೂ ಸಿಗಲಿದೆ ಎಂದು ವಿವರಿಸಿದರು. ಜಿಲ್ಲೆಯ ಹಿರಿಯ ಪತ್ರಕರ್ತ ಗಂಧರ್ವ ಸೇನಾ ಮಾತನಾಡಿದರು. ಕ.ಕಾ.ಪ.ಸಂಘದ ರಾಜ್ಯ ಪ್ರತಿನಿಧಿ ಬಸವರಾಜ ಕಾಮಶೆಟ್ಟಿ ಹಾಗೂ ಪತ್ರಕರ್ತ ಡಿ.ಕೆ ಗಣಪತಿ ವೇದಿಕೆಯಲ್ಲಿದ್ದರು.
ಇದೇ ವೇಳೆ ಇತ್ತಿಚಿಗೆ ಕೋವಿಡ್ -19ಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತ ದಿ.ಪ್ರಭುಶೆಟ್ಟಿ ಸೈನಿಕಾರ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಅಲ್ಲದೆ, ಸಾಧನೆ ಮಾಡಿದ ವಿವಿಧ ಪತ್ರಕರ್ತರಿಗೆ ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಧರಂಪುರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ಚೌದ್ರಿ, ದೀಪಕ ಮನ್ನಳ್ಳಿ, ಪ್ರಥ್ವಿರಾಜ್ .ಎಸ್. ಸುನೀಲ ಕುಲಕರ್ಣಿ, ಯಾದುಲ್ಲಾ ಹುಸೇನಿ, ಶರಣಪ್ಪ ಚಿಟ್ಮೆ, ಶಿವಶರಣಪ್ಪ ಹುಗಾರ, ಸುಧಾಕರ ಸೂರ್ಯವಂಶಿ ಸೇರಿದಂತೆ ಸಂಘದ ವಿವಿಧ ತಾಲೂಕಾಗಳಿಂದ ಆಗಮಿಸಿದ ಪದಾಧಿಕಾರಿಗಳು ,ಸದಸ್ಯರು ಸ್ಥಳೀಯ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
![]()
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















