ಮನೆಗಳಲ್ಲಿ ನಮಾಜ್ ಮಾಡಿ ಹಬ್ಬ ಆಚರಿಸಿದ ಮುಸ್ಲಿಂ ಬಾಂಧವರು
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾಮೂಹಿಕ ಪ್ರಾರ್ಥನೆ ಇಲ್ಲ.
ಮನೆಗಳಲ್ಲಿ ನಮಾಜ್ ಮಾಡಿ ಹಬ್ಬ ಆಚರಿಸಿದ ಮುಸ್ಲಿಂ ಬಾಂಧವರು
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾಮೂಹಿಕ ಪ್ರಾರ್ಥನೆ ಇಲ್ಲ.

ಬೀದರ: ಜಿಲ್ಲೆಯಾದ್ಯಂತ ರಂಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ನಮಾಜ್ ಮಾಡಿ ಹಬ್ಬ ಆಚರಿಸಿದರು.
ಕೊರೊನಾ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಗಳು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈ ಬಾರಿ ರಂಜಾನ್ ಹಬ್ಬದ ಸಾಮೂಹಿಕ ನಮಾಜ್ ಮಾಡದೆ ಮುಸ್ಲಿಂ ಭಾಂಧವರು ತಮ್ಮ ಮನೆಗಳಲ್ಲಿ ನಮಾಜ್ ಮಾಡುವ ಮೂಲಕ ಸರ್ಕಾರಗಳ ಆದೇಶ ಪಾಲನೆ ಮಾಡಿದ್ದಾರೆ.

ಹುಮನಾಬಾದ, ಹಳ್ಳಿಖೇಡ ಬಿ, ಚಿಟಗುಪ್ಪ ಪಟ್ಟಣಗಳಲ್ಲಿನ ಈದ್ಗಾಗಳ ಹತ್ತಿರ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ ಈ ಬಾರಿ ಮನೆಯಲ್ಲಿಯೆ ದೇವರನ್ನು ಪ್ರಾರ್ಥಿಸುವಂತೆ ತಿಳಿಸಿದ ಪ್ರಸಂಗಗಳು ನಡೆದವು. ಹಳ್ಳಿಖೇಡ ಬಿ ಪುರಸಭೆ ವ್ಯಾಪ್ತಿಯಲ್ಲಿ ಸೋಂಕು ಪತ್ತಾಯದ ಹಿನ್ನೆಲೆಯಲ್ಲಿ ಅಲ್ಲಿನ ಪುರಸಭೆ ಮುಖ್ಯಾಧಿಕಾರಿ ಯೂಸುಫ್ ವಿವಿಧೆಡೆ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಹಬ್ಬದ ನಿಮಿತ್ಯ ಯಾರು ಪರಸ್ಪರ ಅಪ್ಪಿಕೊಳ್ಳುವುದು ಹಾಗೂ ಕೈ ಮಿಲಾಯಿಸು ವುದು ಬೇಡ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದು, ಪಟ್ಟಣದ ಜನರಲ್ಲಿ ಸಂತಸ ಮೂಡಿಸಿದೆ.
Date:25-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















