Home ನಿಮ್ಮ ಜಿಲ್ಲೆ ಬೀದರ ಮನೆ ಬಾಗಿಲಿಗೆ ಬರಲಿದೆ ಪಿಂಚಣಿ ಯೋಜನೆ ಮಾಹಿತಿ : ಸಚಿವ ಆರ್.ಅಶೋಕ.

ಮನೆ ಬಾಗಿಲಿಗೆ ಬರಲಿದೆ ಪಿಂಚಣಿ ಯೋಜನೆ ಮಾಹಿತಿ : ಸಚಿವ ಆರ್.ಅಶೋಕ.

ಮನೆ ಬಾಗಿಲಿಗೆ ಬರಲಿದೆ ಪಿಂಚಣಿ ಯೋಜನೆ ಮಾಹಿತಿ : ಸಚಿವ ಆರ್.ಅಶೋಕ.

ಬೀದರ: 60 ವರ್ಷ ಪೂರೈಸಿದ ವಯೋವೃದ್ಧರಿಗೆ ಸರ್ಕಾರದ ಪಿಂಚಣಿ ಯೋಜನೆಯ ಕುರಿತು ಸರ್ಕಾರದಿಂದ ಅರ್ಹರ ಮನೆಗೆ ಪತ್ರ ಕಳಿಸುವ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಲಭವಾಗಿ ಅರ್ಹರಿಗೆ ಪಿಂಚಣಿ ದೊರೆಯಬೇಕೆಂಬ ನಿಟ್ಟಿನಲ್ಲಿ ಯೋಜನೆ ಜಾರಿ ಮಾಡಲಾಗುತ್ತಿದ್ದು, 60 ವರ್ಷ ಪೂರೈಸಿದ ವ್ಯಕ್ತಿಗಳ ಚಿತ್ರ ತೆಗೆದುಕೊಂಡು ಪಿಂಚಣಿ ನೀಡುವ ಕಾರ್ಯ ಆರಂಭಿಸಲಾಗುತ್ತದೆ. ಇತರೆ ಯಾವುದೇ ದಾಖಲೆಗಳ ಅವಶ್ಯಕತೆ ಇರುವುದಿಲ್ಲ ಎಂದು ಸ್ಪuಷ್ಟಪಡಿಸಿದ್ದಾರೆ.

ಸದ್ಯ ಅಂಚೆ ಕಚೇರಿಗಳ ಮೂಲಕ ಪಿಂಚಣಿ ನೀಡಲಾಗುತ್ತಿದ್ದು, ಕೆಲವು ಕಡೆ ದೂರುಗಳು ಕೇಳಿ ಬರುತ್ತಿವೆ. ಎರೆಡು ತಿಂಗಳು ಮೂರು ತಿಂಗಳ ಕಾಲ ಪಿಂಚಣಿ ಬಂದಿಲ್ಲ ಎಂಬ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಮುಂದಿನ ದಿನಗಳಲ್ಲಿ ನೇರವಾಗಿ ಬ್ಯಾಂಕ್ ಮೂಲಕವೇ ಹಣ ದೊರೆಯುವಂತೆ ಮಾಡಲಾಗುವುದು. ನೇರವಾಗಿ ಪಿಂಚಣಿದಾರರ ಖಾತೆಗೆ ಹಣ ಜಮಾ ಆಗುವುದರಿಂದ ಭ್ರಷ್ಟಾಚಾರ ನಿಲ್ಲುತ್ತದೆ ಎಂದು ಹೇಳಿದರು.

ಕಡ್ಡಾಯ ಆಧಾರ್ ಜೋಡಣೆ.
ಅರ್ಹ ಫಲಾನುಭವಿಗಳಿಗೆ ಪಿಂಚಣಿ ಯೋಜನೆ ಲಭ್ಯವಾಗುವ ನಿಟ್ಟಿನಲ್ಲಿ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಲಾಗುತ್ತಿದೆ. ಈ ಮೂಲಕ ನಕಲಿ ಪಿಂಚಣಿದಾರರನ್ನು ಪತ್ತೆಹಚ್ಚಿ ಪಿಂಚಣಿ ಬಂದ್ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…