Home ನಿಮ್ಮ ಜಿಲ್ಲೆ ಬೀದರ ಬೆಂಗಳೂರಿನಲ್ಲಿ  ಬಿಡಾರ ಹೂಡಿದ  ಟಿಕೆಟ್ ಆಕಾಂಕ್ಷಿಗಳು

ಬೆಂಗಳೂರಿನಲ್ಲಿ  ಬಿಡಾರ ಹೂಡಿದ  ಟಿಕೆಟ್ ಆಕಾಂಕ್ಷಿಗಳು

ಬಸವಕಲ್ಯಾಣ ಉಪ-ಚುನಾವಣೆ

ಬಸವಕಲ್ಯಾಣ ಉಪ-ಚುನಾವಣೆ
ಬೆಂಗಳೂರಿನಲ್ಲಿ  ಬಿಡಾರ ಹೂಡಿದ  ಟಿಕೆಟ್ ಆಕಾಂಕ್ಷಿಗಳು

ಬೆಂಗಳೂರು: ಮುಂದೆ ನಡೆಯಲ್ಲಿರುವ ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಸವಕಲ್ಯಾಣ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಹಾಗೂ ಪಕ್ಷದ ಮುಖಂಡರು ಬೆಂಗಳೂರಿನಲ್ಲಿ ಬಿಡಾರ ಹೂಡಿದ್ದು, ಗುರುವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಭೇಟಿಮಾಡಿ ಉಪ ಚುನಾವಣೆ ಕುರಿತು ಚರ್ಚೆ ನಡೆಸಿದರು.

https://play.google.com/store/apps/details?id=kknewsonline.inಚುನಾವಣೆಯ ತಂತ್ರಗಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಗ್ರ ಚರ್ಚೆಗಳು ನಡೆದಿದ್ದು, ಬಸವಕಲ್ಯಾಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ, ಮುಂಬರುವ ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ವಿಜಯೇಂದ್ರ ಅವರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಬಸವಕಲ್ಯಾಣ ಕ್ಷೇತ್ರದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಪ್ರೋತ್ಸಾಹ ನೀಡಬೇಕು. ಬೇರೆಕಡೆಗಳಿಂದ ಬಂದ ಮುಖಂಡರಿಗೆ ಪಕ್ಷ ಮಣೆ ಹಾಕಬಾರದು ಎಂದು ಸ್ಥಳಿಯ ಎಲ್ಲಾ ಆಕಾಂಕ್ಷೆಗಳು ಒಗ್ಗಟ್ಟಿನ ಪ್ರದರ್ಶನ ಬೆಂಗಳೂರಿನಲ್ಲಿ ನಡೆಸಿದ್ದು, ಬಿಜೆಪಿ ಮುಖಂಡರು ಹಾಗೂ ವಿವಿಧ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕೇಂದ್ರ ಆಹಾರ ನಿಗಮ ಮಂಡಳಿ ಸದಸ್ಯ ಉಮೇಶ ಬಿರಬಿಟ್ಟೆ, ಜಿಲ್ಲಾ ಪಂಚಾಯತ ಸದಸ್ಯ ಗುಂಡುರೆಡ್ಡಿ, ಅನೀಲ ಭೂಸಾರೆ, ಪಟವಾರಿ, ಪದ್ಮಾಕರ್ ಪಾಟೀಲ ಸೇರಿದಂತೆ ಅನೇಕರು ಇದ್ದರು.

Date: 26-11-2020 : www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…