Home ನಿಮ್ಮ ಜಿಲ್ಲೆ ಬೀದರ ಮಹಾನಗರಪಾಲಿಕೆಯಾದ ಬೀದರ್ ನಗರಸಭೆ

ಮಹಾನಗರಪಾಲಿಕೆಯಾದ ಬೀದರ್ ನಗರಸಭೆ

ಕೇಂದ್ರ ಸಚಿಬ ಭಗವಂತ ಖುಭಾ ಅವರಿಂದ‌ ಜಿಲ್ಲೆಯ ಜನರಿಗೆ ಬಂಪರ್ ಗಿಫ್ಟ್

ರಾಜ್ಯ ಬಜೆಟ್ ನಲ್ಲಿ ಬೀದರ್ ನಗರಸಭೆಗೆಯನ್ನ ನಗರಪಾಲಿಕೆಯಾಗಿ‌ ಮಾಡಿ ಸಿಎಂ ಘೋಷಣೆ..

ಇಂದು ಮಂಡನೆಯಾದ ಬಜೆಟ್ ನಲ್ಲಿ ಕೇಂದ್ರ

ಕೇಂದ್ರ ಸಚಿವ ಭಗವಂತ ಖೂಭಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬರೆದ ಪತ್ರದ ಪ್ರತಿ

ಸಚಿವ ಭಗವಂತ ಖೂಭಾ ಅವರ ಆಸಕ್ತಿಯಿಂದಾಗಿ ಅವರು ಮುಖ್ಯಮಂತ್ರಿ ಗೆ ಬರೆದ ಪತ್ರದ ಹಿನ್ನಲೆ ಇಂದು ರಾಜ್ಯದ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಂಡಿಸಿದ ಬಜೆಟ್ ನಲ್ಲಿ ಬೀದರ್ ನಗರಸಭೆಯನ್ನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಅಂತ ಮುಖ್ಯಮಂತ್ರಿ ಬಸ್ವರಾಜ್ ಬೊಮ್ಮಾಯಿ‌ ಘೋಷಣೆ ಮಾಡಿದ್ದಾರೆ.ಇದು ಬೀದರ್ ಜಿಲ್ಲೆಯ ಬಹು ದಶಕರದ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದನೆ ಮಾಡಿದ್ದು ಬೀದರ್ ನಗರಸಭೆ ನಗರಪಾಲಿಕೆ ಯಾಗಿದ್ದು ಬರುವ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಅನುದಾನ ಹರಿದು ಬರಲು ಸಹಕಾರಿಯಾಗಲಿದೆ.ವಿಶೇಷವಾಗಿ  ಕೇಂದ್ರ ಸಚಿವ ಭಗವಂತ ಖುಭಾ ಅವರ ಆಸಕ್ತಿಯಿಂದ ಬೀದರ್ ನಗರಸಭೆ ಇಗ ನಗರ ಪಾಲಿಕೆಯಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಅವರನ್ನ ಅಭಿನಂಧನೆ ತಿಳಿಸಿದ್ದಾರೆ..

ಬೀದರ್ ನಗರಪಾಲಿಕೆ ಯಾದ ಬೆನ್ನಲ್ಲೆ ಅನುದಾನ ಹೆಚ್ಚಲಿದ್ದು ನಗರಪಾಲಿಕೆ ಸದಸ್ಯರ ಸಂಖ್ಯೆ ಬರುವ ದಿನದಲ್ಲಿ ಹೆಚ್ಚಲಿದೆ ಅಂತಾರೆ ಇಲ್ಲಿನ ಸದಸ್ಯರು..

ರಾಜ್ಯ ಬಜೆಟ್ ನಲ್ಲಿ ಬೀದರ್ ನಗರಸಭೆಯನ್ನ ನಗರ‌ಪಾಲಿಕೆ ಮಾಡಿರುವ ಕಾರ್ಯಕ್ಕೆ ಚಿಟಗುಪ್ಪಾ ಬಿಜೆಪಿ ಮುಖಂಡರಾದ ‌ಮಲ್ಲಿಕಾರ್ಜುನ‌ಪಾಟೀಲ್ ಸೇರಿದಂತೆ ಹಲವರು ಕೇಂದ್ರವಸಚಿವ ಭಗವಂತ ಖೂಭಾ ಹಾಗೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ‌ ಯವರಿಗೆ ಅಭಿನಂದನೆ ತಿಳಿಸಿದ್ದಾರೆ..

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…